ನವದೆಹಲಿ –
ದೆಹಲಿಯಲ್ಲಿದ್ದರೂ ಜಗದೀಶ್ ಶೆಟ್ಟರ್ ರನ್ನು ಪಕ್ಷಕ್ಕೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಕಾಣಿ ಸಿಕೊಳ್ಳದ ಪ್ರಹ್ಲಾದ್ ಜೋಶಿ,ಅರವಿಂದ ಬೆಲ್ಲದ – ದೆಹಲಿಯಲ್ಲಿದ್ದರೂ ಶೆಟ್ಟರ್ ಸ್ವಾಗತ ಕಾರ್ಯಕ್ರ. ಮದಿಂದ ದೂರವಾಗಿದ್ದೇಕೆ ಜಿಲ್ಲೆಯ ಆ ಇಬ್ಬರು ನಾಯಕರು ಹುಟ್ಟು ಹಾಕಿದೆ ಹಲವು ಅನುಮಾ ನಗಳನ್ನು ಹೌದು
ಹೌದು ಸಾಮಾನ್ಯವಾಗಿ ಪಕ್ಷಕ್ಕೆ ಯಾವುದೇ ಒಬ್ಬರು ಬರುತ್ತಾರೆ ಎಂದರೆ ಅವರನ್ನು ಸ್ವಾಗತ ಮಾಡೊದು ಬರಮಾಡಿಕೊಳ್ಳೊದು ಒಂದು ಸಂಪ್ರದಾಯ ಅದರಲ್ಲೂ ಹಿರಿಯ ನಾಯಕ ರೊಬ್ಬರು ಮರಳಿ ಪಕ್ಷಕ್ಕೆ ಬರುತ್ತಾರೆ ವಿಶೇಷವಾಗಿ ಕ್ಷೇತ್ರದವರೇ ಎಂದರೆ ನಿಂತುಕೊಂಡು ಬರಮಾ ಡಿಕೊಳ್ಳಬೇಕು ಸ್ವಾಗತಿಸಬೇಕು
ಹೀಗಿರುವಾಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿನ್ನೆಯಷ್ಟೇ ದೆಹಲಿಯಲ್ಲಿ ಮತ್ತೆ ಬಿಜೆಪಿ ಪಕ್ಷಕ್ಕೆ ಸೆರ್ಪೇಡೆಯಾಗಿದ್ದಾರೆ.ಈ ಒಂದು ಬೆಳವ ಣಿಗೆಯ ಬೆನ್ನಲ್ಲೇ ಸಧ್ಯ ಹೊಸದೊಂದು ಚರ್ಚೆ ಯನ್ನು ದೆಹಲಿಯ ಬಿಜೆಪಿ ರಾಜಕಾರಣ ಹುಟ್ಟು ಹಾಕಿದೆ ಹೌದು ಜಗದೀಶ್ ಶೆಟ್ಟರ್ ಪಕ್ಷಕ್ಕೆ ಮರಳಿ ಸೇರ್ಪಡೆಯಾಗುತ್ತಿರುವ ಸಮಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ ಧಾರವಾಡ ಪಶ್ಛಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ದೆಹಲಿಯಲ್ಲಿದ್ದರು
ಹೀಗಿರುವಾಗ ಜಿಲ್ಲೆಯ ಹಿರಿಯ ನಾಯಕರೊ ಬ್ಬರು ಮರಳಿ ಗೂಡು ಸೇರುತ್ತಿದ್ದಾರೆ ಎಂದು ಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿ ಉಪಸ್ಥಿತರಿರಬೇಕಾಗಿತ್ತು ಹೀಗಿರುವಾಗ ಇವರ ಗೈರು ಅನುಪಸ್ಥಿತಿ ಈಗ ಬಹುದೊಡ್ಡ ಚರ್ಚೆಗೆ ವೇದಿಕೆಯನ್ನು ಮಾಡಿಕೊಟ್ಟಿದೆ.
ಈ ಇಬ್ಬರು ನಾಯಕರು ದೆಹಲಿಯಲ್ಲಿದ್ದರೂ ಕೂಡಾ ಯಾಕೇ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ದೂರ ಉಳಿದಿದ್ದು ಯಾಕೇ ಕಾರಣ ಏನು ಶೆಟ್ಟರ್ ಘರ್ ವಾಪ್ಸಿ ವಿಚಾರದಲ್ಲಿ ಜೋಶಿಯವರಿಗೆ ಏನಾದರೂ ಹಿನ್ನಡೆಯಾಗಿ ದೆಯಾ ಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬೇರೆ ಏನಾದರೂ ಮಹತ್ವದ ಚರ್ಚೆಯಾಗಿದೆಯಾ
ಹೀಗೆ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೇಸ್ ಪಕ್ಷಕ್ಕೆ ಬಿಟ್ಟು ಹೋದ ನಂತರ ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ನಡುವೆ ಟಾಕ್ ಆಫ್ ವಾರ್ ನಡೆದಿತ್ತು ಹೀಗಿರು ವಾಗ ಸಧ್ಯ ರಾಜಕೀಯದಲ್ಲಿ ಮತ್ತೆ ಬೇರೆ ಬೇರೆ ಬೆಳವಣಿಗೆ ನಡೆದಿದ್ದು ಈ ಒಂದು ಬೆಳವಣಿಗೆಯ ಹಿಂದೆ ಮುಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಸಾಕಷ್ಟು ಪ್ರಭಾವಿಯಾಗಿ ಕೆಲಸ ಕಾರ್ಯಗಳಲ್ಲಿ ವೇಗವಾಗಿ ಚುರುಕಾಗಿದ್ದ
ಪ್ರಹ್ಲಾದ್ ಜೋಶಿಯವರನ್ನು ಕಟ್ಟಿ ಹಾಕಲು ಏನಾದರೂ ಪ್ಲಾನ್ ಆಗಿದೆಯಾ ಪ್ರಮುಖವಾಗಿ ಜಗದೀಶ್ ಶೆಟ್ಟರ್ ಸ್ವಾಗತ ಕಾರ್ಯಕ್ರಮದಿಂದ ದೂರು ಉಳಿದಿದ್ದು ಯಾಕೇ ಕಾರಣ ಏನು ಹೀಗೆ ಹಲವಾರು ಪ್ರಶ್ನೆಗಳು ಸಧ್ಯ ಕಾಡುತ್ತಿದ್ದು ಇದರ ಹಿಂದೆ ಏನೋ ಇದೆ ಎಂಬ ಅನುಮಾನದ ಪ್ರಶ್ನೆಗಳು ಸಧ್ಯ ಬಿಜೆಪಿಯ ಪಡಶಾಲೆಯಲ್ಲಿ ಮತ್ತು ಧಾರವಾಡ ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಕೇಳಿ ಬರುತ್ತಿದ್ದು
ಇದಕ್ಕೇಲ್ಲ ಬರುವ ಲೋಕಸಭಾ ಚುನಾವಣೆಯ ಟೆಕೇಟ್ ಹಂಚಿಕೆಯಲ್ಲಿ ಉತ್ತರ ಸಿಗಲಿದ್ದು ಕಾದು ನೋಡಬೇಕಾಗಿದೆ.ಒಟ್ಟಾರೆ ಅಭಿವೃದ್ದಿ ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವಿಯಾಗಿ ವೇಗ ವಾಗಿ ಹೋರಟಿದ್ದ ಪ್ರಹ್ಲಾದ್ ಜೋಶಿ ಯವರನ್ನು ಕಟ್ಟಿ ಹಾಕಲು ಏನೋ ತಂತ್ರಗಾರಿಕೆ ಮಾಡಿದ್ದಾರೆ ಎಂಬ ಅನುಮಾನ ಕಾಡುತ್ತಿದ್ದು ಇದಕ್ಕೆ ಶಾಸಕ ಅರವಿಂದ ಬೆಲ್ಲದ ರನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..