ವಿಜಯನಗರ –
ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಯಶಸ್ವಿಗೊಳಿಸಿ ವಿಜಯನಗರದಲ್ಲಿ ಜಿಲ್ಲಾ ಶಾಖೆಯಿಂದ ಪ್ರಚಾರ – ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ತೆರಳಿ ಕರಪತ್ರ,ಸ್ಟಿಕರ್ ಗಳನ್ನು ನೀಡಿ ಆಮಂತ್ರಣ ನೀಡಿದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ,ಪ್ರಧಾನ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ ನೇತ್ರತ್ವದಲ್ಲಿನ ಜಿಲ್ಲಾ ಟೀಮ್
ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಕಾರ್ಯ ಕ್ರಮ ನಡೆಯಲಿದೆ.ಐತಿಹಾಸಿಕ ಈ ಒಂದು ಸಮಾರಂಭಕ್ಕೆ ರಾಜ್ಯದ ತುಂಬೆಲ್ಲಾ ಸರ್ಕಾರಿ ನೌಕರರು ಸಿದ್ದರಾಗುತ್ತಿದ್ದು ಈ ನಡುವೆ ವಿಜಯ ನಗರದಲ್ಲಿ ಕೂಡಾ ಜಿಲ್ಲಾ ಸಂಘಟನೆ ಸಜ್ಜಾಗು ತ್ತಿದೆ.
ಇದರೊಂದಿಗೆ ಜಿಲ್ಲೆಯ ಸರ್ಕಾರಿ ನೌಕರರಿಗೆ ಈ ಒಂದು ಕುರಿತಂತೆ ಆಮಂತ್ರಣವನ್ನು ನೀಡುತ್ತಾ ಮಹಾ ಸಮ್ಮೇಳನದ ಬಗ್ಗೆ ಪ್ರಚಾರವನ್ನು ಮಾಡಿದ್ದು ಕಂಡು ಬಂದಿತು.ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಜಯನಗರ ಜಿಲ್ಲಾ ಶಾಖೆ ಯಿಂದ ಜಿಲ್ಲೆಯಲ್ಲಿ ಮಹಾ ಸಮ್ಮೇಳನ ಕುರಿತಂತೆ ಪ್ರಚಾರವನ್ನು ಮಾಡ ಲಾಯಿತು.
ವಿಜಯನಗರ ಜಿಲ್ಲೆಯ ಎಲ್ಲಾ ವೃಂದ ಸಂಘಗಳ ಅಧ್ಯಕ್ಷರು,ಕಾರ್ಯದರ್ಶಿ,ಪದಾಧಿಕಾರಿಗಳ ಸಭೆಯನ್ನು ನಡೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ವಿಜಯನಗರ ಜಿಲ್ಲೆಯಿಂದ ಭಾಗವಹಿಸಿ ಯಶಸ್ವಿ ಮಾಡುವ ಬಗ್ಗೆ ಚರ್ಚಿ ಜಿಲ್ಲೆಯ ನೌಕರರಿಗೆ ಮಾಹಿತಿಯೊಂ ದಿಗೆ ಕರೆಯನ್ನು ನೀಡಲಾಯಿತು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,ಸಹಾಯಕ ಆಯುಕ್ತರ ಕಚೇರಿ, ಕಾರ್ಯನಿರ್ವಾಹಕ ಅಧಿ ಕಾರಿಗಳು ತಾಲೂಕು ಪಂಚಾಯತಿ ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕರಪತ್ರ, ಸ್ಟಿಕರ್ ಗಳನ್ನು ಅಂಟಿಸಿ ಸರ್ವ ನೌಕರರು ಭಾಗವಹಿಸಲು ಸಂಘದ ವತಿಯಿಂದ ವಿನಂತಿಸಲಾಯಿತು
ಈ ಒಂದು ಸಮಯದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಿ, ಮಲ್ಲಿಕಾರ್ಜುನ ಗೌಡ ಪ್ರಧಾನ ಕಾರ್ಯದರ್ಶಿಗಳಾದ ಕಡ್ಲಿ ವೀರಭದ್ರೇಶ,ಜಿಲ್ಲಾ ಖಜಾಂಚಿ ರಾಘವೇಂದ್ರ ಹೆಗಡಿಯಾಳ,ರಾಜ್ಯ ಪರಿಷತ್ ಸದಸ್ಯರಾದ ಎಸ್, ಬಸವರಾಜ ಸೇರಿದಂತೆ ವಿಜಯನಗರ ಜಿಲ್ಲಾ ಶಾಖೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ವಿಜಯನಗರ…..