ಬೆಂಗಳೂರು –
ಮಾರ್ಚ್ ನಲ್ಲಿ ಹೆಚ್ಚಾಗಲಿದೆ ತುಟ್ಟಿಭತ್ಯೆ -ಶೇ 4 ರಷ್ಟು ಹೆಚ್ಚಳದೊಂದಿಗೆ ಸರ್ಕಾರಿ ನೌಕರರಿಗೆ ಸಿಗಲಿದೆ ಗುಡ್ ನ್ಯೂಸ್…..ಹೌದು
ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲು ಮುಂದಾಗಿದೆ.ಹೌದು
ಸರ್ಕಾರಿ ನೌಕರರಿಗೆ ಮಾರ್ಚ್’ನಲ್ಲಿ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡುತ್ತಿದೆ.ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಪಡೆಯಬ ಹುದು.
ಕೇಂದ್ರವು ಮಾರ್ಚ್ 2024ರಲ್ಲಿ ತುಟ್ಟಿಭತ್ಯೆಯಲ್ಲಿ (DA) ಶೇಕಡಾ 4ರಷ್ಟು ಹೆಚ್ಚಳವನ್ನು ಘೋಷಿಸ ಲಿದೆ.4% ಡಿಎ ಹೆಚ್ಚಳದ ನಂತರ, ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವು ಶೇಕಡಾ 50ಕ್ಕೆ ಹೆಚ್ಚಾ ಗುತ್ತದೆ.ಅಖಿಲ ಭಾರತ CPI-IW ದತ್ತಾಂಶದ ಆಧಾರದ ಮೇಲೆ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (DR)ಹೆಚ್ಚಳದ ಪ್ರಮಾಣವನ್ನ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.
ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (CPI-IW) 12 ತಿಂಗಳ ಸರಾಸರಿ 392.83 ರಷ್ಟಿದೆ. ಇದರ ಪ್ರಕಾರ, ಡಿಎ ಮೂಲ ವೇತನದ ಶೇಕಡಾ 50.26 ಕ್ಕೆ ಬರುತ್ತಿದೆ.ಅಂದ ಹಾಗೆ ಸರ್ಕಾರಿ ನೌಕರರಿಗೆ ಡಿಎ ನೀಡಲಾಗುತ್ತದೆ ಮತ್ತು ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ.ಡಿಎ ಮತ್ತು ಡಿಆರ್’ನ್ನ ವರ್ಷಕ್ಕೆ ಎರಡು ಬಾರಿ ಹೆಚ್ಚಿ ಸಲಾಗುತ್ತದೆ.ಅದು ಕೂಡ ಜನವರಿ ಮತ್ತು ಜುಲೈ ನಲ್ಲಿ ನಡುವೆ.
ಇನ್ನೂ ಇದು ಒಂದು ವಿಚಾರವಾ ದರೆ ಇತ್ತ ರಾಜ್ಯ ಸರ್ಕಾರಿ ನೌಕರರಿಗೆ ನಮ್ಮ ರಾಜ್ಯ ದಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನಗೆಳ ಅನುಷ್ಠಾನದ ಅಬ್ಬರದ ನಡುವೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಸೇರಿದಂತೆ ಯಾವುದೇ ಬೇಡಿಕೆ ಗಳನ್ನು ನೌಕರರಿಗೆ ಈಡೇರಿಸುತ್ತಿಲ್ಲ ಹೀಗಾಗಿ ನೌಕರರು ಅಸಮಾಧಾನಗೊಂಡಿದ್ದಾರೆ.
ಮೇಲಿಂದ ಮೇಲೆ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಹಿ ಸುದ್ದಿ ಅಂತಾ ಕೇಳೊದು ಆಗಿದ್ದು ನಮಗೆ ಯಾವಾಗ ಈ ಒಂದು ಸುದ್ದಿ ಸಿಗುತ್ತದೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉತ್ತರಿಸಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..