ಕುರುಬ ಸಮುದಾಯಕ್ಕೆ SC ಮೀಸಲಾತಿಗೆ ಒತ್ತಾಯ – ಹೋರಾಟದಲ್ಲಿ ಪಾಲ್ಗೊಂಡ K R ಪುರಂ ಇನ್ಸ್ಪೆಕ್ಟರ್…..!

Suddi Sante Desk

ಬೆಂಗಳೂರು –

ಕುರುಬ ಸಮಾಜಕ್ಕೆ ST ಮೀಸಲಾತಿ ಜಾರಿಗೆ ಆಗ್ರಹಿಸಿ ನಡೆದ ಧರಣಿಯಲ್ಲಿ ನಗರದ ಕೆ.ಆರ್.ಪುರಂ ಠಾಣೆಯ ಇನ್ಸ್ಪೆಕ್ಟರ್ ನಗಾರಿ ಬಾರಿಸುವ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹೌದು, ನಗಾರಿ ಬಾರಿಸಿದ ಇನ್ಸ್ಪೆಕ್ಟರ್ ಅಂಬರೀಶ್ ಪ್ರತಿಭಟನೆಯಲ್ಲಿ ಸಹ ಭಾಗಿಯಾದರು.

ಅಂದ ಹಾಗೆ, ಈ ಹಿಂದೆ ಸಹ ಇನ್ಸ್ಪೆಕ್ಟರ್ ಅವರು ಅಂಬರೀಶ್ ಇಂಥದ್ದೇ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದರು.

ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ಅವರ ಬರ್ತ್ ಡೇ ಸಮಾರಂಭದಲ್ಲಿ ಭಾಗಿಯಾಗಿದ್ದ ಅಂಬರೀಶ್ ಆ ಸಂದರ್ಭದಲ್ಲಿ ಶಾಸಕರಿಗೆ ಬೆಳ್ಳೆ ಗದೆ ನೀಡಿ ಜೈಕಾರ ಕೂಗಿದ್ದರು.

ಆಗ ಆ ವಿಡಿಯೋ ಸಹ ಸಖತ್ ವೈರಲ್ ಆಗಿತ್ತು.ಸಧ್ಯ ಈಗ ಹೋರಾಟದಲ್ಲಿ ಪಾಲ್ಗೊಂಡು ಸಮುದಾಯದ ಬೇಡಿಕೆಗಳು ಕುರಿತು ಹೋರಾಟಗಾರರೊಂದಿಗಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಧ್ವನಿ ಎತ್ತಿದ್ದಾರೆ‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.