ರಾಯಚೂರು –
ಬಿಸಿಲಿನ ತಾಪಮಾನಕ್ಕೆ ರಾಜ್ಯದಲ್ಲಿ ಇಬ್ಬರು ಮಕ್ಕಳ ಸಾವು – ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಬಿಸಿಲಿನ ತಾಪಮಾನ ಹೈರಾಣಾ ಗುತ್ತಿದ್ದಾರೆ ಜನರು
ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇನ್ನೂ ಹೆಚ್ಚಾಗುತ್ತಿರುವ ಈ ಒಂದು ಬಿಸಿಲಿನ ತಾಪಮಾನದಿಂದ ರಾಜ್ಯದ ಜನತೆ ಕಂಗಾಲಾಗಿದ್ದು ಬಿಸಿಲಿನ ತಾಪಮಾನಕ್ಕೆ ರಾಜ್ಯದಲ್ಲಿ ಒಂದೇ ದಿನ ಇಬ್ಬರು ಮೃತಪಟ್ಟಿದ್ದು ರಾಯಚೂರಿನಲ್ಲಿ ಈ ಒಂದು ಘಟನೆ ನಡೆದಿದೆ
ಬಿಸಿಲಿನ ತಾಪಕ್ಕೆ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವಿಗೀಡಾಗಿದ್ದರೆ ಇಬ್ಬರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿ ದ್ದಾರೆ.ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಬಿಸಿಲಿನ ತಾಪಕ್ಕೆ ಸಾವನ್ನಪ್ಪಿದ ಈ ಒಂದು ಘಟನೆಯಿಂದಾಗಿ ಜನತೆ ಆತಂಕ ಗೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಚಿಕ್ಕಸುಗೂರು ಗ್ರಾಮ ದಲ್ಲಿ ಬಿಸಿಲಿನ ತಾಪಕ್ಕೆ ಒಂದೇ ತಾಯಿಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.ಇಬ್ಬರು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ.ಮೃತ ಮಕ್ಕಳನ್ನು ಆರತಿ(9)ಪ್ರಿಯಾಂಕ್ (7) ಎಂದು ಗುರುತಿಸಲಾಗಿದೆ.ಹುಸೇನಮ್ಮ-ಮಾರುತಿ ದಂಪತಿಯ ಮಕ್ಕಳಾಗಿದ್ದು ಮಾರುತಿಯ ತಂದೆ ಹಾಗೂ ಮತ್ತೊಬ್ಬ ಮಗು ಅಸ್ವಸ್ಥರಾಗಿದ್ದಾರೆ
ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗು ತ್ತಿದೆ.ಇತ್ತ ಕಳೆದ ವಾರ ಒಮ್ಮೆ ಎರಡು ಬಾರಿ ಮಳೆಯಾಗಿದ್ದ ನಂತರ ಮತ್ತೆ ಮಳೆರಾಯ ದೂರವಾಗಿದ್ದು ತಾಪಮಾನ ರಾಜ್ಯದಲ್ಲಿ ಹೆಚ್ಚಾ ಗುತ್ತಿದ್ದು ಇದರಿಂದಾಗಿ ಜನತೆ ಕಂಗಾಲಾಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ರಾಯಚೂರು…..