ರಾಯಚೂರು –
ನೇಮಕಾತಿ ವಿಳಂಬದಿಂದ ಖಿನ್ನತೆಗೊಳಗಾಗಿ ಶಿಕ್ಷಕ ರೊಬ್ಬರು ಸಾವಿಗೀಡಾದ ಘಟನೆ ರಾಯ ಚೂರಿನಲ್ಲಿ ನಡೆದಿದೆ.ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಪದವೀಧರ ಶಿಕ್ಷಕರ ನೇಮಕದಲ್ಲಿ ಆಯ್ಕೆಯಾಗಿದ್ದ ಶಿಕ್ಷಕ.
ಶಾಲೆಗೆ ಹಾಜರಾಗುವ ಮುನ್ನವೇ ನೇಮಕಾತಿ ವಿಳಂಬ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.ಖಿನ್ನತೆಯಿಂದ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿ ಸಾವಿಗೀಡಾಗಿದ್ದಾರೆ. ದುರಗಪ್ಪ ನರಸಪ್ಪ ಪೂಲಭಾವಿ (33) ಮೃತ ರಾದವರಾಗಿದ್ದಾರೆ.
ಪದವೀಧರರ ಶಿಕ್ಷಕರ ನೇಮಕಾತಿಯ ಎರಡನೇ ಹಂತದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉಳಿಕೆ ವೃಂದದ ಹುದ್ದೆಗೆ ಆಯ್ಕೆಯಾಗಿದ್ದ ದುರುಗಪ್ಪ. ಈಚೆಗೆ ಕೌನ್ಸೆಲಿಂಗ್‌ನಲ್ಲಿ ದಾಖಲೆಗಳ ಪರಿಶೀಲನೆ ಯಲ್ಲಿ ಭಾಗಿಯಾಗಿದ್ದರು.ಮೊದಲ ಹಂತದಲ್ಲಿ ಆಯ್ಕೆಯಾಗದ್ದರಿಂದ ಮತ್ತು ದೀರ್ಘಕಾಲ ನೇಮಕಾತಿ ವಿಳಂಬ ಸೇರಿ ಹಲವು ಕಾರಣಗ ಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಎರಡನೇ ಹಂತದಲ್ಲಿ ಆಯ್ಕೆಯಾದರೂ ಪರಿಶೀಲನೆಗೆ ಮೆಡಿಕಲ್ ಸರ್ಟಿಫಿಕೆಟ್ ಪಡೆಯಲು ಪರದಾಡಿದ್ದರು.ನಂತರದ ದಿನ ಗಳಿಂದ ನಿರಂತರ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಕೊನೆಗೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ನಿಮಾನ್ಸ್‌ನಲ್ಲಿ ಸಾವಿಗೀಡಾಗಿ ದ್ದಾರೆ.ಇವರಿಗೆ ನಾಲ್ಕು ತಿಂಗಳ ಮಗು, ಪತ್ನಿ, ತಂದೆ, ತಾಯಿ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ರಾಯಚೂರು…..