ನವದೆಹಲಿ –
ಈಗಷ್ಟೇ ದೂರದ ದುಬೈ ನಲ್ಲಿ 13ನೇ ಐಪಿಎಲ್ ಆವೃತ್ತಿಯನ್ನು ಮುಗಿಸಿಕೊಂಡು ಬಂದಿರುವ ಬಿಸಿಸಿಐ ಈದ ಮತ್ತೊಂದು ಹೊಸ ಪ್ಲಾನ್ ನಲ್ಲಿ ಇದೆ. ಹೌದು ಒಂದು ಕಡೆ 13ನೇ ಐಪಿಎಲ್ ಆವೃತ್ತಿಯನ್ನು ಮುಗಿಸಿಕೊಂಡು 14ನೇ ಆವೃತ್ತಿಗೆ ಸಿದ್ದತೆ ಒಂದು ಕಡೆ ನಡೀತಾ ಇದ್ದರೇ ಮತ್ತೊಂದು ಕಡೆ ಇದೀಗ.ಮುಂದಿನ ಆವೃತ್ತಿಗೆ ಮತ್ತೊಂದು ತಂಡವನ್ನು ಸೇರ್ಪಡೆಗೊಳಿಸಲು ಬಿಸಿಸಿಐ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ.ಇದರೊಂದಿಗೆ ಈಗ ಬಿಸಿಸಿಐ ಮತ್ತೊಂದು ಹೊಸ ಪ್ಲಾನ್ ಮಾಡಿದ್ದು ದೇಶೀಯ ಕ್ರಿಕೆಟ್‌ನತ್ತ ಒಲವು ವ್ಯಕ್ತಪಡಿಸಿದೆ.
ಹೌದು ಐಪಿಎಲ್-14 ಗೆ ಆಟಗಾರರನ್ನು ಹರಾಜಿನಲ್ಲಿ ಕೊಂಡುಕೊಳ್ಳಲು ಅನುಕೂಲವಾಗುವಂತೆ ದೇಶಿಯ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿ ಆಯೋಜಿಸಲು ಬಿಸಿಸಿಐ ಯೋಚಿಸಿದ್ದು ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿದೆ.
ಕರೋನಾ ಮಹಾಮಾರಿಯ ನಡುವೆಯೂ ಐಪಿಎಲ್ ನ್ನು ದೊಡ್ಡ ಸವಾಲಾಗಿ ಸ್ವೀಕರಿಸಿಕೊಂಡು 13ನೇ ಐಪಿಎಲ್ ನ್ನು ದೂರದ ದುಬೈ ನಲ್ಲಿ ಆಯೋಜಿಸಿ ಯಶಶ್ವಿಯಾಗಿ ಮುಗಿಸಿಕೊಂಡು ಬಂದಿದೆ ಬಿಸಿಸಿಐ. ಈಗ ರಣಜಿ ಟ್ರೋಫಿಗೂ ಮುನ್ನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸಂಘಟಿಸಲು ತೀರ್ಮಾನಿಸಿದೆ.
ಪಂಚತಾರಾ ಹೋಟೆಲ್‌ಗೆ ಹತ್ತಿರವಾಗಿರುವ ಮೈದಾನಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಕುರಿತು 10 ರಾಜ್ಯ ಘಟಕಗಳನ್ನು ಸಂಪರ್ಕ ಮಾಡಲಾಗಿದ್ದು ದೇಶಿಯ ಪಂದ್ಯಾವಳಿ ಆಯೋಜನೆ ಕುರಿತಂತೆ ಪ್ಲಾನ್ ಮಾಡಿಕೊಳ್ಳುತ್ತಿದೆ ಬಿಸಿಸಿಐ.ಎರಡು ವಾರಗಳ ಅಂತರದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆಯೋಜಿಸಿ, ಬಳಿಕ ರಣಜಿ ಟ್ರೋಫಿಗೆ ಚಾಲನೆ ನೀಡಲು ಬಿಸಿಸಿಐ ತೀರ್ಮಾನಿಸಿದೆ.
ಬಂಗಾಳ ಕ್ರಿಕೆಟ್ ಸಂಸ್ಥೆ ಟಿ20 ಟೂರ್ನಿ ಆಯೋಜಿಸಲು ಹೆಚ್ಚಿನ ಆಸಕ್ತಿ ತೋರಿದೆ ಎನ್ನಲಾಗಿದ್ದು ದೇಶಿಯ ಕ್ರೀಕೇಟ್ ಪಂದ್ಯಾವಳಿ ಆರಂಭವಾದ್ರೆ ಕ್ರೀಕೇಟ್ ನಲ್ಲಿ ಮತ್ತಷ್ಟು ಪ್ರತಿಭಾವಂತ ಆಟಗಾರರು ಹೊರಹೊಮ್ಮಲಿದ್ದು ಇತ್ತ ಕ್ರಿಕೇಟ್ ಪ್ರೇಮಿಗಳು ಸಖತ್ ಮನರಂಜನೆ ಸಿಗಲಿದೆ.