ಕಲಬುರಗಿ –
ಲೋಕಾಯುಕ್ತ ಬಲೆಗೆ ಬಿದ್ದ ವಿದ್ಯಾರ್ಥಿ ನಿಲಯದ ವಾರ್ಡನ್ – ಅಡುಗೆ ಸಹಾಯಕರಿಗೆ ಹಾಜರಾತಿ ಪ್ರಮಾಣ ಪತ್ರ ನೀಡಲು 20 ಸಾವಿರ ಹಣಕ್ಕೆ ಬೇಡಿಕೆ ಹೌದು
ಅಡುಗೆ ಸಹಾಯಕರೊಬ್ಬರಿಗೆ ಹಾಜರಾತಿ ಪ್ರಮಾಣ ಪತ್ರವನ್ನು ನೀಡಲು 20 ಸಾವಿರ ರೂಪಾಯಿ ಬೇಡಿಕೆಯನ್ನು ಇಟ್ಟಿದ್ದ ಹಾಸ್ಟೇಲ್ ವಾರ್ಡನ್ ರೊಬ್ಬರು ಲೋಕಾಯಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಹೌದು ಲಂಚ ಪಡೆಯುತ್ತಿದ್ದ ಹಾಸ್ಟೆಲ್ ವಾರ್ಡನ್ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.
ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಾರ್ಡನ್ ಶಿವಶರಣಪ್ಪ ಅವರೇ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದು ಅಡುಗೆ ಸಹಾಯಕರಿಗೆ ತಿಂಗಳ ಹಾಜರಾತಿ ನೀಡಲು ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು ಅಡುಗೆ ಸಹಾಯಕ ಶ್ರೀಮಂತ ಅವರ ಬಳಿ 20,000 ರೂಪಾಯಿ ಲಂಚ ಕೇಳಿದ್ದರು.
ಕಚೇರಿಯಲ್ಲಿ 15,000 ರೂ. ಮುಂಗಡ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಹಣ ಪಡೆಯುವಾಗಲೇ ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ.ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೆನಾಳ ನೇತೃತ್ವದಲ್ಲಿ ಈ ಒಂದು ದಾಳಿ ನಡೆಸಲಾಗಿದ್ದು ಸಧ್ಯ ಹೆಚ್ಚಿನ ವಿಚಾರಣೆಯನ್ನು ಮಾಡಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಕಲಬುರಗಿ…..