ಒಂಬತ್ತು ಬೇಡಿಕೆಗಳಲ್ಲಿ ಊದು ಬೇಡಿಕೆಗಳನ್ನು ಈಡೇರಿಸಿದ ರಾಜ್ಯ ಸರ್ಕಾರ – ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರ……

Suddi Sante Desk

ಬೆಂಗಳೂರು –

ಕೊನೆಗೂ ರಾಜ್ಯ ಸರ್ಕಾರ ರಾಜ್ಯ ಸಾರಿಗೆ ನೌಕರರ ಧ್ವನಿಗೆ ಸಮಸ್ಯೆಗೆ ಸ್ಪಂದಿಸಿದೆ. ಮುಷ್ಕರದ ಮೂಲಕ ಸರ್ಕಾರದ ಮುಂದೆ ಸಲ್ಲಿಸಿದ್ದಂತ 9 ಬೇಡಿಕೆಗಳಲ್ಲಿ ರಾಜ್ಯ ಸರ್ಕಾರ 5 ಬೇಡಿಕೆಗಳನ್ನು ಈಡೇರಿಸಿ ಸುತ್ತೋಲೆ ಹೊರಡಿಸಿದೆ.ಇನ್ನೂ ಇದರಿಂದ ಅಲ್ಪ ಮಟ್ಟಿಗಾದರೂ ಸಾರಿಗೆ ನೌಕರರಿಗೆ ಜಯ ಸಿಕ್ಕಂತಾಗಿದೆ‌.

ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಸುತ್ತೋಲೆ ಹೊರಡಿಸಿದ್ದು, ಸಾರಿಗೆ ನೌಕರರ ಬೇಡಿಕೆಗಳ ಮೇಲೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಈ ಕೆಳಕಂಡ ಬೇಡಿಕೆಗಳನ್ನು ನಾಲ್ಕೂ ಸಂಸ್ಥೆಗಳ ಹಂತದಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅನುಮೋದನೆ ನೀಡಿದೆ. ಜಾರಿಗೊಳಿಸಿದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿಸಲ್ಪಟ್ಟಿದ್ದಾರೆ.

ರಾಜ್ಯ ಸರ್ಕಾರ ಈಡೇರಿಸಿರುವಂತ ಸಾರಿಗೆ ನೌಕರರ 5 ಬೇಡಿಕೆಗಳು ಹೀಗಿವೆ.

  1. ಆರೋಗ್ಯ ಭಾಗ್ಯ ವಿಮಾ ಯೋಜನೆ
  2. ಕೋವಿಡ್-19 ಸೋಂಕು ತಗುಲಿದ ನಿಗಮದ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರ್ಕಾರಿ ನೌಕರರಿಗೆ ನೀಡಿದಂತೆ ಸಂಸ್ಥೆಯ ಆಂತರಿಕ ಸಂಪನ್ಮೂಲಗಳಿಂದ ರೂ.30 ಲಕ್ಷಗಳ ಪರಿಹಾರವನ್ನು ನೀಡುವುದು
  3. ಸಾರಿಗೆ ಸಂಸ್ಥೆಗಳಲ್ಲಿ ಹೆಚ್ ಆರ್ ಎಂ ಎಸ್ ವ್ಯವಸ್ಥೆಯನ್ನು ಜಾರಿಗೊಳಿಸುವುದು
  4. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು
  5. NINC ಬದಲಾಗಿ ಪರ್ಯಾಯಯ ವ್ಯವಸ್ಥೆ ಜಾರಿಗೊಳಿಸುವುದು

ಈ ಮೇಲ್ಕಂಡ ಐದು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿ ಸುತ್ತೋಲೆಯಲ್ಲಿ ತಿಳಿಸಿದೆ. ಉಳಿದಂತೆ ಇತರೆ ಬೇಡಿಕೆಗಳ ಶೀಘ್ರದಲ್ಲೇ ಚರ್ಚಿಸಿ ನಿರ್ಧರಿಸಲು ಭರವಸೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.