ಇಳಕಲ್ –
ಹೌದು ಶಿಕ್ಷಕರೊಬ್ಬರಿಗೆ ಶಿಕ್ಷಕಿ ಯೊಬ್ಬರು ಚಪ್ಪಲಿ ಯಿಂದ ಹೊಡೆದ ಕಾರಣಕ್ಕಾಗಿ ಪೊಲೀಸ್ ಠಾಣೆ ಗೆ ದೂರು ನೀಡಿದ ಘಟನೆ ಅಲಂಪೂರಪೇಟೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಶಿಕ್ಷಕಿ ಅಮೀನಾ ಕೊಳೂರ ಎನ್ನುವವರು ತಮಗೆ ವಿದ್ಯಾರ್ಥಿ ಗಳೆದುರು ಚಪ್ಪಲಿಯಿಂದ ಹೊಡೆದು ಅವಮಾನಿಸಿ ದ್ದಾರೆ ಎಂದು ಅದೇ ಶಾಲೆಯ ಶಿಕ್ಷಕ ಅಂದಾನಯ್ಯ ವಸ್ತ್ರದ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸಲು ಅಗತ್ಯ ಸಿದ್ಧತೆ, ತಾಲೀಮು ಮಾಡಿಸುತ್ತಿದ್ದೆ.ಈ ಬಗ್ಗೆ ಮಕ್ಕಳೆ ದುರು ಶಿಕ್ಷಕಿ ಅಮೀನಾ ಆಕ್ಷೇಪಾರ್ಹ ಮಾತು ಆಡಿದ್ದರು. ಹೀಗೇಕೆ ಆಡಿದಿರಿ ಎಂದು ಕೇಳಿದ ನನ್ನನ್ನು ಏಕಾಏಕಿ ಚಪ್ಪಲಿಯಿಂದ ಹೊಡೆದು ಶಿಕ್ಷಕಿ ಅಮೀನಾ ಅವಮಾನಿ ಸಿದ್ದಾರೆ.
ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಿಕ್ಷಕ ಅಂದಾನಯ್ಯ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಶಾಲೆಗೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿ ಕಾರಿಗಳೂ ಸಹ ಶಾಲೆಗೆ ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಪಡೆದರು.
ಸುದ್ದಿ ಸಂತೆ ನ್ಯೂಸ್ ಇಳಕಲ್……