ಕರೋನ ಲಸಿಕೆ ಹಾಕಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

Suddi Sante Desk

ನವದೆಹಲಿ –

ಪ್ರಧಾನಿ ನರೇಂದ್ರ ಮೋದಿಯವರು ಕರೋನ ಲಸಿಕೆಯನ್ನು ತೆಗೆದುಕೊಂಡಿದ್ದಾರೆ.ಏಮ್ಸ್ ನಲ್ಲಿ COVID-19 ಲಸಿಕೆಯ ನನ್ನ ಮೊದಲ ಡೋಸ್ ತೆಗೆದುಕೊಂಡೆ ಅಂತ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಅವರು COVID-19 ನ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಕ್ಷಿಪ್ರ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗ ವಿದೆ. ಲಸಿಕೆ ಯನ್ನು ತೆಗೆದುಕೊಳ್ಳಲು ಅರ್ಹರಾದ ಎಲ್ಲರಿಗೂ ನಾನು ಮನವಿ ಮಾಡುತ್ತೇನೆ ಒಟ್ಟಿಗೆ ನಾವು ಭಾರತವನ್ನು COVID-19 ಅನ್ನು ನಿರ್ಮೂಲನೆ ಮಾಡೋಣ ಅಂತ ಹೇಳಿದ್ದಾರೆ.

ಸೋಮವಾರದಿಂದ ಅಂದ್ರೆ ಇಂದಿನಿಂದ ದೇಶಾದ್ಯಂತ 10 ಕೋಟಿ ಜನರಿಗೆ ಲಸಿಕೆ ಹಾಕುವ ‘ಕೋವಿಡ್ -19’ ಲಸಿಕೆ ಅಭಿಯಾನ ಎರಡನೇ ಹಂತದ ಅಭಿಯಾನ ಆರಂಭಿಸಲಿದೆ ಎಂದು ಪೊಸ್ಟ್ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.