ಹುಬ್ಬಳ್ಳಿ –
ಹುಬ್ಬಳ್ಳಿಯ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕ ರಾಜಣ್ಣ ಕೊರವಿ ಬಿಜೆಪಿ ಸೇರಲು ಮಹೂರ್ತ ಫೀಕ್ಸ್ ಆಗಿದೆ. ಕಳೆದ ಹಲವಾರು ವರುಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡುತ್ತಿರುವ ಇವರಿಗೆ ಪಕ್ಷದಲ್ಲಿ ಸರಿಯಾದ ಸೂಕ್ತವಾದ ಪ್ರೋತ್ಸಾಹ ಪ್ರೇರಣೆ ಸಿಗುತ್ತಿಲ್ಲ ಇದರಿಂದ ಬೇಸತ್ತು ಬರುವ ಮಹಾನಗರ ಪಾಲಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಸೇರುತ್ತಿದ್ದಾರೆ.

ಈಗಾಗಲೇ ಹುಬ್ಬಳ್ಳಿಯ ಕೇಸರಿ ಪಕ್ಷದ ನಾಯಕರೊಂದಿಗೆ ಮಾತುಕತೆ ಮಾಡಿಕೊಂಡು ಪಕ್ಷಕ್ಕೆ ಬರಲು ಗ್ರೀನ್ ಸಿಗ್ನಲ್ ನೀಡದ ಹಿನ್ನಲೆಯಲ್ಲಿ ಜನೇವರಿ 23 ಕ್ಕೆ ಬಿಜೆಪಿ ಬಾಹುಟ ಹಿಡಿಯಲಿದ್ದಾರೆ. ಕಳೆದ ಹಲವು ವರುಷಗಳಿಂದ ಹೊತ್ತುಕೊಂಡಿದ್ದ ತೆನೆ ಬಾರವನ್ನು ಇಳಿಸಿ ಕಮಲದ ಬಾರವನ್ನು ಹೊತ್ತುಕೊಳ್ಳಲಿದ್ದಾರೆ.

ಜನೇವರಿ 23 ರಂದು ಉಣಕಲ್ಲ್ ನಲ್ಲಿರುವ ಚೇತನಾ ಬುಜಿನೇಸ್ ಶಾಲಾ ಆವರಣದಲ್ಲಿ ಬೃಹತ್ ವೇದಿಕೆಯ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಕಮಲವನ್ನು ಹಿಡಿದು ಬಿಜೆಪಿ ಪಕ್ಷದ ಬಾರವನ್ನು ಹೊತ್ತುಕೊಳ್ಳಲಿದ್ದಾರೆ. ಕಳೆದ ಹಲವಾರು ವರುಷಗಳಿಂದ ಹುಬ್ಬಳ್ಳಿಯಲ್ಲಿ ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ಸಾಕಷ್ಟು ಪ್ರಮಾಣದಲ್ಲಿ ಪಕ್ಷ ಸಂಘಟನೆ ಮಾಡಿ ನಂತರ ಒಮ್ಮೆ ವಿಧಾನಸಭಾ ಚುನಾವಣೆಗೂ ಸ್ಪರ್ಧೆ ಮಾಡಿದ್ದರು.

ಇವೆಲ್ಲದಕ್ಕೂ ಪಕ್ಷದಿಂದ ಯಾವುದೇ ಸೂಕ್ತವಾದ ಪ್ರೇರಣೆಯಾಗಲಿ ಪ್ರೋತ್ಸಾಹವಾಗಲಿ ಇವರಿಗೆ ಸಿಗಲಿಲ್ಲವಂತೆ ಹೀಗಾಗಿ ಇದೆಲ್ಲದರಿಂದ ಬೇಸತ್ತು ರಾಜಣ್ಣಾ ಕೊರವಿ ಕೊನೆಗೂ ಜೆಡಿಎಸ್ ಪಕ್ಷ ಬಿಡಲು ಮುಂದಾಗಿದ್ದು ಜನೇವರಿ 23 ರಂದು ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಶಿ ರಾಜ್ಯ ಸಚಿವರಾದ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿಯೇ ಅದ್ದೂರಿಯಾದ ವೇದಿಕೆಯ ಕಾರ್ಯಕ್ರಮದ ಮೂಲಕ ಕಮಲ ಹಿಡಿಯಲಿದ್ದಾರೆ ರಾಜಣ್ಣ ಕೊರವಿ.