ಧಾರವಾಡ –
ಧಾರವಾಡದ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿನ 3 ನೇ ವಾರ್ಡ್ ನಲ್ಲಿ ವಿವಿಧೆಡೆ ರಸ್ತೆ ಕಾಮಗಾರಿಗೆ ಭೂಮಿ ಪೂಜಾ ಕಾರ್ಯಕ್ರಮ ನಡೆಯಿತು.
ಧಾರವಾಡದ ಕುಮಾರೇಶ್ವರ ನಗರದಲ್ಲಿ ಎರಡು ಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಡೆಯಿತು. ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿಯವರು ರಸ್ತೆ ಕಾಮಗಾರಿಗಳಿಗೆ ಪೂಜೆ ಮಾಡಿದರು.
ಮೊದಲು ಮೂಕಾಂಬಿಕಾ ನಗರ ದಿಂದ ಸುಂದರ ನಗರದ ವರೆಗೆ 6 ಲಕ್ಷ ರೂಪಾಯಿ ಗಳ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಂತರ ಬನಶಂಕರಿ ಬಡಾವಣೆಯಲ್ಲಿ ಮತ್ತೊಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ನಂತರ 16 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಪೂಜೆ ಮಾಡಿದರು.
ಭಾರತ ಮಾತೆಯ ಭಾವ ಚಿತ್ರಕ್ಕೆ ಬನಶಂಕರಿ ಬಡಾವಣೆಯ ನಿವಾಸಿಗಳೊಂದಿಗೆ ಪೂಜೆ ಸಲ್ಲಿಸಿ ರಸ್ತೆ ಕಾಮಗಾರಿಯನ್ನು ಸರಿಯಾಗಿ ಮಾಡುವಂತೆ ಸೂಚಿಸಿದರು.
ಇದೇ ವೇಳೆ ಬನಶಂಕರಿ ಬಡಾವಣೆಗೆ ರಸ್ತೆ ಮಾಡಿಸಿದ ಶಾಸಕರಿಗೆ ಬನಶಂಕರಿ ಬಡಾವಣೆಯ ಎಲ್ಲಾ ನಿವಾಸಿಗಳು ಸೇರಿ ಆತ್ಮೀಯವಾಗಿ ಪ್ರೀತಿಯಿಂದ ಸನ್ಮಾನ ಮಾಡಿ ಗೌರವಿಸಿದರು.
ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರೊಂದಿಗೆ ವಿರೇಶ ಅಂಚಟಗೇರಿ,ಸಂತೋಷ ದೇವರಡ್ಡಿ, ಹರೀಶ ಬಿಜಾಪುರ, ಬಸವರಾಜ ರುದ್ರಾಪುರ ,ಮಹದೇವ ಅಳಗವಾಡಿ ,ಜಗದೀಶ ತೋಟದ ,ಹೇಮಂತ ನೀಲಣ್ಣವರ , ಬಸವರಾಜ ಕಿತ್ತೂರ ,ಮಂಜುನಾಥ ಶೆಟ್ಟಿ ,ಶಂಕರ ಹಾರಿಕೊಪ್ಪ, ಶ್ರೀಕಾಂತ ಹಳ್ಳಿಗೇರಿಮಠ, ರಾಜೇಶ್ವರಿ ಸಾಲಗಟ್ಟಿ, ಗೀತಾ ಕಿತ್ತೂರ ,ರಾಜೇಶ್ವರಿ ಕಬ್ಬೂರ, ದೇವೆಂದ್ರ ಜಾಧವ, ಅರವಿಂದ ಪಾಟೀಲ ,ವೇದಕುಮಾರ ನವಲಗುಂದ ಸೇರಿದಂತೆ ಹಲವರು ಉಪಸ್ಥಿತಿತರಿದ್ದರು.
ಬನಶಂಕರಿ ಬಡಾವಣೆಯ ರುದ್ರಪ್ಪ ಉಳ್ಳಾಗಡ್ಡಿ, ಜಿ ಜವರೇಗೌಡ,ಜಗದೀಶ್ ತಿಬೇಲಿ,ರಾಮಸ್ವಾಮಿ, ಮಾಸ್ತಿಯವರ,ಧರಿಯಣ್ಣನವರ,ಮೆಣಸಿನಕಾಯಿ ವಕೀಲರು,ಜಾಧವ,ರಮೇಶ್ ಸಿದ್ದೂನವರ, ಸೇರಿದಂತೆ ಬಡಾವಣೆಯ ಹಿರಿಯರು ಗಣ್ಯರು ಹಾಗೇ ಬನಶಂಕರಿ ಬಡಾವಣೆಯ ಮಹಿಳಾ ಸಂಘದ ಸರ್ವ ಸದಸ್ಯರೂ ಉಪಸ್ಥಿತರಿದ್ದರು.