ಶಿಕ್ಷಕರಿಗೆ ಬೇಸಿಗೆ ರಜೆ ನೀಡುವಂತೆ ಶಿಕ್ಷಣ ಸಚಿವರಿಗೆ ಗ್ರಾಮೀಣ ಶಿಕ್ಷಕರ ಸಂಘ ಒತ್ತಾಯ…..

Suddi Sante Desk

ಹುಬ್ಬಳ್ಳಿ –

ಶಿಕ್ಷಕರಿಗೆ ಬೇಸಿಗೆ ರಜೆ ನೀಡುವಂತೆ ಶಿಕ್ಷಣ ಸಚಿವರಿ ಗೆ ಗ್ರಾಮೀಣ ಶಿಕ್ಷಕರ ಸಂಘ ಆಗ್ರಹವನ್ನು ಮಾಡಿದೆ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರಕಾರವು 1 ರಿಂದ 9 ನೇ ತರಗತಿವರೆಗೆ ತರಗತಿಗಳನ್ನು ನಡೆಸಬಾರ ದೆಂದು ಆದೇಶಿಸಿದೆ. ಮುಂದುವರೆದು ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆಯು ತೀವ್ರವಾಗುತ್ತಿದ್ದು ಮಕ್ಕಳು ಶಾಲೆಗೆ ಬರದೆ ಇದ್ದರೂ ಶಿಕ್ಷಕರು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ.

ಅಲ್ಲದೇ ಕಳೆದ 8 ದಿನಗಳಿಂದ ಸಾರಿಗೆ ನೌಕರರ ಪ್ರತಿಭಟನೆಯಿಂದಾಗಿ ಬಸ್ಸುಗಳ ಓಡಾಟವಿಲ್ಲದೇ ವಿಶೇಷವಾಗಿ ಮಹಿಳಾ ಶಿಕ್ಷಕಿ ಯರಿಗೆ ತುಂಬಾ ತೊಂದರೆಯಾಗುತ್ತಿದೆ ಅಲ್ಲದೆ ನಮ್ಮ ಇಲಾಖೆ ರಜೆಸಹಿತ ಇಲಾಖೆ ಯಾಗಿದೆ. ಆದ ಕಾರಣ . ಈ ಎಲ್ಲ ಮೇಲಿನ ಅಂಶಗಳ ನ್ನು ಪರಿಗಣಿಸಿ ಹಾಗೂ ಕೋವಿಡ್ ನ ನಿಯಂತ್ರಣಕ್ಕೆ ಮುಂಜಾಗೃತ ಕ್ರಮವಾಗಿ ರಾಜ್ಯದ ಎಲ್ಲ ಶಿಕ್ಷಕರಿಗೆ ಬೇಸಿಗೆ ರಜೆ ನೀಡಲು ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ

ರಾಜ್ಯಪ್ರ.ಕಾ.ಮಲ್ಲಿಕಾರ್ಜುನ.ಸಿ.ಉಪ್ಪಿನ.ಮಹಾಪೋಷಕರಾದ ಪವಾಡೆಪ್ಪ.ಕಾಂಬಳೆ. ಗೌರವಾಧ್ಯಕ್ಷರಾದಎಲ್.ಆಯ್.ಲಕ್ಕಮ್ಮನವರ. ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ.ಆರ್.ಕೆ. ಕೋಶಾಧ್ಯಕ್ಷರಾದ ಎಸ್.ಎಫ್.ಪಾಟೀಲ. ಉಪಾಧ್ಯಕರಾದ ಎಮ್.ಆಯ್.ಮುನವಳ್ಳಿ. ನಾಗರಾಜು ಕೆ.ಸುರೇಶ. ಅರಳಿ.ಧರ್ಮಣ್ಣ. ಭಜಂತ್ರಿ.ಕುಕನೂರ ಅಕ್ಕಮಹಾದೇವಿ. ನೂಲ್ವಿ.ಜಿ.ಟಿ.ಲಕ್ಷ್ಮಿದೇವಮ್ಮ ಶರಣಬಸವ ಬನ್ನಿಗೋಳಅಶೋಕ ಬಿಸೆರೊಟ್ಟಿ.ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ ಅಲ್ಲದೇ ಈ ಕುರಿತು ಮುಖ್ಯಮಂತ್ರಿ, ಸಚಿವರಾದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್ ಅವರಿಗೆ ಪತ್ರವನ್ನು ಬರೆದಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.