ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ASI ಸಾವು – ಕುಸಿದು ಬಿದ್ದ ಪೊಲೀಸ್ ಅಧಿಕಾರಿ ಸಾವು…..

Suddi Sante Desk

ಬೆಳಗಾವಿ –

ಬೆಳಗಾವಿಯ ಲೋಕಸಭೆ ಉಪಚುನಾವಣೆ ಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಮಕನ ಮರಡಿ ಪೊಲೀಸ್ ಠಾಣೆ ASI ಜೆ.ಬಿ ಪೂಜಾರ(57) ಅವರು ಘಟಪ್ರಭಾ ಮತಗಟ್ಟೆ ಕೇಂದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಳಗಾವಿಯ ಲೋಕ ಸಭಾ ಉಪಚುನಾವಣೆ ಯ ಕರ್ತವ್ಯಕ್ಕೆಂದು ಪೂಜಾರ ಅವರನ್ನು ಗೋಕಾಕ ಮತ ಕ್ಷೇತ್ರದ ಘಟಪ್ರಭಾ ದ ಮತಗಟ್ಟೆ ಕೇಂದ್ರಕ್ಕೆ ಸೆಕ್ಟರ್ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಘಟಪ್ರಭಾ ದ ಎಸ್‌ಬಿಟಿ ಪಿಯು ಕಾಲೇಜಿನ ಶೌಚಾಲಯದ ಆವರಣದಲ್ಲಿ ಎಎಸ್‌ಐ ಜೆ.ಬಿ ಪೂಜಾರ ಅವರು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪ ಟ್ಟಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.