ಕೋವಿಡ್ ಗೆ ಶಿಕ್ಷಕ ದಂಪತಿಗಳು ಸಾವು – ತಂದೆ ತಾಯಿ ಕಳೆದುಕೊಂಡು ಅನಾಥವಾದರು ಮೂವರು ಮಕ್ಕಳು…..

Suddi Sante Desk

ಬೀದರ್ –

ಕೋವಿಡ್ ಗೆ ಶಿಕ್ಷಕ ದಂಪತಿಗಳು ಮೃತರಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಜಿಲ್ಲೆಯ ಹಮನಾ ಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಇನ್ನೂ ಸಧ್ಯ ತಂದೆ ತಾಯಿ ಯನ್ನು ಕಳೆದುಕೊಂಡ ಮೂವರು ಮಕ್ಕಳು ಪೊಷಕ ರಿಲ್ಲದೆ ಅನಾಥವಾಗಿದ್ದಾರೆ.ಕರೋನಾ ಸೋಂಕಿ ಗೆ ಒಳಪಟ್ಟು ಮೊದಲು ಶಿಕ್ಷಕ ಸಿರೇಶ ನಿಲಂ ಮೃತ ಪಟ್ಟಿದ್ದಾರೆ ಇವರು ಭಾಲ್ಕಿ ತಾಲೂಕಿನ ನಾವದಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿ ದ್ದರು.

ಸಿರೇಶ ನಿಲಂಗೆ(50) ಕರೋನ ಸೋಂಕು ಕಾಣಿಸಿ ಕೊಂಡು ನಂತರ ಬೀದರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.ಇನ್ನೂ 20 ದಿನಗಳ ಹಿಂದೆ ಇವರ ಪತ್ನಿ ಮಿನಾಕ್ಷಿ ಸೋಂಕು ತಗಲಿ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.ಪತ್ನಿ ಮೀನಾಕ್ಷಿ ದುಬಲ ಗುಂಡಿ ಗ್ರಾಮದ ಅನುದಾನ ರಹಿತ ಖಾಸಗಿ ಶಾಲೆ ಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಇಬ್ಬರು ಪುತ್ರಿಯರು ಓರ್ವ ಪುತ್ರ ಇದ್ದು ಮಕ್ಕಳೆಲ್ಲಾ ಈಗ ತಂದೆ ತಾಯಿಗಳಿಲ್ಲದೆ ಅನಾಥ ರಾಗಿದ್ದಾರೆ.

ಮೃತರಾದ ಶಿಕ್ಷಕ ದಂಪತಿಗಳು

ಇನ್ನೂ ಮೃತರಾದ ಶಿಕ್ಷಕ ದಂಪತಿಗಳಿಗೆ ನಾಡಿನ ಶಿಕ್ಷಕ ಬಂಧುಗಳು ಭಾವಪೂರ್ಣ ಸಂತಾಪವನ್ನು ಸೂಚಿಸಿದ್ದಾರೆ. ಶಿಕ್ಷಕರಾದ ಪವಾಡೆಪ್ಪ,ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ,ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವ ಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ,ದಾವಣಗೆರೆ ಸಿದ್ದೇಶ,ನಾಗರಾಜ ಕಾಮನ ಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾ ಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡ ವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇ ಖರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ನಮನ ಸಲ್ಲಿಸಿ ದರು. ಇದರೊಂದಿಗೆ ಅನಾಥವಾಗಿರುವ ಮಕ್ಕಳಿಗೆ ಪೋಷಕರಿಲ್ಲದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕೊಡಲೆಂದು ಪ್ರಾರ್ಥನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.