ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆ ಯಲ್ಲಿ ಐವರು ಸಾವಿನ ಪ್ರಕರಣ ತನಿಖೆಗೆ ಅಡಿಟ್ ಕಮಿಟಿ ರಚನೆ

Suddi Sante Desk

ಧಾರವಾಡ –

ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಬಹು ದಿನ ಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆ ಹಾಗೂ ಮೂರು ಜನ ಪುರುಷರು ಸೇರಿ 5 ಜನ ಕೋವಿಡ್ ಸೋಂಕಿತರು ನಿನ್ನೆ ಸಂಜೆ ಮೃತರಾಗಿದ್ದು, ಇದಕ್ಕೆ ಆಕ್ಸಿಜನ್ ಕೊರತೆ ಕಾರಣವಲ್ಲ. ಆಸ್ಪತ್ರೆ ಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಸೌಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು ಮಾಹಿತಿ ತಿಳಿದ ತಕ್ಷಣ ಸ್ವತಃ ಬಂದು ಆಸ್ಪತ್ರೆಯಲ್ಲಿ ಪರಿಶೀಲನೆ‌ ಮಾಡಲಾಗಿದ್ದು, ಆಕ್ಸಿಜನ್ ಕೊರತೆ ಆಗಿರುವುದು ಕಂಡಿಬಂದಿಲ್ಲ ಎಂದರು

ಮೃತರ ಸಾವಿನ ಪ್ರಕರಣವನ್ನು ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಈ ಒಂದು ಕುರಿತು ಡೆತ್ ಅಡಿಟ್ ಕಮಿಟಿಯಿಂದ ತನಿಖೆ ಮಾಡಲಾಗುವುದು ಎಂದರು.ಸಧ್ಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಒಟ್ಟು 21 ಜನ ಕೋವಿಡ್ ಸೋಂಕಿತ ರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು

ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ 30 ಜಂಬೂ ಸಿಲಿಂಡರ್ ಇವೆ.2 ಕೆಎಲ್ ಸಾಮರ್ಥ್ಯದ ಒಂದು ಆಕ್ಸಿಜನ್ ಕಂಟೇನರ್ ಇದೆ. ಹಾಗೂ ನೈಸರ್ಗಿಕವಾಗಿ ಗಾಳಿ ಬಳಸಿಕೊಂಡು ಪ್ರತಿ ನಿಮಿಷಕ್ಕೆ‌ 85 ಸಾವಿರ ಲೀಟರ್‌ ಆಕ್ಸಿಜನ್ ಉತ್ಪಾದಿಸುವ ಒಂದು ಹೊಸ
(O2 ಕಾನ್ಸ್ ನ್ ಟ್ರೇಟೆಡ್) ಘಟಕವನ್ನು ಲೈಫ್ ಲೈನ್ ಆಸ್ಪತ್ರೆ ಹೊಂದಿದ್ದು ಅಲ್ಲದೆ ಪ್ರತಿ ಐಸಿಯು ದಲ್ಲಿ ಆಕ್ಸಿಜನ್ ಕೊರತೆ ಉಂಟಾದಲ್ಲಿ ಎಚ್ಚರಿಸಲು ಅಲಾರಮಿಂಗ್ ಸಿಸ್ಟಮ್‌ ಸಹ ಅಳವಡಿಸಲಾಗಿದೆ ಎಂದರು.ಇನ್ನೂ ಇಂದು ಸಂಭವಿಸಿರುವ ಕೋವಿಡ್ ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂಬುದು‌ ಪ್ರಾಥಮಿಕ‌ ತನಿಖೆಯಿಂದ ತಿಳಿದು ಬಂದಿದ್ದು ಈ ಒಂದು ಕುರಿತು ತನಿಖೆ ಮಾಡಿಸಲಾ ಗುತ್ತದೆ ಎಂದರು.ಒಟ್ಟಾರೆ ಏನೇ ಆಗಲಿ ಒಂದೇ ದಿನ ಆಸ್ಪತ್ರೆಯಲ್ಲಿ ಐವರು ಸಾವಿಗೀಡಾದ ಪ್ರಕರಣ ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ವೇದಿಕೆಯಾಗಿದ್ದು ದುರಂತವೇ ಸರಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.