ಆ ಮುಖ್ಯ ಶಿಕ್ಷಕನ ವಿರುದ್ಧ ಪ್ರತಿಭಟನೆ – ಭಾರತ ವಿದ್ಯಾರ್ಥಿ ಫೆಡರೇಷನ್ ನಿಂದ ಹೋರಾಟ ಮನವಿ ಸಲ್ಲಿಕೆ…..

Suddi Sante Desk

ಹಾವೇರಿ –

SSLC ಪರೀಕ್ಷೆ ಯಿಂದ ವಿದ್ಯಾರ್ಥಿಗಳು ವಂಚಿತರಾಗಲು ಕಾರಣರಾದ ಶಾಲಾ ಮುಖ್ಯ ಶಿಕ್ಷಕನ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರಿನ ಅನುದಾನಿ ತ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ ವಂಚಿತರಾದ 30 ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ ಮುಖ್ಯಶಿಕ್ಷಕ ಮತ್ತು ಗುಮಾಸ್ತರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.ದೇವಗಿರಿ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮತ್ತು ಡಿಡಿಪಿಐ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಂಘಟನೆಯ ಪ್ರತಿಭಟನೆ

ಇದೇ ವೇಳೆಸಂಘಟನೆಯ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ ಶಿಕ್ಷಕರ ಯಡವಟ್ಟಿನಿಂದಾಗಿ ಮಕ್ಕಳು ಶಿಕ್ಷೆ ಅನುಭವಿಸುವಂ ತಾಗಿದ್ದು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದಿ ದ್ದಾರೆ.ಕೋವಿಡ್-19 ಪರಿಣಾಮದಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಸಮರ್ಪಕ ವಾಗಿ ನಡೆಯದೆ ರಾಜ್ಯ ಸರ್ಕಾರವು ಹಾಜರಾತಿ ಕಡ್ಡಾಯ ಮಾಡಿಲ್ಲ.ಹೀಗಿದ್ದರೂ ಗೈರು ಹಾಜರಿ ನೆಪ ಹೇಳಿ ಪ್ರವೇಶ ಪತ್ರ ಕೊಡದೇ ಇರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಗಳೊಂದಿಗೆ ಪೊಷಕರು

ಒಟ್ಟು 64 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳಿಗೆ ಜುಲೈ 19 ಮತ್ತು 22ರಂದು ನಡೆಯುವ ವಾರ್ಷಿಕ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳು ಬಂದಿವೆ. ಆದರೆ ಇನ್ನೂ ಉಳಿದ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಸಿಗದಿರುವುದು ಆತಂಕಕಾರಿಯಾಗಿದೆ.ಪರೀಕ್ಷೆ ಅರ್ಜಿ ನಮೂನೆ ತುಂಬುವ ಬಗ್ಗೆ ಶಿಕ್ಷಕರು ಮಾಹಿತಿ ಯನ್ನೇ ಕೊಟ್ಟಿರಲಿಲ್ಲ.ಎಸ್‌ಎಫ್‌ಐ ಮುಖಂಡರಾದ ಕಿರಣ್ಣ ಎಂ, ಅಭಿ ಕೆ.ಎಚ್, ಕೃಷ್ಣ ಕಡಕೋಳ, ವಿದ್ಯಾರ್ಥಿಗಳಾದ ಮಹಮ್ಮದ್‌ ಫರಾನ್‌, ಭುವನ್ ವಂಟಿಕರ್, ಮಹ್ಮದ ಮುಸ್ತಫ ದಾವಣಗೆರೆ, ಶಾನಬಾಜ ಸೊರಬದ, ದುಲಶಾನ ತವನಂದಿ, ನಿಖಿತಾ ಪಾಟೀಲ್, ದಸ್ತಗೀರಿ ಕೊಂಡವಾಡಿ, ಉಮರ್ ಶರಬ್, ಅಲ್ಲಾಬಕ್ಷ್‌ ದಾವಣಗೆರೆ, ಇನಾಯತ್ ನಯಕೊಡಿ,ಫಯಾಜ್ ತವನಂದಿ, ಜಿಕ್ರಿಯಾ ಬಳ್ಳಾರಿ ಇದ್ದರು.ಕೆಲ ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಕಟ್ಟಿದ್ದರೂ ಈ ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರಗಳು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.