ಧಾರವಾಡ –
ಸಾಲ ಮರುಪಾವತಿಸಲು ಖಾಸಗಿ ಬ್ಯಾಂಕ್ ನಿಂದ ಬಂದ ನೋಟಿಸ್ ಗೆ ಹೆದರಿ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕಮಲಾಪೂರ ಬಡಾವಣೆಯ ರೈತ ಜಮೀನಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರುದ್ರಪ್ಪ ಕೋಟಿ(52) ಎಂಬುಬರೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.
ಸಚಿವ ಶಶಿಕಲಾ ಜೋಲ್ಲೆ ಒಡೆತನದ ಮಹಾರುದ್ರಪ್ಪ ಬೀರೇಶ್ವರ ಸೊಸೈಟಿ ಸೇರಿದಂತೆ ವಿವಿಧೆಡೆ 5 ಲಕ್ಷ ಸಾಲ ಮಾಡಿದ್ದರಂತೆ. ಈ ನಡುವೆ, ಸಾಲ ಮರುಪಾವತಿಸುವಂತೆ ಬೀರೇಶ್ವರ ಸೊಸೈಟಿ ನೋಟಿಸ್ ಜಾರಿ ಮಾಡಿದೆ.ನೊಟೀಸ್ ಬರುತ್ತಿದ್ದಂತೆ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬ್ಯಾಂಕ್ ನೊಟೀಸ್ ಇದರಿಂದ ಹೆದರಿದ ರೈತ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.