ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಇಲಾಖೆ – ನವಂಬರ್ 1 ರಿಂದ ಮತ್ತೊಂದು ಜವಾಬ್ದಾರಿ ಗೆ ಶಿಕ್ಷಕರು…..

Suddi Sante Desk

ಬೆಂಗಳೂರು –

ಕೊನೆಗೂ ನವಂಬರ್ 1 ರಿಂದ ರಾಜ್ಯದ ಶಾಲೆ ಗಳಲ್ಲಿ ಬಿಸಿ ಊಟ ವನ್ನು ಆರಂಭ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.ಹೌದು ಈಗಾಗಲೇ ಹಂತ ಹಂತವಾಗಿ ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡಿರುವ ಸರ್ಕಾರ ಈಗ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಕೂಡಾ ನಡೆಸಲು ಗ್ರೀನ್ ಸಿಗ್ನಲ್ ನೀಡಿದದು ಇದರ ಬೆನ್ನಲ್ಲೇ ಈಗ ನವೆಂಬರ್ 1 ರಿಂದ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭ ಮಾಡಲು ನಿರ್ಧಾರವನ್ನು ತಗೆದುಕೊಂಡಿದೆ.

ಹೌದು ಅಕ್ಟೋಬರ್ 1 ರಿಂದ 31 ರವರೆಗೆ ಬಿಸಿ ಯೂಟ ನೀಡುವ ಬಗ್ಗೆ ಅಗತ್ಯ ತಯಾರಿ ಸಿದ್ಧತೆ ಕುರಿತು ಮಾಹಿತಿಯನ್ನು ಸಂಗ್ರಹಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು ಇದರ ನಡುವೆ ಹಲವು ಜಿಲ್ಲೆ ಯಲ್ಲಿ ಸಿದ್ದತೆಯನ್ನು ಮಾಡಿಕೊಳ್ಳುವಂತೆ ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇನ್ನೂ ದಸರಾ ರಜೆ ಮುಗಿದ ನಂತರ ಶಾಲೆಗೆ ಬರುವ ಮಕ್ಕಳಿಗೆ ನವೆಂಬರ್ 1 ರಿಂದ ಬಿಸಿಯೂಟ ಯೋಜನೆ ಆರಂಭಿಸಲಾಗುತ್ತದೆ ಎಂದು ಇಲಾಖೆ ಯ ಅಧಿಕಾರಿಗಳು ಹೇಳಿದ್ದಾರೆ.ಇದಕ್ಕಾಗಿ ಶಾಲೆಗ ಳಲ್ಲಿ ಎಲ್ಪಿಜಿ ಸಿಲಿಂಡರ್,ಸ್ಟೋವ್ ಖರೀದಿ,ರಿಪೇರಿ, ಗ್ಯಾಸ್ ಪೈಪ್ ಬದಲಾವಣೆ,ಖರೀದಿ,ಅಕ್ಕಿ,ಗೋಧಿ, ತೊಗರಿಬೇಳೆ,ಆಹಾರಧಾನ್ಯ,ಎಣ್ಣೆ,ಉಪ್ಪು, ಸಾಂಬಾ ರ್ ಪುಡಿ,ಹಾಲಿನ ಪುಡಿ ದಾಸ್ತಾನು ಮಾಡಿಕೊಳ್ಳು ವಂತೆ ಸೂಚನೆ ನೀಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.