ಧಾರವಾಡ –
ಧಾರವಾಡದಿಂದ ಕವಲಗೇರಿ ಚಂದನಮಟ್ಟಿ ಯ ರಸ್ತೆ 5 ಕಿಲೋ ಮೀಟರ ರಸ್ತೆ ಸುಧಾರಣೆ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಚಾಲನ ನೀಡಲಾಯಿತು.
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ರಸ್ತೆ ಕಾಮಗಾರಿ ಭೂಮಿ ಪೂಜೆ ಮಾಡಿದರು.ಈ ಒಂದು ಸಂದರ್ಭದಲ್ಲಿ ಶಾಸಕರು ಮಾತನಾಡಿ ಧಾರವಾಡದ ಲೋಕೋಪಯೋಗಿ ಇಲಾಖೆಯ ವತಿಯಿಂದ ಶಾಸಕರ ಅನುದಾನದಲ್ಲಿ ಈ ಒಂದು ಕಾಮಗಾರಿಯನ್ನು ಮಾಡಲಾಗುತ್ತಿದೆ.
ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಗುತ್ತಿಗೆದಾರರಿಗೆ ಶಾಸಕರು ಸೂಚಸಿದರು. ಇನ್ನೂ ಈ ಒಂದು ಸಮಯದಲ್ಲಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಗುರನಾಥಗೌಡರು ಕವಲಗೇರಿ
ಚಂದನಮಟ್ಟಿ ಗ್ರಾಮದ ಗುರು ಹಿರಿಯರು ಪಕ್ಷದ ಕಾರ್ಯಕರ್ತರು ಗ್ರಾಮಸ್ಥರು ಆಪ್ತ ಕಾರ್ಯದರ್ಶಿ ಗಳಾದ ಪ್ರಕಾಶ ಕಟ್ಟಿ,ಮಂಜುನಾಥ ಹಿರೇಮಠ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಚಂದನಮಟ್ಟಿ ಗ್ರಾಮದಲ್ಲಿ ನೂತನ ವಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನವನ್ನು ಮಾಡಲಾಯಿತು.
ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಮಾಡಿ ಗೌರವಿಸಿದರು.