ASI ಬಂಧನ – ಪ್ರಕರಣ ವೊಂದರಲ್ಲಿ ಹಣದ ಬೇಡಿಕೆ ಇಟ್ಟಿದ್ದ ಶ್ರೀನಿವಾಸ್…..

Suddi Sante Desk

ಬೆಂಗಳೂರು –

ಯುವತಿ ನಾಪತ್ತೆ ಪ್ರಕರಣ ವೊಂದರ ಕುರಿತಂತೆ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಸದ್ಯದ ಸ್ಥಿತಿಯ ಮಾಹಿತಿ ನೀಡಲು ₹ 5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ASI ರೊಬ್ಬರು ACBಬಲೆಗೆ ಬಿದ್ದ ಘಟನೆ ಬೆಂಗಳೂರು ನಲ್ಲಿ ನಡೆದಿದೆ.ಹೌದು ಕಾಡುಗೋಡಿ ಪೊಲೀಸ್‌ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ದವರು ಬಂಧನ ಮಾಡಿ ಬಂಧನ ಮಾಡಿದ್ದಾರೆ

ಹೌದು ಜಯನಗರದ ನಿವಾಸಿ ರಾಮಮೂರ್ತಿ ನಗರದ ಯುವತಿಯನ್ನು ಪ್ರೀತಿಸಿ ವಿವಾಹವಾಗಿ ದ್ದರು.ಯುವತಿ ನಾಪತ್ತೆಯಾಗಿದ್ದಾರೆ ಎಂದು ಅವರ ಪೋಷಕರು ಕಾಡುಗೋಡಿ ಠಾಣೆಗೆ ದೂರು ನೀಡಿದ್ದ ರು.ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು. ವಿವಾಹ ನೋಂದಣಿ ಮಾಡಿಸಲು ಮುಂದಾಗಿದ್ದ ದಂಪತಿ,ನಾಪತ್ತೆ ಪ್ರಕರಣದ ತನಿಖೆ ಕುರಿತು ಮಾಹಿತಿ ನೀಡುವಂತೆ ತಮ್ಮ ಸ್ನೇಹಿತರ ಮೂಲಕ ಎಎಸ್‌ಐ ಅವರನ್ನು ಸಂಪರ್ಕಿಸಿದ್ದರು.

ಪ್ರಕರಣದ ಮಾಹಿತಿ ನೀಡಲು ₹ 5,000 ಲಂಚ ಕೊಡುವಂತೆ ಶ್ರೀನಿವಾಸ್‌ ಬೇಡಿಕೆ ಇಟ್ಟಿದ್ದರು.ಈ ಕುರಿತು ನವ ದಂಪತಿಯ ಸ್ನೇಹಿತರೊಬ್ಬರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು. ಶನಿವಾರ ಎಎಸ್‌ಐ ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿ ಯನ್ನು ಬಂಧಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಮಾಹಿತಿ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.