ಮಂಜು ಪಾವಗಡ ಬಿಗ್ ಬಾಸ್ – ಅರವಿಂದ್ ಕೆಪಿ ರನ್ನರ್ ಅಪ್ ವರ್ಗರಂಜಿತ ತೆರೆ ಬಿದ್ದಿತು ಬಿಗ್ ಬಾಸ್ 8 ನೇ ಆವೃತ್ತಿಗೆ…..

Suddi Sante Desk

ಬೆಂಗಳೂರು –

ಕರೋನ ಆತಂಕದ ನಡುವೆಯೂ ಆರಂಭಗೊಂಡಿ ದ್ದ ಬಿಗ್ ಬಾಸ್ ನ 8 ನೇ ಆವೃತ್ತಿಗೆ ಸಂಭ್ರಮದ ತೆರೆ ಬಿದ್ದಿದೆ.ಇನ್ನೂ ಮಂಜು ಪಾವಗಡ ವಿಜೇತರಾಗಿ ಹೊರಹೊಮ್ಮಿದ್ದಾರೆ.ಕೊರೋನಾ ಕಾರಣಕ್ಕೆ ಬಿಗ್ ಬಾಸ್ ಸೀಸನ್ ಶೂಟಿಂಗ್ ಬಂದ್ ಆಗಿದ್ದ ನಂತರ ಪುನಃ ಆರಂಭವಾಗಿತ್ತು.ಮತ್ತೆ ಶುರುವಾಗಿದ್ದಾಗ ಮಾತನಾಡಿದ್ದ ಮಂಜುಪಾವಗಡ ‘ಏನೋ ಸಾಧನೆ ಮಾಡಬೇಕು ಅಂತ ಇಲ್ಲಿ ಬಂದಿದ್ದೇವು.ಆದರೆ ಹೀಗೆ ಆಗಿಹೋಯಿತು ಎಂದು ಮಂಜು ನೊಂದಕೊಂಡು ಈಗ ಅವರೇ ವಿಜೇತರಾಗಿದ್ದಾರೆ.

ಹೌದು ಈಗ 8ನೇ ಆವೃತ್ತಿಯ‌ಲ್ಲಿ ಮಂಜು ಪಾವಗಡ ವಿನ್ನರ್ ಆಗಿದ್ದಾರೆ.ಕಷ್ಟ ಪಟ್ಟು ಮೇಲೆ ಬಂದ ಮಂಜು ಪಾವಗಡ ಅವರಿಗೆ ಅದ್ಭುತವಾದ ಯಶಸ್ಸು ಸಿಕ್ಕಿದೆ.

ಮಜಾಭಾರತದಲ್ಲಿ ಮನೆ ಮನೆಗೆ ನಗು ಹಂಚಿಸು ತ್ತಿದ್ದ ಮಂಜು ವಿನ್ನರ್ ಆಗಬೇಕು ಎಂದು ಮಜಾಭಾ ರತದ ಕಲಾವಿದರು ಹಾರೈಸಿದ್ದರು.ಮಜಾಭಾರತದ ತೀರ್ಪುಗಾರರ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಮಂಜುಗೆ ಶುಭ ಹಾರೈಸಿದ್ದರು.

ಎಲ್ಲ ಬಿಗ್ ಬಾಸ್ ಸ್ಪರ್ಧಿಗಳ ಎದುರಿನಲ್ಲಿ ಮಂಜು ಪಾವಗಡ ಕೈಯನ್ನು ಸುದೀಪ್ ಎತ್ತಿದ್ದಾರೆ.ಈ ಮೂಲಕ 50 ಲಕ್ಷದ ಬಹುಮಾನದ ಮೊತ್ತ ಮಂಜು ಪಾಲಾಗಿದೆ.ಗೆಲುವನ್ನು ಮಂಜು ಪಾವಗಡ ಮಜಾಭಾರತ ತಂಡಕ್ಕೆ ಅರ್ಪಿಸಿದ್ದಾರೆ.

ಬಿಗ್ ಬಾಸ್ ಮನೆ ಫಿನಾಲೆ ಹಂತದಲ್ಲಿ ಇದೆ. ಶನಿವಾರದ ಎಪಿಸೋಡ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರಗೆ ಬಂದಿದ್ದರು ಭಾನುವಾರ ಮೊದಲೆಯವರಾಗಿ ದಿವ್ಯಾ ಯು ಹೊರಗೆ ಬಂದರು.

ಈ ಬಾರಿ ಹಿಂದಿನ ಎಲ್ಲ ಬಿಗ್ ಬಾಸ್ ಗಳನ್ನು ಮೀರಿ ಜನ ವೋಟ್ ಮಾಡಿದ್ದಾರೆ.ಮೊದಲನೆ ಸ್ಥಾನದವ ರಿಗೆ 45 ಲಕ್ಷ ಎರಡನೇ ಸ್ಥಾನ ಪಡೆದುಕೊಂಡವರಿಗೆ 43 ಲಕ್ಷ ಮತ ಬಿದ್ದಿದೆ ಎಂದು ನಿರೂಪಕರಾಗಿರುವ ಸುದೀಪ್ ಅವರು ತಿಳಿಸಿದರು‌.

ಇನ್ನೂ ಅತ್ತ ಚಿಕ್ಕಬಳ್ಳಾಪುರ ದ ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್ ನಾರಾಯಣಸ್ವಾಮಿ ಚಿಂತಾಮಣಿ ಅಭಿನಂದನೆ ಸಲ್ಲಿಸಿದ್ದಾರೆ

ಬಿಗ್ ಬಾಸ್ ನಲ್ಲಿ ಹಲವಾರು ಸೀಸನ್ ಗಳಲ್ಲಿ ನಿಜವಾದ ಎಂಟರ್ಟೈನರ್ ಗೆ ಗೆಲುವಿನ ಪಟ್ಟ ಸಿಕ್ಕಿರಲಿಲ್ಲ ಆದರೆ ಈ ಬಾರಿ ಬಿಗ್ ಬಾಸ್ ಸೀಸನ್ 8 ರಲ್ಲಿ ಏನು ಇಲ್ಲದ ವ್ಯಕ್ತಿ ಗ್ರಾಮೀಣ ಮಟ್ಟದಲ್ಲಿ ಬಂದು ಮಜಾಭಾರತ ವೇದಿಕೆಯಲ್ಲಿ ಅಲ್ಪ ಸ್ವಲ್ಪ ಗುರುತಿಸಿಕೊಂಡು ಬಿಗ್ ಬಾಸ್ ಅನ್ನೋ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಅವಕಾಶ ಪಡೆದುಕೊಂಡು ಇಂದು ಇಡೀ ಕರ್ನಾಟಕದ ಜನತೆಯ ಪ್ರೀತಿಯನ್ನು ಪಡೆದ ನಮ್ಮ ವಾಲ್ಮೀಕಿ ನಾಯಕ ಸಮುದಾಯದ ಯುವ ಪ್ರತಿಭೆ ಮಂಜು ಪಾವಗಡ ಅವರು ವಿಜೇತರಾಗಿದ್ದಾರೆ.ಇದು ಅರ್ಥಪೂರ್ಣ ಗೆಲುವು
ಎಲ್ಲಾ ಇದ್ದು ಸಾಧಿಸುವುದು ಗೆಲುವಲ್ಲ ಏನು ಇಲ್ಲದೆ ಸಾಧಿಸ್ತೀವಲ್ಲ ಅದು ನಿಜವಾದ ಗೆಲುವು ಎಂದಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.