ಬೆಳಗಾವಿ –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಹಿರಿಯ ಹಾಗೂ ಪದವಿಧರೇತರ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಬೆಳಗಾವಿ ತಾಲೂಕು ಶಿಕ್ಷಕರ ಸೊಸೈಟಿ ಶಿವಾಜಿ ನಗರ ಬೆಳಗಾವಿಯವರು ಆಯೋಜಿಸಿದ ನಿವೃತ್ತಿ ಶಿಕ್ಷಕರ ಸತ್ಕಾರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜಾಧ್ಯಕ್ಷ ರಾದ ಸಿ ಎನ್ ಷಡಾಕ್ಷರಿ ಯವರನ್ನು ಸನ್ಮಾನ ಮಾಡಿ ಅವರ ನೌಕರರ ಪರ ಕಾಳಜಿ, ಉತ್ತಮ ಕಾರ್ಯ ಗಳಿಗಾಗಿ ಅಭಿನಂದನೆಗಳನ್ನು ಸಲ್ಲಿಸಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ನ್ಯಾಯಯುತ ಬೇಡಿಕೆ ಗಳಿಗೆ ಬೆಂಬಲಿಸಲು ಮನವಿ ಮಾಡಲಾಯಿತು

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ 7 ನೆಯ ವೇತನ ಆಯೋಗದಲ್ಲಿ ನಿಗದಿ ಯಾಗ ಬೇಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಣ ಸoಯೋಜಕರ ಹುದ್ದೆಗಳನ್ನು ಎನ್ ಜಿ ಎಚ್ ಎಮ್ ಹುದ್ದೆಗೆ ಈ ಹಿಂದೆ ನಂತೆ ಬಡ್ತಿ ಮೂಲಕವೇ ತುಂಬಬೇಕು ಎಂಬ ಬೇಡಿಕೆ ಸೇರಿದಂತೆ 8 ಮಹತ್ವದ ಬೇಡಿಕೆ ಗಳ ಮನವಿಯ ಪತ್ರ ವನ್ನು ನೀಡಲಾಯಿತು,ಈ ಬೇಡಿಕೆಗಳಿಗೆ ಸ್ವಂದಿಸುವ ಭರವಸೆ ನೀಡಿದರು ಈ ಸಮಯದಲ್ಲಿ ಜಿಲ್ಲಾ ಹಾಗೂ ವಿವಿಧ ತಾಲೂಕಾ ಪದಾಧಿಕಾರಿಗಳು ಉಪಸ್ಥಿತರಿದ್ದರು, ಸನ್ಮಾನ ಮಾಡುವ ಸಮಯದಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ರಾದ ಶಶಿಧರ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ,ನಗರ ಸಂಘದ ಅಧ್ಯಕ್ಷ ಅರ್ಜುನ ಡಿ ಸಾಗರ, ಪ್ರಧಾನ ಕಾರ್ಯದರ್ಶಿ ಬಸವರಾಜ ಹಟ್ಟಿಹೋಳಿ, ಸಂಘ ಟನಾ ಕಾರ್ಯದರ್ಶಿ ರಾಜೇಂದ್ರಕುಮಾರ ಚಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.