ನವದೆಹಲಿ –
ವಾಣಿಜ್ಯ ಬಳಕೆಯ LPG ಸಿಲಿಂಡರ್ ದರ ವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ ಹೌದು ಪಂಚ ರಾಜ್ಯ ಗಳ ಚುನಾವಣೆ ಮುಗಿದ ಬೆನ್ನಲ್ಲೇ ಸಧ್ಯ ಈ ಒಂದು ಸಿಲಿಂಡರ್ ದರ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಳವಾಗಿದೆ.
ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 21 ರೂ. ಏರಿಕೆ ಮಾಡಲಾಗಿದೆ.ತೈಲ ಮಾರುಕಟ್ಟೆ ಕಂಪನಿಗಳು ನೀಡಿದ ಮಾಹಿತಿಯಂತೆ ದೆಹಲಿ ಯಲ್ಲಿ ವಾಣಿಜ್ಯ ಎಲ್ಪಿಜಿ ಬೆಲೆಯನ್ನು 19 ಕೆಜಿ ಸಿಲಿಂಡರ್ ಗೆ ₹1,775.50 ರಿಂದ ₹1,796.50ಗೆ ಹೆಚ್ಚಿಸಲಾಗಿದೆ.
ಮುಂಬೈನಲ್ಲಿ 1,728 ರಿಂದ 1,749 ರೂ.ಗೆ ಏರಿಕೆ ಕಂಡಂತಾಗಿದ್ದು ಈಗಾಗಲೇ ಬೆಲೆ ಏರಿಕೆ ಯಿಂದಾಗಿ ತತ್ತರಿಸುವ ವ್ಯಾಪಾರಿಗಳಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಉಂಟಾಗಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..