ಧಾರವಾಡ –
ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ಒಂದೇ ಒಂದು ಮಾತು ಮುಖ್ಯಮಂತ್ರಿ ಬದಲಾಗು ತ್ತಾರೆನಾ ಯಡಿಯೂರಪ್ಪ ಕೆಳಗೆ ಇಳಿಯುತ್ತಾರೆನಾ ಏನಾಗುತ್ತದೆ ಎಂಬ ಚರ್ಚೆ ಮಾತು.ಇದೇಲ್ಲದರ ನಡುವೆ ಬಹುತೇಕ ಎಲ್ಲಾ ಶಾಸಕರು ಸಧ್ಯ ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಠಿಕಾಣೆ ಹೂಡಿದ್ದಾರೆ.ಬೆಂಗಳೂರಿನಲ್ಲಿ ಎಲ್ಲಾ ಶಾಸಕರು ಸುತ್ತಾಡುತ್ತಿದ್ದರೆ ಇತ್ತ ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಮ್ಮ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.

ಒಂದು ಕಡೆಗೆ ಬಿಟ್ಟು ಬಿಡಲಾರದ ಮಳೆ ಮತ್ತೊಂ ದು ಕಡೆಗೆ ತೀವ್ರವಾಗಿ ಕಾಡುತ್ತಿರುವ ಕರೋನಾ ಕಾಟ ಹೀಗಾಗಿ ಬೆಂಗಳೂರಿಗೆ ಹೋಗಿದ್ದ ಶಾಸಕರು ಕ್ಷೇತ್ರದ ಸಮಸ್ಯೆ ಅನುದಾನ ವಿಚಾರ ಕುರಿತಂತೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮರಳಿ ಧಾರ ವಾಡಗೆ ಬಂದು ಬಿಡುವಿಲ್ಲದೇ ಸುತ್ತಾಡುತ್ತಿದ್ದಾರೆ.

ಹೌದು ಕ್ಷೇತ್ರದಲ್ಲಿ ಮಳೆಯಿಂದಾಗಿ ಆಗಿರುವ ಅವಾಂತರ ಸಮಸ್ಯೆ ಕೋವಿಡ್ ನಿಂದಾಗಿ ಸಧ್ಯ ಪರಸ್ಥಿತಿ ಹೇಗಿದೆ ಇನ್ನೂ ಕರೋನಾ ಸಮಯದಲ್ಲಿ ಕರ್ತವ್ಯ ಮಾಡಿದ ಕರೋನಾ ವಾರಿಯರ್ಸ್ ಗಳಿಗೆ ಪ್ರಶಂಸನಾ ಪತ್ರದೊಂದಿಗೆ ಪ್ರತಿಯೊಬ್ಬರಿಗೂ 2000 ರೂಪಾಯಿ ನೀಡಿ ಗೌರವಿಸುತ್ತಿರುವುದು

ಇದರೊಂದಿಗೆ ಇನ್ನೂ ಕೆಲವು ವಿಚಾರ ಕುರಿತಂತೆ ಶಾಸಕ ಅಮೃತ ದೇಸಾಯಿ ಊರುರು ಸುತ್ತಾಡುತ್ತಾ ಸಮಸ್ಯೆಯನ್ನು ಆಲಿಸುತ್ತಿದ್ದಾರೆ.ಬಹುತೇಕ ಶಾಸಕ ರು ಬೆಂಗಳೂರಿನಲ್ಲಿ ಸುತ್ತಾಡುತ್ತಿದ್ದರೆ ಇತ್ತ ಇವರು ಕ್ಷೇತ್ರದಲ್ಲಿ ಊರುರು ಸುತ್ತಾಡುತ್ತಾ ಸಮಸ್ಯೆಯನ್ನು ಆಲಿಸುತ್ತಿದ್ದಾರೆ.

ಕಾಲ್ನಡಿಗೆ ಮೂಲಕ ಪ್ರತಿದಿನ ಸುರಿಯುವ ಮಳೆಯ ನಡುವೆ ಮನೆಯಲ್ಲಿ ಬೆಚ್ಚಗೆ ಕುಳಿತುಕೊಳ್ಳದೇ ಆಪ್ತ ರೊಂದಿಗೆ ಕ್ಷೇತ್ರದಲ್ಲಿನ ಒಂದೊಂದು ಊರಿನಲ್ಲಿನ ಸಮಸ್ಯೆ ಪರಸ್ಥಿತಿಯನ್ನು ಶಾಸಕ ಅಮೃತ ದೇಸಾಯಿ ಆಲಿಸುತ್ತಿದ್ದಾರೆ

ಅಲ್ಲದೇ ಅಧಿಕಾರಿಗಳನ್ನು ಕೂಡಾ ಕರೆದುಕೊಂಡು ಹೋಗುತ್ತಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದ ಲ್ಲಿಯೇ ಪರಿಹಾರವನ್ನೂ ನೀಡಿಸುತ್ತಿದ್ದಾರೆ ಇದರೊಂ ದಿಗೆ ಯುವ ಉತ್ಸಾಹಿ ಶಾಸಕ ಅಮೃತ ದೇಸಾಯಿ ಉತ್ಸಾಹದಿಂದ ಕಾಲಿಗೆ ಚಕ್ರವನ್ನು ಕಟ್ಟಿಕೊಂಡವ ರಂತೆ ಸಖತ್ ತಿರುಗಾಡುತ್ತಾ ಕ್ಷೇತ್ರದ ಜನರ ನೆರವಿಗೆ ಮುಂದಾಗಿದ್ದಾರೆ