ಹೆಬ್ಬಳ್ಳಿ –
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕರೋನ ಸಾಂಕ್ರಾಮಿಕ ರೋಗದಿಂದ, ಲಾಕಡೌನ ಆಗಿ ಕೆಲಸ ಇಲ್ಲದೆ ಇರುವುದರಿಂದ ತೀರ ಸಂಕಷ್ಟಕ್ಕೆ ಒಳಗಾದ ಜನರಿಗೆ ಅಹಾರ ಸಾಮಗ್ರಿಗಳನ್ನು ದಾನಿ ಗಳಿಂದ ಸಂಗ್ರಹಿಸಿ ಇಂದಿನಿಂದ ಗ್ರಾಮದಲ್ಲಿ ವಿತರಿ ಸುವ ಕಾರ್ಯವನ್ನು ಮಾಡಲಾಯಿತು.

ದೇಣಿಗೆ ನೀಡಿದ ಮಹನೀಯರು ಲೂಸಿ ಸಾಲ್ಡಾನ, ದಯಾನಂದ ಆಯಟ್ಟಿ, ಚನಬಸಪ್ಪ ಲಗಮಣ್ಣವರ, ಗಣೇಶ ರೇವಣಕರ, ಕಲ್ಪನ ಚಂದನಕರ ಪರಮೇಶ್ವ ರ ಕುದರಿ, ಅನುರಾಧಾ ಲಿಂಗನಗೌಡರ,ಸುಧೀರ್ ಕುಲಕರ್ಣಿ ಎಂ ಎಸ್ ಪಾಟೀಲ ಡಾ, ಬಸವರಾಜ ಅಂಗಡಿ, ಬಸವರಾಜ ತೇರದಾಳ, ಹೊನ್ನಪ್ಪ ಲಕ್ಕ ಮ್ಮನವರ ರವಿ ಮಟ್ಟಿ, ಮುತ್ತು ಸಿಂಗನಳ್ಳಿ ಸೇರಿದಂ ತೆ ಅನೇಕ ಮಹನೀಯರು ಸ್ವಯಂ ಪ್ರೇರಣೆಯಿಂದ ಅಹಾರ ಸಾಮಗ್ರಿಗಳನ್ನು ಕೊಡಲು ಮುಂದೆ ಬಂದಿದ್ದಾರೆ.

ಇಂದಿನಿಂದ ನಿತ್ಯ ಗ್ರಾಮದಲ್ಲಿ ಸಂಚರಿಸಿ ಕಡು ಬಡವರನ್ನು ಗುರುತಿಸಿ ಅವರಿಗೆ ಸಹಾಯ ಮಾಡು ವುದು ಮುಖ್ಯ ಉದ್ದೇಶವಾಗಿದೆ ಎಂದ ತಾಲ್ಲೂಕು ಪಂಚಾಯತ ಮಾಜಿ ಅಧ್ಯಕ್ಷೆ ಸುಮಂಗಲಾ ಕೌದೆಣ್ಣವರ, ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಹಡಪದ ತಿಳಿಸಿದರು

ಈ ಒಂದು ಆಲೋಚನೆ ಮಾಡಿ ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೀಮತಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅಧ್ಯಕ್ಷ ಎಲ್ ಐ ಲಕ್ಕಮ್ಮನವರ ಇವರ ಗಮನಕ್ಕೆ ತಂದಾಗ ಮೊದಲು ಈ ಕಾರ್ಯ ಮಾಡಿ ದಾನ ಕೊಡುವವರು ತುಂಬಾ ಜನ ಇದ್ದಾರೆ ಇಂತಹ ಪವಿತ್ರ ಕಾರ್ಯ ಮಾಡುವುದು ಇಂದು ತೀರ ಅಗತ್ಯವಿದೆ ಎಂದರು

ಕರೋನ ಸಾಂಕ್ರಾಮಿಕ ರೋಗದ ಕುರಿತು ಜನಜಾಗೃ ತಿ ಮೂಡಿಸುವುದರ ಜೊತೆಗೆ ಜನರು ಯಾವ ರೀತಿ ಸುರಕ್ಷತೆಯಿಂದ ಇರಬೇಕು ಎಂಬ ಬಗ್ಗೆ ತಿಳುವಳಿಕೆ ಯನ್ನು ನೀಡುವುದು ಸಹ ಬಹಳ ಮುಖ್ಯವಾಗಿದೆ ಎಂದರು

ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದಗ್ರಾಮ ಪಂಚಾಯತಿ ಅಧ್ಯಕ್ಷೆ ತೇಜಸ್ವಿನಿ ತಲವಾಯಿ, ತಮ್ಮಾ ಜಿರಾವ ತಲವಾಯಿ, ಗ್ರಾಮ ಪಂಚಾಯತಿ ಸದಸ್ಯ ರಾದ ನಿಂಗು ಮೊರಬದ ಬಸವರಾಜ ಲಕ್ಕಮ್ಮನವರ ಸುರೇಶ ಬನ್ನಿಗಿಡದ ಸಿದ್ದಪ್ಪ ಕುಂಬಾರ, ರೇಣುಕಾ ಅಸುಂಡಿ, ಮಂಜುನಾಥ ವಾಸಂಬಿ

ಪಿಡಿಒ ಬಿ ಡಿ ಚೌರಡ್ಡಿ,ಶಿವಶಂಕರ ಬೀಡಿ ಬಸವರಾ ಜ ಸುಂಕದ ಅಕ್ಷರತಾಯಿ ಲೂಸಿ ಸಾಲ್ಡಾನ ಸಂಸ್ಥೆ ಯ ಗೌರವಾ ಅದ್ಯಕ್ಷರಾದ ಭೀಮಪ್ಪ ಕಾಸಾಯಿ ಕಾರ್ಯದರ್ಶಿ ಚಂದ್ರಶೇಖರ ತಿಗಡಿ,ಶಿಕ್ಷಕರ ನಾಯ ಕರಾದ ಗುರು ತಿಗಡಿ ಕಾಶಪ್ಪ ದೊಡವಾಡ, ಶಂಕರ ಘಟ್ಟಿ ,ಅಶೋಕ ಸಜ್ಜನ,ಸಮಾಜಸೇವಕರಾದ ಪ್ರಕಾಶ ಕುಂಬಾರ, ಮುಂತಾದವರು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದರು.

ಸುಮಂಗಲಾ ಕೌದೆಣ್ಣವರ, ಬಸವರಾಜ ಹಡಪದ ಮಹಾದೇವ ಹೂಗಾರ ಎಲ್ ಐ ಲಕ್ಕಮ್ಮನವರ ಮಲ್ಲಿಕಾರ್ಜುನ ಉಪ್ಪಿನ, ಈರಣ್ಣ ಮೊರಬದ ಮುತ್ತು ಮೊರಬದ ಶಿವಾನಂದ ಹೂಗಾರ ಮುದುಕ ಪ್ಪ ದೇಸಾಯಿ,ಮೈಲಾರಿ ರಾಮನಗೌಡರ ಶಿವಾನಂ ದ ರಾಮನಗೌಡರ ಮುಂತಾದವರ ನೇತ್ರತ್ವದಲ್ಲಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಒಂದು ಕಾರ್ಯ ನಡೆಯುತ್ತಿದೆ.
