ಧಾರವಾಡ –
ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಗಳು ಲಾಕ್ ಡೌನ್ ನಡುವೆ ಎಲ್ಲರೂ ಮೆಚ್ಚುವಂತಹ ಕಾರ್ಯ ಕೆಲಸವನ್ನು ಮಾಡಿದ್ದಾರೆ.

ಹೌದು ಲಾಕ್ ಡೌನ್ ನ ಬಿಡುವಿಲ್ಲದ ಕೆಲಸ ಅಂದು ಕೊಂಡು ಕರ್ತವ್ಯ ಮಾಡುತ್ತಾ ಇದರೊಂದಿಗೆ ಇದರ ನಡುವೆ ಧಾರವಾಡದಲ್ಲಿ ಸಂಚಾರಿ ಪೊಲೀಸ್ ಠಾಣೆ ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಗರದಲ್ಲಿ ಎಲ್ಲರೂ ಮೆಚ್ಚುವಂತಹ ಕಾರ್ಯ ಕೆಲಸವನ್ನು ಮಾಡಿದ್ದಾರೆ.

ಹೌದು ನಗರದ ಕೋರ್ಟ್ ಸರ್ಕಲ್ ನಲ್ಲಿ ಇಂದು ಕೆಲವೊಂದಿಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿಕೊಂಡು ಸಧ್ಯದ ಪರಸ್ಥಿತಿಯನ್ನು ಅರಿತು ಕೊಂಡು ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟು ಕೊಂಡು ಸಸಿಯನ್ನು ನೆಟ್ಟಿದ್ದಾರೆ.

ಇದರೊಂದಿಗೆ ಸಾಮಾಜಿಕ ಒಳ್ಳೇಯ ಕೆಲಸವನ್ನು ಇವರು ಮಾಡಿದ್ದಾರೆ. ಒಂದು ಸಸಿಯನ್ನು ನೆಟ್ಟು ಅದಕ್ಕೆ ಭದ್ರತೆಯ ಜಾಳಿಗೆಯನ್ನು ಹಾಕಿ ನೀರನ್ನು ಹಾಕಿ ಕರ್ತವ್ಯದೊಂದಿಗೆ ಸಾಮಾಜಿಕ ಜವಾಬ್ದಾರಿ ಯ ಕಾರ್ಯವನ್ನು ಕೆಲಸವನ್ನು ಇವರು ಮಾಡಿದ್ದಾ ರೆ.

ದಿನಕ್ಕೊಂದು ಸಸಿ ನೆಡುವ ಯೋಜನೆಯನ್ನು ಇವ ರು ಹಾಕಿಕೊಂಡಿದ್ದು ಹೀಗಾಗಿ ಇಂದು ನಗರದಲ್ಲಿ ಮತ್ತೊಂದು ಸಸಿಯನ್ನು ನೆಟ್ಟು ಉತ್ತಮವಾದ ಕೆಲಸವನ್ನು ಧಾರವಾಡ ಸಂಚಾರಿ ಠಾಣೆಯ ಅಧಿಕಾ ರಿಗಳು ಮತ್ತು ಸಿಬ್ಬಂದಿಗಳು ಮಾಡಿ ಮಾದರಿಯಾ ದರು.

ಈ ಒಂದು ಕಾರ್ಯವು ಸಂಚಾರಿ ಪೊಲೀಸ್ ಠಾಣೆ ಯ ಎಎಸ್ ಐ ಅಧಿಕಾರಿಗಳಾದ ಎಸ್ ಸಿ ಮಣಕ ವಾಡ, ಎಮ್ ಎಸ್ ಕರಗನ್ನವರ,ಇನ್ನೂ ಇವರೊಂ ದಿಗೆ ಸಿಬ್ಬಂದಿ ಗಳಾದ ಕೆ ಲಮಾಣಿ, ಬಸವರಾಜ ಡೊಂಬರಕೊಪ್ಪ, ಎ ಎ ಸೌದಾಘರ್,ಹಲವರು ಪಾಲ್ಗೊಂಡು ಸಂಚಾರಿ ಪೊಲೀಸರ ಒಳ್ಳೇಯ ಕೆಲಸಕ್ಕೆ ಕೈ ಜೋಡಿಸಿದರು