This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಶತಮಾನಕಂಡ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ನಿರ್ಮಾಪಕ 2 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಿದ ಕೃಷ್ಣಪ್ಪ ರವರ ಕಾರ್ಯಕ್ಕೆ ಮೆಚ್ಚುಗೆ…..

Join The Telegram Join The WhatsApp

 


ಶಿವಮೊಗ್ಗ

ಶತಮಾನ ಕಂಡ ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಸರ್ಕಾರಿ ಶಾಲೆಗೆ ಚಿತ್ರ ನಿರ್ಮಾಪಕ ಎಂ.ವಿ. ಕೃಷ್ಣಪ್ಪ ಅವರು ಹೊಸ ರೂಪ ನೀಡಿದ್ದಾರೆ ಹೌದು ಸುಮಾರು 2 ಲಕ್ಷ ರೂ ಖರ್ಚು ಮಾಡಿ ಶಾಲೆಗೆ ಪೇಂಟಿಂಗ್ ಮಾಡಿಸಿದ್ದಾರೆ.ಸೊರಬ ತಾಲೂಕಿನ ಹೊಸಬಾಳೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಈಗ 110 ವರ್ಷ.ಶತಮಾನ ಕಂಡಿದ್ದ ಈ ಸರ್ಕಾರಿ ಶಾಲೆಗೆ ಪೇಂಟಿಂಗ್ ಮಾಡಿಸುವ ಮೂಲಕ ಚಿತ್ರ ನಿರ್ಮಾಪಕ ಎಂ.ವಿ. ಕೃಷ್ಣಪ್ಪ ಹೊಸ ರೂಪ ನೀಡಿದ್ದಾರೆ.

ಹೊಸಬಾಳೆಯ ಸರ್ಕಾರಿ ಪ್ರಾಥಮಿಕ ಶಾಲೆ ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿದೆ. ಈ ಶಾಲೆಯ ಬಗ್ಗೆ ಗ್ರಾಮಸ್ಥ ರಿಗೆ ಒಂದು ರೀತಿಯ ಅಸಡ್ಡೆ ಶಾಲೆಗೆ ಪೇಂಟಿಂಗ್ ಮಾಡಿಸಿ ದಶಕಗಳೇ ಕಳೆದು ಹೋಗಿದ್ದವು.ಇದರಿಂದ ಶಾಲೆಯ ಶಿಕ್ಷಕ ಹೊಳಿಯಪ್ಪ ಅವರು ತಮ್ಮ ಶಾಲೆಗೆ ಪೇಂಟಿಂಗ್ ಮಾಡಿ ಸಬೇಕೆಂದು ಚಿತ್ರ‌ ನಿರ್ಮಾಪಕ ಎಂ.ವಿ. ಕೃಷ್ಣಪ್ಪ ಅವರ ಸ್ನೇಹಿತರೊಬ್ಬರ ಬಳಿ ಮಾತನಾಡಿದ್ದರು.ಅವರು ಈ ವಿಚಾರವನ್ನು ಕೃಷ್ಣಪ್ಪ ಅವರಿಗೆ ಹೇಳಿದಾಗ ಅವರು ಶಾಲೆಯ ಅಡುಗೆ ಮನೆ ಅಂಗನವಾಡಿ ಸೇರಿದಂತೆ ಶಾಲಾ ಆವರಣದ ಎಲ್ಲಾ ಕಟ್ಟಡಗಳಿಗೆ ಪೇಂಟ್ ಮಾಡಿಸಿ ದ್ದಾರೆ ನಿರ್ಮಾಪಕ ಎಂ.ವಿ. ಕೃಷ್ಣಪ್ಪ ಅವರಿಗೆ ಧನ್ಯವಾದ ಹೇಳಿ ದ್ದಾರೆ ಶಾಲೆಯ ಶಿಕ್ಷಕರು.

ಶಾಲಾ ಆವರಣದ ಎಲ್ಲ ಕಟ್ಟಡದ ಒಳ ಹಾಗೂ ಹೊರ ಭಾಗಕ್ಕೆ ಶಾಲೆಯವರು ಹೇಳಿದಂತೆಯೇ ಬಣ್ಣ ಮಾಡಿಸಿ ದ್ದಾರೆ.ಇದಕ್ಕಾಗಿ ಸುಮಾರು 2 ಲಕ್ಷ ರೂ ನೀಡಿದ್ದಾರೆ.ಬಣ್ಣ ಬಳಿದ ನಂತರ ಶಾಲೆ ಸುಂದರವಾಗಿದೆ.ಇದರಿಂದ ಮಕ್ಕಳು ಸೇರಿದಂತೆ‌ ಶಾಲೆಯ ಎಲ್ಲ ಶಿಕ್ಷಕರಿಗೆ ಸಂತೋಷವನ್ನುಂಟು ಮಾಡಿದೆ ಎನ್ನುತ್ತಾರೆ ಶಿಕ್ಷಕರು.

ಎಂ.ವಿ.ಕೃಷ್ಣಪ್ಪ ಅವರು ಡಿಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷರಾಗಿದ್ದು ಸಾಮಾಜಿಕ‌ ಸೇವೆಯಲ್ಲಿ ತಮ್ಮನ್ನು ತಾವು ತೂಡಗಿಸಿಕೊಂಡಿದ್ದಾರೆ.‌ತಮ್ಮ ಶಾಲೆಗೆ ಬಣ್ಣ ಮಾಡಿಸಿ ಶಾಲೆಗೆ ಹೊಸ ರೂಪ ನೀಡಿದ ಅವರಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ


Join The Telegram Join The WhatsApp

Suddi Sante Desk

Leave a Reply