ಧಾರವಾಡ
ಬೈಕ್ ಗೆ ಬಸ್ ಡಿಕ್ಕಿ ಬೈಕ್ ಸವಾರ ಸಾವು
ಧಾರವಾಡ – ಕೆ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡದ ನವಲೂರು ಬಳಿ ನಡೆದಿದೆ ಈ ಒಂದು ಅಪಘಾತ ನಡೆದಿದ್ದು ಧಾರವಾಡದಿಂದ ಹುಬ್ಬಳ್ಳಿಯ ಕಡೆ ಬಸ್ ಹೋಗುತ್ತಿತ್ತು. ಇತ್ತ ಧಾರವಾಡದ ಕಡೆ ಬೈಕ್ ಸವಾರ ಹೋಗುತ್ತಿದ್ದ ಈ ವೇಳೆ ಈ ದುರ್ಘಟನೆ ನಡೆದಿದೆ. ಇನ್ನೂ ಮೃತ ಬೈಕ್ ಸವಾರನ ಮಾಹಿತಿಯನ್ನು ಸಂಚಾರಿ ಪೊಲೀಸರು ಕಲೆಹಾಕುತ್ತಿದ್ದಾರೆ.
ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.