ಹುಬ್ಬಳ್ಳಿ –
ಹುಬ್ಬಳ್ಳಿಯ ವಾರ್ಡ್ 42 ರಲ್ಲಿ ಬಿಜೆಪಿ ಅಭ್ಯರ್ಥಿ ಮಹಾದೇವಪ್ಪ ನರಗುಂದ ಅವರ ಪ್ರಚಾರ ಮುಂದುವರೆದಿದೆ.ಇಂದು ಕೂಡಾ ವಾರ್ಡ್ ನ ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡಿದರು.



ಈಗಾಗಲೇ ಪ್ರಚಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇವರ ಪರವಾಗಿ ಅಲೆ ಕಂಡು ಬರುತ್ತಿದ್ದು ಹೀಗಾಗಿ ಈ ಬಾರಿ ವಾರ್ಡ್ ನಲ್ಲಿ ಇವರ ಪರವಾಗಿ ಗಾಳಿ ಜೋರಾಗಿ ಬೀಸುತ್ತಿದ್ದು ಇಂದು ಕೂಡಾ ಹಲವು ಕಡೆಗಳಲ್ಲಿ ಅಬ್ಬರದ ಪ್ರಚಾರವನ್ನು ಮಾಡಿದರು.

ವಾರ್ಡ್ ನ ಬೆಂಗೇರಿ ಮುಲ್ಲಾ ಓಣಿಯಲ್ಲಿ ಅಲ್ಪ ಸಂಖ್ಯಾತರ ಸಮಾಜ ಮತ್ತು ಯುವಕರು ವತಿ ಯಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾಗಿರುವ ಮಹಾದೇವಪ್ಪ ನರಗುಂದ ಇವರಿಗೆ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.

ಇನ್ನೂ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಮಾಡಿ ಮತದಾರರಿಗೆ ಈ ಬಾರಿ ಬಿಜೆಪಿ ಬೆಂಬಲಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕಾಗಿ ಕೇಳಿಕೊಂಡರು.ಇನ್ನು ಈ ಮೂಲಕ ಎಲ್ಲಾ ಮತದಾ ರರಲ್ಲಿ ಕಳಕಳಿಯಿಂದ ವಿನಂತಿ ಮಾಡಿಕೊಂಡರು.
