ಬಾಗಲಕೋಟ –
ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ ಈ ಸರ್ಕಾರಿ ಶಾಲೆ – ಹೇಗಿದೆ ನೋಡಿ ಚಿಕನಾಳ ಸರ್ಕಾರಿ ಶಾಲೆ ಹೌದು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಚಿಕನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಶಿಸ್ತು ಶಿಕ್ಷಣ ಸಂಸ್ಕಾರ ದಿಂದ ಹೆಸರುವಾಸಿಯಾಗಿದೆ.
ಒಂದರಿಂದ 8 ರವರೆಗೆ ಇಲ್ಲಿ ಒಟ್ಟು 280 ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯಲ್ಲಿನ ಶಿಕ್ಷಣ, ಶಿಸ್ತು, ಡಿಜಿಟಲ್ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ಸ್ವಚ್ಚತೆ ಎಲ್ಲದರಲ್ಲೂ ಮುಂದೆ ಇದ್ದು ಸರಕಾರಿ ಶಾಲೆ ಖಾಸಗಿ ಶಾಲೆಗರ ಸೆಡ್ಡು ಹೊಡೆ ಯುತ್ತಿದೆ.
ಸರಕಾರಿ ಶಾಲೆಗಳಲ್ಲಿ ಶಿಸ್ತು ಇರೋದಿಲ್ಲ. ಶಿಕ್ಷಣ ಸರಿಯಿಲ್ಲ ಅಂತ ಎಷ್ಟೊ ಜನ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಾರೆ. ಆದರೆ ಇಂದಿಗೂ ಗ್ರಾಮೀಣ ಮಟ್ಟಣಲ್ಲಿ ಸರಕಾರಿ ಕನ್ನಡ ಶಾಲೆ ಗಳೇ ಮಕ್ಕಳಿಗೆ ದಾರಿ ದೀಪವಾಗಿವೆ ಅದೊಂದು ಗ್ರಾಮದ ಸರಕಾರಿ ಶಾಲೆ ಶಿಸ್ತು, ಶಿಕ್ಷಣ ಸಂಸ್ಕಾರ ಸ್ವಚ್ಚತೆಗೆ ಹೆಸರಾಗಿದೆ. ರಾಜ್ಯದ ಹತ್ತು ಶಿಸ್ತುಬದ್ದ ಶಾಲೆಯಲ್ಲಿ ಅದು ಕೂಡ ಒಂದಾಗಿದ್ದು ಬಡ ಮಕ್ಕಳಿಗೆ ಅಕ್ಷರದಾಸೋಹ ನೀಡುತ್ತಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಚಿಕನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಶಿಸ್ತು ಶಿಕ್ಷಣ ಸಂಸ್ಕಾರದಿಂದ ಹೆಸರುವಾಸಿ ಯಾಗಿದೆ. ಒಂದರಿಂದ 8 ರವರೆಗೆ ಇಲ್ಲಿ ಒಟ್ಟು 280 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಶಾಲೆಯಲ್ಲಿನ ಶಿಕ್ಷಣ, ಶಿಸ್ತು, ಡಿಜಿಟಲ್ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ಸ್ವಚ್ಚತೆ ಎಲ್ಲದರಲ್ಲೂ ಮುಂದೆ ಇದ್ದು ಸರಕಾರಿ ಶಾಲೆ ಖಾಸಗಿ ಶಾಲೆಗರ ಸೆಡ್ಡು ಹೊಡೆಯುತ್ತಿದೆ. ಗ್ರಾಮದ ಯಾವುದೇ ಒಬ್ಬ ವಿದ್ಯಾರ್ಥಿಗಳು ಬೇರೆ ಕಡೆ ಖಾಸಗಿ ಶಾಲೆ ಕಡೆ ಮುಖ ಮಾಡಿಲ್ಲ ಇದಕ್ಕೆ ಕಾರಣ ಇಲ್ಲಿನ ಶಿಕ್ಷಣ ಶಿಸ್ತು ಸ್ವಚ್ಚತೆ ಸಂಸ್ಕಾರ ಇದರಿಂದ ಮೊರಾರ್ಜಿ ಶಾಲೆಗರ ಆಯ್ಕೆಯಾದ ವಿದ್ಯಾರ್ಥಿಗಳು
ಕೂಡ ಅಲ್ಲಿಗೆ ಹೋಗದೆ ತಮ್ಮೂರ ಶಾಲೆಯಲ್ಲೇ ಓದುತ್ತಿದ್ದಾರೆ ಇಂತಹ ಶಾಲೆಯಲ್ಲಿ ಓದುತ್ತಿರೋದೆ ನಮಗೆ ಹೆಮ್ಮೆ ಅಂತ ಮನದುಂಬಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಈ ಶಾಲೆಯ ಮುಂದೆ ಐದು ಅಡಿ ತಗ್ಗು ಇತ್ತು ಅದನ್ನು ಮಣ್ಣು ಹಾಕಿ ಗ್ರಾಮಸ್ಥರು ಸಮತಟ್ಟು ಮಾಡಿದ್ದಾರೆ.
ಶಿಕ್ಷಣ ಇಲಾಖೆಯಿಂದ ದರಾ ಬೇಂದ್ರೆ ಕಲಾ ವೇದಿಕೆ ನಿರ್ಮಾಣ ಮಾಡಲಾಗಿದೆ. ಶಾಲೆ ಮುಂದೆ ಗಿಡಗಳ ಹಸಿರು. ಇನ್ನು ಶಾಲೆಯಲ್ಲಿ ಬಿಸಿಯೂಟ ಬಾರಿ ಶುಚಿ ರುಚಿಯಾಗಿರುತ್ತದೆ. ಮಕ್ಕಳು ಎಲ್ಲರೂ ಇದೇ ಕಲಾವೇದಿಕೆಯಲ್ಲಿ ಕೂತು ಪ್ರಾರ್ಥನೆ ಮಾಡಿ ಸಾಮೂಹಿಕ ಭೋಜನ ಮಾಡ್ತಾರೆ ಈ ಶಾಲೆಯ ಶಿಕ್ಷಣ ಗುಣಮಟ್ಟ ಹೇಗಿದೆ ಎಂದರೆ ಇಲ್ಲಿ ಕನ್ನಡ ಮಾದ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಎಂಬಿಬಿಎಸ್ ಓದಿ ವೈದ್ಯರಾಗಿದ್ದಾರೆ.
ವಾಯು ಸೇನೆಯಲ್ಲಿ ಅಧಿಕಾರಿಗಳಾಗಿದ್ದಾರೆ. ಶಾಲೆಯಲ್ಲಿ ಸಿಸಿಕ್ಯಾಮೆರಾ ಅಳವಡಿಸಿ ಅನೈತಿಕ ಚಟುವಟಿಕೆ ನಡೆಯದಂತರ ಹದ್ದಿನ ಕಣ್ಣಿಡ ಲಾಗಿದೆ ಶಿಕ್ಷಣ, ಶಿಸ್ತು ಸ್ವಚ್ಚತೆ ಕಾರಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯ್ಕೆ ಮಾಡಿದ ರಾಜ್ಯದ ಹತ್ತು ಶಾಲೆಗಳಲ್ಲಿ ಇದು ಕೂಡ ಒಂದಾಗಿದೆ.
ಶಾಲೆಗೆ 2021-23 ರಲ್ಲಿ ರಾಜ್ಯೋತ್ಸವ ಪುರಸ್ಕಾರ, ಸ್ವಚ್ಚತಾ ಪುರಸ್ಕಾರ, ಅತ್ಯುತ್ತಮ ಎಸ್.ಡಿ.ಎಮ್.ಸಿ ಪ್ರಶಸ್ತಿ ಸಿಕ್ಕಿವೆ.ಗ್ರಾಮದಲ್ಲಿ ಎಲ್ಲ ಸಮುದಾಯದ ಜನರಿದ್ದು ಎಲ್ಲ ಸಮಾಜದ ವರಿಗೂ ಎಸ್.ಡಿ.ಎಮ್.ಸಿಯಲ್ಲಿ ಸ್ಥಾನಮಾನ ನೀಡುತ್ತಾ ಬರಲಾಗಿದೆ.
ಗ್ರಾಮದ ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥತು ಸಂಪೂರ್ಣ ಸಹಕಾರ ನೀಡುತ್ತಿದ್ದು ಶಾಲೆಗೆ ವಿದೇಶಿಗರು ಕೂಡ ಭೇಟಿ ನೀಡಿದ್ದಾರೆ. ಆದರೆ ಶಾಲೆಯ ನಾಲ್ಕು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು ಸರಕಾರ ನಾಲ್ಕು ನೂತನ ಕೊಠಡಿ ಕಟ್ಟಿಸಿ ಕೊಡಬೇಕು ಅಂತಿದ್ದಾರೆ.
ವಿವಿಧ ವಿಶೇಷತೆಗಳ ಮೂಲಕ ಸರಕಾರಿ ಶಾಲೆ ಮಕ್ಕಳ ಭವಿಷ್ಯಕ್ಕೆ ದಾರಿಯಾಗುತ್ತಿದೆ. ಸರಕಾರಿ ಶಾಲೆ ಬಗ್ಗೆ ಅಸಡ್ಡೆ ಹೊಂದುವ ಈ ಕಾಲದಲ್ಲಿ ಈ ಹಳ್ಳಿ ಶಾಲೆ ಇಷ್ಟೊಂದು ಸಾಧನೆಯತ್ತ ಸಾಗಿದ್ದು ಶ್ಲಾಘನೀಯ.
ಸುದ್ದಿ ಸಂತೆ ನ್ಯೂಸ್ ಬಾಗಲಕೋಟ…..