This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ CM ಭ್ರಷ್ಟಾಚಾರ ಸಹಿಸೊದಿಲ್ಲ ಆಡಳಿತ ವಿಳಂಭ ನೀತಿಯನ್ನುಸಹಿಸೋದಿಲ್ಲ ಎನ್ನುತ್ತಾ ಅಧಿಕಾರಿಗಳನ್ನು ಎಚ್ಚರಿಸಿದ ನಾಡ ದೊರೆ…..


ಬೆಂಗಳೂರು –

ರಾಜ್ಯದಲ್ಲಿನ ಜಿಲ್ಲಾ ಆಡಳಿತಗಳು ರಾಜ್ಯದ ಬೆಳವಣಿಗೆಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಡಿಸಿಗಳ ಪಾತ್ರ ಹಲ ವಾರು ಜವಾಬ್ದಾರಿಗಳನ್ನು ಸನ್ನಿವೇಶಕ್ಕೆ ತಕ್ಕ ಹಾಗೆ ವಹಿಸಿ ಕೊಳ್ಳಬೇಕಾಗಿದೆ.ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಎಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆಯೋ ಅಷ್ಟು ಆಡಳಿತವೂ ಕ್ರಿಯಾಶೀಲವಾಗಿರುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಸಿಎಂ ಜಿಲ್ಲೆಯಲ್ಲಿ ನೇರ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತೀರಿ.ಪರಿಸ್ಥಿತಿಗೆ ತಕ್ಷಣ ಸ್ಪಂದಿಸಬೇಕಾಗುತ್ತದೆ.ಔಪಚಾರಿಕವಾಗಿ ಕೆಲಸ ಮಾಡಬೇ ಕಿಲ್ಲ ತಕ್ಷಣದ ಕ್ರಮ ವಹಿಸಬೇಕು.ಕ್ರಿಯಾಶೀಲರಾಗಿದ್ದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ.ಈಗ ಕಾಲ ಬದಲಾಗಿದೆ. ಜನ ಜಾಗೃತರಾಗಿದ್ದಾರೆ.ನಿಮ್ಮ ಕೆಲಸವನ್ನು ಪ್ರಶ್ನೆ ಮಾಡು ತ್ತಾರೆ.ಕ್ರಿಯಾಶೀಲವಾಗಿ ಕೆಲಸ ಮಾಡಿದರೆ ಪ್ರಶ್ನೆ ಮಾಡುವ ಪ್ರಮೇಯವಿರುವುದಿಲ್ಲ.ಇದಲ್ಲದೆ ಪರಿಹಾರ ನೀಡುವ ಕಾರ್ಯಕ್ರಮಗಳಲ್ಲಿ ಅಕ್ರಮಗಳನ್ನು ತಡೆಯಬೇಕು. ಭ್ರಷ್ಟಾ ಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ವಿಳಂಬಧೋರಣೆ ಸಲ್ಲದು.ವಿಳಂಬ ಧೋರಣೆಯು ಒಟ್ಟಾರೆ ರಾಜ್ಯದ ವರ್ಚಸ್ಸಿನ ಮೇಲೆ ಪ್ರಭಾವ ಬೀರಲಿದೆ ಎಂದರು.

ಇನ್ನೂ ಸರ್ಕಾರದ ಕಡೆಯ ವರ್ಷವಾಗಿರುವುದರಿಂದ ಈ ವರ್ಷ ಅನುಷ್ಠಾನಗೊಳ್ಳಬೇಕಿರುವ ಮುಂದುವರೆದ ಕಾರ್ಯಕ್ರಮಗಳು ಹಾಗೂ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ ಮಾಡಬೇಕಿದೆ.ಅದಕ್ಕಾಗಿ ಸೂಕ್ತವಾಗಿ ಯೋಜಿ ಸಬೇಕು.ಬಾಕಿ ಇರುವ ಕೆಲಸಗಳನ್ನು ಪೂರ್ಣ ಗೊಳಿಸಿ ಈ ಬಗ್ಗೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು.ಜೊತೆಗೆ ಜಿಲ್ಲೆಯ ಎಲ್ಲಾ ತಹಶೀಲ್ದಾರರ ಹಾಗೂ ಅಪರ ಜಿಲ್ಲಾಧಿಕಾರಿಗಳ ಕಚೇರಿಗೆ ವಾರಕ್ಕೊಮ್ಮೆ ಭೇಟಿ ನೀಡಬೇಕು.ಅರ್ಜಿಗಳು ಬಾಕಿ ಉಳಿಯದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.ಇದಲ್ಲದೆ ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಸಂದರ್ಭ ದಲ್ಲಿ ಎಲ್ಲಾ ಸಹಾಯಕ ಕಮಿಷನರ್,ತಹಶೀಲ್ದಾರ್, ಎಡಿಸಿ ಗಳು ಜೊತೆಗಿರಬೇಕು.ದೀನದಲಿತರಿಗೆ,ಬಡವರಿಗೆ, ರೈತರಿಗೆ ಯೋಜನೆಗಳನ್ನು ತಲುಪಿಸಬೇಕು.ಕಚೇರಿ ಕೆಲಸದ ಅವಧಿಯನ್ನು ವಿಸ್ತರಿಸಬೇಕು.ಇದರಲ್ಲಿ ಯಾವುದೇ ರಾಜಿ ಇಲ್ಲ.ಅಲ್ಲದೆ, ರಾಜ್ಯದ ವಿವಿಧ ಭಾಗಗ ಳಿಂದ ಮುಖ್ಯ ಮಂತ್ರಿಗಳ ಕಚೇರಿಯಲ್ಲಿ 16436 ಅರ್ಜಿ ಗಳು ಬಂದಿವೆ.10 ಸಾವಿರ ನಿಮಗೆ ಕಳಿಸಿದೆ.6000 ಬಾಕಿ ಇವೆ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲು ಒಂದು ಸೆಲ್ ರಚಿಸಲು ಸೂಚಿಸಿದರು.

ಇನ್ನು ಅರ್ಜಿ ಕೊಟ್ಟರೆ ಕೆಲಸವಾಗುವುದಿಲ್ಲ ಎಂಬ ಮಾತಿದೆ.ನಿಮ್ಮ ಪಾತ್ರ ಬಹಳ ಮುಖ್ಯ.ಬಡವರ ಕಾರ್ಯ ಕ್ರಮಗಳ ಅನುಷ್ಠಾನಕ್ಕೆ ಮಹತ್ವ ನೀಡಿ.ದೌರ್ಜನ್ಯ ಪ್ರಕರ ಣಗಳ ಬಗ್ಗೆ ಗಮನ ನೀಡಿ ಸರ್ಕಾರ ಪ್ರಮುಖ ಕಾರ್ಯ ಕ್ರಮಗಳಾದ ಮನೆ ಬಾಗಿಲಿಗೆ ದಾಖಲೆಗಳು ಮುಂತಾದ ವುಗಳ ಬಗ್ಗೆ ಪರಿಶೀಲಿಸಿ.ಹಾಗೆಯೇ ಪ್ರಾಧಿಕಾರದ ಅರ್ಜಿ ಗಳು,ಭೂ ಮಂಜೂರಾತಿ ಪ್ರಕರಣಗಳು,ಪಿಂಚಣಿಗಳು, ಗ್ರಾಮ ಒನ್ ಮುಂತಾದ ಯೋಜನೆಗಳ ಅನುಷ್ಠಾನದ ಬಗ್ಗೆ ಗಮನ ಹರಿಸಿ.ನಿಮ್ಮ ಆಡಳಿತದ ವೈಖರಿಯನ್ನು ಬದಲಾಯಿಸಿ,ಜನಪರ ಆಡಳಿತ ನೀಡಿ.ಉತ್ತರದಾಯಿತ್ವ, ಪಾರದರ್ಶಕತೆ ಇರಲಿ ಎಂದರು.ಇನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ಕಡತಗಳಿಗೆ ಪ್ರತಿಕ್ರಿಯೆ ನೀಡಬೇಕು. ಬಡಜನರು,ನಿರ್ಗತಿಕರು ಬರುತ್ತಾರೆ.ಅವರ ಸಮಸ್ಯೆಗ ಳನ್ನು ಬಗೆಹರಿಸಬೇಕು.ಜನರ ಪರವಾಗಿ ಕೆಲಸ ಮಾಡಲು ಒಂದು ಕಾರಣವಿದ್ದರೂ ಮಾಡಬೇಕು.ಎಲ್ಲಾ ಪ್ರಕರಣ ಗಳನ್ನು ತಿರಸ್ಕರಿಸಿದರೆ ಪ್ರಾಮಾಣಿಕರು ಎಂದು ಅರ್ಥವಲ್ಲ. ಜನರಿಗೆ ಸಹಾಯ ಮಾಡಿ.ಅದಕ್ಕಾಗಿ ಸ್ವಲ್ವವಾದರೂ ತೊಂದರೆ ತೆಗೆದುಕೊಳ್ಳಬೇಕು.ಜೊತೆಗೆ ಆಡಳಿತಕ್ಕೆ ಚುರುಕು ಮುಟ್ಟಿಸಲು ಹಾಗೂ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನವನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳುವುದು ಎಂದು ಸೂಚಿಸಿದರು.ಅಗತ್ಯವಿರುವಲ್ಲಿ ಮಾತ್ರ ಸಿಇಒ ಗಳ ಬಳಿ ಇರುವ ಅನುದಾನವನ್ನು ಬಳಸಿಕೊಳ್ಳುವುದು.ಅಲ್ಲದೆ ಭೂಮಿ ಯೋಜನೆಯಡಿ ಜಿಲ್ಲೆಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿದ ಮುಖ್ಯಮಂತ್ರಿಗಳು ಭೂಮಿ ಕಾರ್ಯ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಪ್ರಕರ ಣಗಳ ವಿಲೇವಾರಿಯನ್ನು 30 ದಿನಗಳೊಳಗೆ ಮಾಡಬೇಕೆಂ ದರು.ಭೂ ಮಂಜೂರಾತಿ ಭೂ ಪರಿವರ್ತನೆ,ಸರ್ವೆ ಇಲಾಖೆ ಯಲ್ಲಿ ಅಳತೆಗಾಗಿ ಬಾಕಿ ಇರುವ ಅರ್ಜಿಗಳು, ತಹಶೀಲ್ದಾ ರರ ಬಳಿ 3 ಮತ್ತು 9 ವಿಸ್ತೀರ್ಣ ವ್ಯತ್ಯಾಸದಿಂದ ತಿದ್ದುಪಡಿ ಗಾಗಿ ಬಾಕಿ ಇರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡುವುದು.ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಲು ಕ್ರಮ ವಹಿಸುವುದು ಮೂಲಸೌಕರ್ಯ ಯೋಜನೆಗಳಲ್ಲಿ ಭೂ ಸ್ವಾಧೀನಕ್ಕೆ ವೇಗ ನೀಡಿ, ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಆದ್ಯತೆ ನೀಡುವುದು.

  1. 72 ಗಂಟೆಗಳಲ್ಲಿ ಅರ್ಜಿ ವಿಲೇವಾರಿಯಾಗುವ ಬಗ್ಗೆ ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡುವುದು. ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು.ಜಿನೋಮ್ ಸೀಕ್ವೆನ್ಸಿಂಗ್ ಎಲ್ಲಾ ಪ್ರಕರಣಗಳಿಗೂ ಮಾಡುವ ಅಗತ್ಯವಿಲ್ಲ.15-18 ವಯೋಮಾನದವರಿಗೆ ಶೇ 100ರಷ್ಟು ಲಸಿಕೆ ಹಾಕುವುದು.ಗ್ರಾಮ ಒನ್ ಕೇಂದ್ರ ಗಳ ಸ್ಥಾಪನೆಯ ಸ್ಥಿತಿಗತಿ ವ್ಯವಸ್ಥೆ ಪರಿಪೂರ್ಣವಾಗಿ ರಬೇಕು.ಯೋಜನೆಯನ್ನು ಟಾಸ್ಕ್ ನಂತೆ ಕೈಗೊಳ್ಳ ಬೇಕು.ಪ್ರಾದೇಶಿಕ ಆಯುಕ್ತರು ಮೇಲ್ವಿಚಾರಣೆ ಮಾಡುವುದು.ಗ್ರಾಮ ಒನ್ ಕೇಂದ್ರಗಳಲ್ಲಿ ಎಷ್ಟು ಅರ್ಜಿಗಳು ಬಂದಿವೆ ಎಷ್ಟು ಪ್ರಮಾಣಪತ್ರಗಳ ವಿಲೇವಾರಿಯಾಗುತ್ತಿವೆ ಎಂದು ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಪರಿಶೀಲಿಸಬೇಕು ಎಂದು ಸೂಚಿಸಿ ದರು.ಇದಲ್ಲದೆ,ಮಂಡ್ಯ,ಮೈಸೂರು,ದಕ್ಷಿಣ ಕನ್ನಡ , ಹಾಸನ,ಚಾಮರಾಜನಗರ,ರಾಯಚೂರು, ವಿಜಯ ನಗರ ಜಿಲ್ಲೆಗಳಲ್ಲಿ ಸ್ಥಾಪಿಸಬೇಕಿರುವ ಗ್ರಾಮ ಒನ್ ಕೇಂದ್ರಗಳನ್ನು ತಕ್ಷಣ ಪ್ರಾರಂಭ ಮಾಡಲು ಸೂಚಿಸಿ ದರು. ಈ ತಿಂಗಳೊಳಗೆ ಅನುಮೋದನೆ ನೀಡಿ ಉದ್ಘಾಟನೆಗೆ ಕ್ರಮ ವಹಿಸುವುದು.ಜೊತೆಗೆ ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಕಾಲಮಿತಿಯೊಳಗೆ ತಾಲ್ಲೂಕು ಮಟ್ಟದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕ ಅಲ್ಪಾವಧಿ ಟೆಂಡರ್ ಕರೆಯುವುದು. ಯಾವುದೇ ಟೆಂಡರ್ ನಲ್ಲಿ ಎಲ್ – 1 ಗೆ ಕೊಡಬೇಕು.ಇಲ್ಲದಿದ್ದರೆ ಟೆಂಡರ್ ರದ್ದುಪಡಿಸಬೇ ಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು.ಅಮೃತ್ ನಿರ್ಮಲ್ ನಗರ ಯೋಜನೆಯಡಿ ಬಾಕಿ ಇರುವ ಟೆಂಡರ್ ಗಳನ್ನು ಕರೆಯುವುದು ಈಗಾಗಲೇ ಟೆಂಡರ್ ಕರೆದಿರುವುದಕ್ಕೆ ಕಾರ್ಯಾದೇಶ ನೀಡು ವುದು.ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು. ನಗರ ಪ್ರದೇಶಗಳಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ: ಬಿ.ಆರ್.ಅಂಬೇಡ್ಕರ್ ವಿವಾಸ್ ಯೋಜನೆ- ನಗರದಡಿ ಫಲಾನುಭವಿಗಳ ಕನಿಷ್ಠ ಆಯ್ಕೆ ಮಾಡಿರುವ ಜಿಲ್ಲೆಗಳಾದಬೆಂಗಳೂರು ನಗರ,ಕಲಬುರ್ಗಿ,ಧಾರವಾಡ,ಹಾಸನ, ವಿಜಯ ನಗರ ಮೇ ಅಂತ್ಯದೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಳಿಸುವುದು. ಈ ಬಗ್ಗೆ 15 ದಿನಗಳಲ್ಲಿ ಪ್ರಗತಿ ಕಡಿಮೆ ಇರುವ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸು ವುದು.ಅಲ್ಲದೆ ಪ್ರಧಾನಮಂತ್ರಿ ಆವಾಸ್ ಯೋಜನೆ ಯಡಿ ಫಲಾನುಭವಿಗಳ ವಂತಿಕೆ ಮತ್ತು ಫಲಾನುಭ ವಿಗಳಿಗೆ ಬ್ಯಾಂಕ್ ಸಾಲ ಮಂಜೂರಾತಿಗಾಗಿ ಜಿಲ್ಲಾಧಿ ಕಾರಿಗಳು ಕೂಡಲೇ ಬ್ಯಾಂಕರ್ ಗಳ ಸಭೆ ಕರೆದು ಕ್ರಮ ವಹಿಸುವುದು.ಜೊತೆಗೆ ಬೆಳಗಾವಿ, ಕಲಬುರ್ಗಿ, ಬೆಂಗಳೂರು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಐದು ಮೆಗಾ ಹಾಸ್ಟೆಲ್‌ ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

Google News Join The Telegram Join The WhatsApp

 

Suddi Sante Desk

Leave a Reply