ಹುಬ್ಬಳ್ಳಿ –
ಹುಬಳ್ಳಿ ಧಾರವಾಡದ ಬಿಆರ್‌ಟಿಎಸ್ ಯೋಜನೆ ಅವೈಜ್ಞಾನಿಕವಾಗಿದ್ದು ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅವೈಜ್ಞಾನಿಕ ಯೋಜನೆಯಿಂದ ಅವಳಿ ನಗರದ ಜನತೆ ಕಂಗಾಲಾಗಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದವರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿದರು.

ನಗರದ ಹೊಸೂರ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಸಂಘಟನೆಯವರು ಅವೈಜ್ಞಾನಿಕ ಕಾಮಗಾರಿ ಕಾಮಗಾರಿ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ರು.

ದಿನದಿಂದ ದಿನಕ್ಕೇ ಈ ಒಂದು ಕಾಮಗಾರಿಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ ಎಂದರು. ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರು ಪ್ರತಿಭಟನೆ ಮಾಡಿದರು.

ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು ಅಪಾಯಕಾರಿ ಬಿಆರ್‌ಟಿಎಸ್ ಬೇಡವೇ ಬೇಡ ಎಂದು ಘೋಷಣೆಗಳನ್ನು ಕೂಗಿದರು.
ಕೈಯಲ್ಲಿ ಪೊರಕೆ ಹಿಡಿದ ಆಪ್ ಕಾರ್ಯಕರ್ತರು ಇಲಾಖೆಯ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿದರು.