This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

Health & Fitness

ವಾರಕ್ಕೊಮ್ಮೆಯಾದ್ರೂ ಹೀಗೆ ನಡಿಯಬೇಕಂತೆ – ಏನಾಗುತ್ತದೆ ನಿವೇ ನೋಡಿ.

WhatsApp Group Join Now
Telegram Group Join Now

ಬೆಂಗಳೂರು –

ಬದಲಾದ ಇಂದಿನ ಜನಜೀವನ ವ್ಯವಸ್ಥೆಯ ನಡುವೆ ಎಲ್ಲವೂ ಬದಲಾಗಿದೆ. ಹಿಂದೆ ಮಾಡಲಾಗುತ್ತಿದ್ದ ಕೆಲಸ ಕಾರ್ಯಗಳನ್ನು ಇಂದು ಯಂತ್ರಗಳ ಮೂಲಕ ಮಾಡಿಸುತ್ತಿದ್ದೇವೆ. ದೂರ ದೂರ ನಡೆದುಕೊಂಡು ಹೋಗುತ್ತಿದ್ದ ಮನಷ್ಯನನ್ನು ಬೈಕ್ ಕಾರುಗಳು ಹೊತ್ತುಕೊಂಡು ಹೋಗುತ್ತಿವೆ. ಹೀಗೆ ಬದಲಾದ ವ್ಯವಸ್ಥೆಯ ನಡುವೆ ಸಿಕ್ಕ ಮನುಷ್ಯ ಬದಲಾಗಿದ್ದು ಇದರೊಂದಿಗೆ ದೇಹಕ್ಕೇ ಹತ್ತು ಹಲವಾರು ರೋಗಗಳನ್ನು ತಂದುಕೊಂಡಿದ್ದಾನೆ. ಹಿಂದೆ ಇದ್ದ ವ್ಯವಸ್ಥೆಯನ್ನು ಇಂದು ನಾವು ಮಾಡಲು ಹೊರಟರೇ ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಸ್ವಲ್ಪು ಬಿಡುವಿಲ್ಲದೇ ಕಾಲಚಕ್ರದ ಹಾಗೇ ತಿರುಗುತ್ತವೆ ದುಡಿಯಲು ಬಡಿದಾಡುತ್ತೇವೆ. ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಎಲ್ಲಿ ನೋಡಿದಲ್ಲೂ ಹೈಟೇಕ್ ಹೈಟೇಕ್ ಹೀಗಿರುವಾಗ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಲ್ಲಿ ಇರುತ್ತದೆ ಹೇಳಿ. ಇಂಥಹ ಪರಸ್ಥಿತಿಯ ನಡುವೆಯೂ ಸಿಕ್ಕಾಪಟ್ಟಿಯಾದ ಒತ್ತಡದ ಜನಜೀವನದ ನಡುವೆ ನಾವು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸಮಯ ಕೊಡಬೇಕು. ಹೌದು ಬೆಳಿಗ್ಗೆ ಮತ್ತು ತಪ್ಪದೇ ವಾಕಿಂಗ್ ಮಾಡಬೇಕು. ಇದಕ್ಕೂ ಕೂಡಾ ನಮ್ಮ ಬಳಿ ಸಮಯವಿಲ್ಲದಂತಹ ಒತ್ತಡದ ಜೀವನವನ್ನು ನಾವು ಇಂದು ನಡೆಸುತ್ತಿದ್ದೆವೆ. ಇದು ಸರ್ವೆ ಸಾಮಾನ್ಯವಾದ್ರೆ ಇದರ ನಡುವೆ ವಾರಕ್ಕೊಮ್ಮೆಯಾದ್ರೂ ಒಂದು ಕಿಲೋ ಮೀಟರ್ ಬರಿಗಾಲಿನಲ್ಲಿ ನಡೆಯಬೇಕಂತೆ.

ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದೆ ನಡೆಯಲು ಆರಂಭಿಸಿ.ಹೀಗೆ ನಡೆಯಲು ಮುಖ್ಯ ಉದ್ದೇಶ ಯಾಕೆ ಗೊತ್ತಾ ಆಧುನಿಕ ಕಾಲ, ಮಾಡ್ರನ್ ಸ್ಟೈಲ್ ಹೆಸರಿನಲ್ಲಿ ಮಲಗುವ ಕೋಣೆಯಲ್ಲೂ ಚಪ್ಪಲಿ ಹಾಕಿಕೊಂಡು ಓಡಾಡುವ ಕಾಲ ಇದು. ಮನೆಯಲ್ಲಿ ನುಣ್ಣಗಿನ ಪಾಲಿಶ್ ಬಂಡೆಗಳು, ಇನ್ನೂ ಸ್ಮೂತ್ ಆದ ಚಪ್ಪಲಿಗಳು. ಎಲ್ಲೂ ಪಾದಗಳಿಗೆ ಸ್ವಲ್ಪವೂ ತಗುಲುವಂತಿಲ್ಲ. ಹೀಗಿರುವಾಗ ಬೆಳಗ್ಗೆ ಹಾಸಿಗೆ ಮೇಲಿಂದ ಇಳಿಯುವರಿಂದ ಆರಂಭವಾದ ನಮ್ಮ ದಿನದ ಜೀವನ ಮತ್ತೆ ರಾತ್ರಿ ಬೆಡ್ ಮೇಲೆ ಮಲಗುವವರೆಗೂ ಕಾಲುಗಳು ಮಾತ್ರ ಖಾಲಿಯಾಗಿ ಬಿಡುವ ಪರಿಸ್ಥಿತಿಯೇ ಇಲ್ಲ. ಸಾಧ್ಯವಾದರೆ ಚಪ್ಪಲಿ, ಇಲ್ಲದಿದ್ದರೆ ಸ್ಯಾಂಡಲ್ಸ್, ಅದು ತಪ್ಪಿದರೆ ಸ್ಫೋರ್ಟ್ಸ್ ಶೂಸ್. ಈ ರೀತಿ ಟೈಮ್‌ಗೆ ತಕ್ಕಂತೆ ಯಾವುದೋ ಒಂದು ಪಾದರಕ್ಷೆಗಳನ್ನು ಬಿಗಿದು ನಮ್ಮ ಪಾದಗಳನ್ನು ಮುಚ್ಚುತ್ತಿದ್ದೇವೆ.ಹೀಗೆ ಸಮಯಕ್ಕೇ ತಕ್ಕಂತೆ ಪಾದರಕ್ಷೆಗಳನ್ನು ನಮ್ಮ ಕಾಲಿಗೆ ಹಾಕಿ ಹಾಕಿ ನಮ್ಮ ಕಾಲುಗಳನ್ನು ತುಂಬಾ ತುಂಬಾ ನಾಜೂಕಾಗಿ ಮಾಡಿ ಬಿಟ್ಟಿದ್ದೇವೆ.

ಇದು ಯಾವುದೇ ರೀತಿಯಲ್ಲೂ ಮೈಗೆ ಒಳ್ಳೆಯದು ಅಲ್ಲ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ನಮ್ಮ ಪೂರ್ವಿಕರು ನಿರಂತರ ಹಳ್ಳಕೊಳ್ಳಗಳ ರಸ್ತೆಯಲ್ಲಿ, ಹೊಲದ ಬದುಗಳ ಮೇಲೆ ತಿರುಗಿದ ಕಾರಣ ತುಂಬಾ ಆಕ್ಟೀವ್ ಆಗಿ ಇರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಸ್ಟೈಲ್ ಹೆಸರಲ್ಲಿ ಅಡುಗೆ ಮನೆಯಿಂದ ಹಿಡಿದು ಟಾಯ್ಲೆಟ್ ಬಾಥರೂಮ್ ಮನೆಯ ಒಳಗೆ ಹೊರಗೆ ಬೆಡ್ ರೂಮಿನಲ್ಲೂ ಚಪ್ಪಲಿ ಬಳಸುತ್ತಿದ್ದವೆ.ಬೆಳಗ್ಗೆ ಮಂಚ ಇಳಿಯುವುದರಿಂದ ಆರಂಭವಾಗಿ ರಾತ್ರಿ ಬೆಡ್ ಹತ್ತುವವರೆಗೂ ಕಾಲುಗಳನ್ನು ಮಾತ್ರ ಖಾಲಿ ಬಿಡುವ ಪರಿಸ್ಥಿತಿ ಇಲ್ಲ. ಪಾದಗಳನ್ನು ಖಾಲಿ ಬಿಡುತ್ತಿಲ್ಲ.

ಈ ರೀತಿ ಮಾಡುವುದರಿಂದ ನಮ್ಮ ದೇಹಕ್ಕೆ ನಾವೇ ಶಿಕ್ಷೆ ವಿಧಿಸುತ್ತಿದ್ದೇವೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇನ್ನು ಮುಂದಾದರೂ ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದಂತೆ ನಡೆಯುವ ಪ್ರಯತ್ನ ಮಾಡಿ ಇಲ್ಲದಿದ್ದರೆ ನಿಮ್ಮ ಆರೋಗ್ಯ ಅಪಾಯಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸುತ್ತಿದ್ದಾರೆ ವೈದ್ಯರು.ಆದರೆ ಇನ್ನು ಮುಂದೆ ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದೆ ನಡೆಯುವ ಪ್ರಯತ್ನ ಮಾಡಿ.

ಚಪ್ಪಲಿ ಇಲ್ಲದೇ ನಡೆಯುವದರಿಂದ ಆಗುವ ಲಾಭಗಳು

ಹೌದು ನಾವು ಒಂದೇ ಒಂದು ದಿನ ನಮ್ಮ ಕಾಲುಗಳಿಗೆ ಚಪ್ಪಲಿ ಇಲ್ಲದೇ ನಡೆದು ನೋಡಿ ಏನೇನು ಅನುಭವ ಆಗುತ್ತದೆ ಅಂತಾ. ದೇಹದ ಭಂಗಿ ಸೂಕ್ತ ರೀತಿಯಲ್ಲಿರುತ್ತದೆ.ಹೊಟ್ಟೆಯ ಮೇಲೆ ಒತ್ತಡ ಉಂಟಾಗಿ, ಜೀರ್ಣಕ್ರಿಯೆ ಸೂಕ್ತ ರೀತಿಯಲ್ಲಿ ನಡೆಯುತ್ತದೆ.ಚಪ್ಪಲಿ ಇಲ್ಲದಂತೆ ನಡೆಯುವುದರಿಂದ, ಮರಳು, ಚಿಕ್ಕ ಚಿಕ್ಕ ಕಲ್ಲುಗಳು ಮೃದುವಾಗಿ ಚುಚ್ಚಿಕೊಳ್ಳುವುದರಿಂದ, ನಿಮ್ಮ ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ.ಏನೋ ಹೊಸ ಸ್ಪರ್ಶವನ್ನು ಪಾದಗಳು ಪಡೆಯುವುದರಿಂದ ಮೈಂಡ್ ರಿಲ್ಯಾಕ್ಸ್ ಆಗುತ್ತದೆ. ರಕ್ತ ಸಂಚಲನೆ ವ್ಯವಸ್ಥೆ ಕ್ರಿಯೆ ಉತ್ತಮಗೊಳ್ಳುತ್ತದೆ.

ಸಹನೆ ಹೆಚ್ಚುತ್ತದೆ.ಮಾನವನ ಪಾದಗಳಲ್ಲಿ 72 ಸಾವಿರ ನರಗಳ ತುದಿ ಇರುತ್ತದೆ. ಹೆಚ್ಚು ಹೊತ್ತು ಪಾದರಕ್ಷೆಗಳನ್ನು ಬಳಸುವುದರಿಂದ ಸೂಕ್ಷ್ಮವಾದ ಈ ನರಗಳು ಸಂವೇದನೆಯನ್ನು ಕಳೆದುಕೊಳ್ಳುತ್ತವೆ. ಚಪ್ಪಲಿ ಇಲ್ಲದಂತೆ ನಡೆಯುವುದರಿಂದ ಆಕ್ಟೀವ್ ಆಗಿ ಇರುತ್ತದೆ.ಆದಕಾರಣ ಇನ್ನು ಮುಂದೆಯಾದರು. ಪಾರ್ಕ್‌ಗಳಲ್ಲಿ ಮನೆಯ ಒಳಗೆ ಅಲ್ಪ ಸ್ವಲ್ಪು ಹೊರಗೆ ಹಾಗೇ ಕಚೇರಿಯಲ್ಲಿ, ಮನೆಯಲ್ಲಿ ಚಪ್ಪಲಿ ಇಲ್ಲದಂತೆ ನಡೆಯುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ ಆರೋಗ್ಯವಾಗಿ ಇರಿ.

ಯಾವ ವಯಸ್ಸಿನವರು ಎಷ್ಟು ನಡೆಯಬೇಕು:
40 ವರ್ಷಗಳು ಮತ್ತು ಅದಕ್ಕಿಂತಲೂ ಕಡಿಮೆ ವಯಸ್ಸುಳ್ಳುವರು ಪ್ರತಿ ದಿನ ಕನಿಷ್ಠ 3.75 ಕಿ.ಮೀ ನಡೆಯಬೇಕು.
40 ರಿಂದ 45 ವರ್ಷದವರು ಪ್ರತಿ ದಿನ ಕನಿಷ್ಠ 3.5 ಕಿ.ಮೀ ನಡೆಯಬೇಕು
45 ರಿಂದ 50 ವರ್ಷದವರು ಪ್ರತಿ ದಿನ ಕನಿಷ್ಠ 3.3 ಕಿ.ಮೀ ನಡೆಯಬೇಕು
50 ರಿಂದ 55 ವರ್ಷದವರು ಪ್ರತಿ ದಿನ ಕನಿಷ್ಠ 3.1 ಕಿ.ಮೀ ನಡೆಯಬೇಕು
55 ರಿಂದ 60 ವರ್ಷದವರು ಪ್ರತಿ ದಿನ ಕನಿಷ್ಠ 2.8 ಕಿ.ಮೀ ನಡೆಯಬೇಕು
60 ವರ್ಷಗಳು ಮತ್ತು ಅದಕ್ಕಿಂತಲೂ ಹೆಚ್ಚು ವಯಸ್ಸಾದವರು ಪ್ರತಿ ದಿನ ಕನಿಷ್ಠ 2.5 ಕಿ.ಮೀ ನಡೆಯಬೇಕು.


ಒಂದು ಸಮೀಕ್ಷೆ ಪ್ರಕಾರ ಯಾರು ಪ್ರತಿ ವಾರ ಕನಿಷ್ಠ 2 ಗಂಟೆ ಯಾರು ನಡೆಯುತ್ತಾರೋ, ಆತ ಶೇ.40ಕ್ಕಿಂತಲೂ ಹೆಚ್ಚಿನವರಿಗಿಂತ ಆರೋಗ್ಯವಾಗಿ ಮತ್ತು ಕಾಯಿಲೆ ಬರದಂತೆ ಇರುತ್ತಾನೆ ಎಂಬ ವರದಿ ಇದೆ. ನಿತ್ಯ ವಾಕಿಂಗ್ ಮಾಡುವುದರಿಂದ ಕೊಬ್ಬು ಕರಗುತ್ತದೆ. ನಮ್ಮ ರಕ್ತದ ಒತ್ತಡ ಸಹ ನಿಯಂತ್ರಣದಲ್ಲಿರುತ್ತದೆ. ನಿತ್ಯ ನಡೆದಾಡುವುದರಿಂದ ಮಧುಮೇಹ ಬಾರದಂತೆ ಇರುತ್ತದೆ. ನಿತ್ಯ ವಾಕಿಂಗ್ ಮತ್ತು ವ್ಯಾಯಾಮ ಮಾಡಿದರೆ ಹಾರ್ಟ್ ಅಟ್ಯಾಕ್‌ ನಂತಹವು ಅಷ್ಟಾಗಿ ಬರುವುದಿಲ್ಲ ನಿಮ್ಮ_ನಡೆ ನಡಿಗೆ ಕಡೆ-ಇರಲಿ ಇದು ನಿಮ್ಮ ಸುದ್ದಿ ಸಂತೆಯ ವೇಬ್ ನ್ಯೂಸ್ ನ ಕಾಳಜಿ ಕಳಕಳಿ. ಇನ್ನಾದರೂ ವಾರಕ್ಕೊಮ್ಮೆಯಾದ್ರೂ ದಯಮಾಡಿ ಚಪ್ಪಲಿ ಇಲ್ಲದೇ ನಡಿಯೋದನ್ನು ಪ್ರಯತ್ನ ಮಾಡಿ ಆರೋಗ್ಯದತ್ತ ಗಮನ ಕೊಡಿ .


Google News

 

 

WhatsApp Group Join Now
Telegram Group Join Now
Suddi Sante Desk