This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

Health & Fitness

ಜೋಳದ ರೊಟ್ಟಿ ತಿನ್ನೋದ್ರಿಂದ ಏನೆಲ್ಲಾ ಲಾಭವಿದೆ ಗೊತ್ತಾ – ಯಾವುದೇ ಏನು ಮಿಶ್ರಣವಿಲ್ಲದ ರುಚಿ ರುಚಿಯಾದ ಜೋಳದ ರೊಟ್ಟಿ ಕುರಿತು ಒಂದು ವಿಶೇಷ ವರದಿ


ಬೆಂಗಳೂರು

 

ಬದಲಾದ ಜನಜೀವನ ತಿಂಡಿ ತಿನಿಸುಗಳ ನಡುವೆ ಎಷ್ಟೋ ಬಾಯಿ ಚಪ್ಪರಿಸುವ ತಿಂಡಿ ತಿನಿಸುಗಳು ಬಂದರು ಕೂಡಾ ಇನ್ನೂ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಗಟ್ಟಿಯಾಗಿ ಉಳಿದುಕೊಂ ಡಿದ್ದು ಜನ ಮಾನಸದಲ್ಲಿ ಅಚ್ಚಳಿಯದೇ ಜನಪ್ರಿಯವಾಗಿ ಬೇಡಿಕೆಯನ್ನು ಪಡೆದುಕೊಂಡು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದ್ದು ಇದಕ್ಕೆ ಸಧ್ಯ ಇರುವ ಬೇಡಿಕೆಯೆ ಸಾಕ್ಷಿಯಾಗಿದೆ.

 

ಹೌದು ಸಧ್ಯ ಬಹುತೇಕ ಜನರಿಗೆ ಗೋಧಿ ಹಿಟ್ಟಿನಿಂದ ಮಾಡಿದ ಪೂರಿ, ಚಪಾತಿ, ಪರೋಟ ಇವುಗಳೊಂದಿಗೆ ಉತ್ತರ ಭಾರತದ ವೆರೈಟಿ ವೆರೈಟಿ ತಿಂಡಿ ತಿನಿಸುಗಳು ಗೊತ್ತಿರುತ್ತವೆ.ಇನ್ನೂ ಇವುಗಳ ನಡುವೆ ಬಗೆ ಬಗೆಯ ವೆಜ್ ಮತ್ತು ನಾನ್ ವೆಜ್ ಗಳ ಊಟಗಳ ನಡುವೆಯೂ ಕೂಡಾ ಇನ್ನೂ ಜೋಳದ ರೊಟ್ಟಿ ಗಟ್ಟಿಯಾಗಿ ಉಳಿದುಕೊಂಡು ಈಗಲೂ ಕೂಡಾ ತನ್ನದೇ ಯಾದ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎನ್ನೊದಕ್ಕೆ ಸಧ್ಯ ಇದಕ್ಕೆ ಇರುವ ಬೇಡಿಕೆಯೇ ಸಾಕ್ಷಿಯಾಗಿದ್ದು ಇನ್ನೂ ಇವುಗಳನ್ನು ಹೊರತುಪ ಡಿಸಿ ಕೆಲವು ಸ್ವಾದಿಷ್ಟ ರೊಟ್ಟಿಗಳಿವೆ.ಅದುವೇ ಜೋಳದ ರೊಟ್ಟಿ ಕಡಿಮೆ ಉರಿಯಲ್ಲಿ ಸುಟ್ಟು ಮಾಡಲಾಗುವ ಈ ರೊಟ್ಟಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 

ಪ್ರತಿದಿನ ಇದನ್ನು ಸೇವಿಸಲು ಸಾಧ್ಯವಾಗದಿದ್ದರೆ ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿಯಾದರೂ ಆಹಾರದಲ್ಲಿ ಜೋಳದ ರೊಟ್ಟಿ ಇದ್ದರೆ ಆರೋಗ್ಯ ಕೂಡ ನಿಮ್ಮ ಜೊತೆಯಲ್ಲಿ ರುತ್ತದೆ ಎನ್ನೊದು ವೈದ್ಯರು ಸಧ್ಯ ಹೇಳುತ್ತಿರುವ ಮಾತುಗಳು ಜೋಳದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಅತ್ಯಧಿಕವಾಗಿದೆ.

 

ಆದ್ದರಿಂದ ಇದರಿಂದ ಮಾಡಿದ ಆಹಾರಗಳನ್ನು ತಿಂದ ತಕ್ಷಣ ದೇಹಕ್ಕೆ ಶಕ್ತಿ ಬರುತ್ತದೆ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದರೂ ಹೊಟ್ಟೆ ತುಂಬುತ್ತದೆ. ಇದರಲ್ಲಿರುವ ಅಮಿನೋ ಆಮ್ಲ ದೇಹಕ್ಕೆ ಹೆಚ್ಚು ಪ್ರೋಟೀನ್ ಅನ್ನು ಒದಗಿಸುತ್ತದೆ. ಜೋಳದಲ್ಲಿ ನಾರಿನಂಶವು ಅಧಿಕವಾಗಿದೆ.

 

ಆದ್ದರಿಂದ ಇದರಿಂದ ಮಾಡಲಾಗುವ ಎಲ್ಲಾ ಆಹಾರಗಳು ಬೇಗನೆ ಜೀರ್ಣವಾಗುತ್ತವೆ. ಗೋಧಿಯಿಂದ ಮಾಡಿದ ತಿನಿಸುಗಳಿಗಿಂತ ಜೋಳದಿಂದ ಮಾಡಿದ ತಿನಿಸುಗಳು ತುಂಬಾ ಸುಲಭವಾಗಿ ಮತ್ತು ಬೇಗನೆ ಜೀರ್ಣವಾಗುತ್ತದೆ.

 

ಮಲಬದ್ಧತೆಯ ಸಮಸ್ಯೆ ಇರುವವರು ಪ್ರತಿದಿನ ಜೋಳದ ರೊಟ್ಟಿಯನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾ ಒಳ್ಳೆಯದು ಇದರಲ್ಲಿ ರುವ ಪೌಷ್ಟಿಕಾಂಶಗಳು ಮೂತ್ರಕೋಶದಲ್ಲಿ ಹರಳು ಕಟ್ಟಿಕೊಳ್ಳುವ ಸಮಸ್ಯೆ ಬಾರದಂತೆ ತಡೆಯುತ್ತದೆ ಜೋಳದಲ್ಲಿರುವ ನಿಯಾಸಿನ್ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಗೊಳಿಸುತ್ತದೆ ಹಾಗೂ ಇದರಲ್ಲಿರುವ ಪೈಟೋ ಪೌಷ್ಟಿಕಾಂಶ ಹೃದಯದ ತೊಂದರೆಗ ಳನ್ನು ದೂರವಿಡುತ್ತದೆ ಇದರಲ್ಲಿರುವ ಪೊಟ್ಯಾ ಷಿಯಂ,ಮೆಗ್ನೀಷಿಯಂ ಮತ್ತು ಖನಿಜಾಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ರೊಟ್ಟಿಯನ್ನು ಬೆಂಕಿಯಲ್ಲಿ ಸುಟ್ಟು ಮಾಡುವ ಕಾರಣ ಇದರಲ್ಲಿ ಕಬ್ಬಿಣಾಂಶವು ಹೆಚ್ಚಿರುತ್ತದೆ.

 

ಆದ್ದರಿಂದ ರಕ್ತಹೀನತೆಯಿಂದ ಬಳಲುವವರಿಗೆ ಇದು ಉತ್ತಮ ಮಹಿಳೆಯರು ಋತುಬಂಧ ಸಮಯಕ್ಕಿಂತ ಮೊದಲು ಜೋಳದ ರೊಟ್ಟಿ ಅಥವಾ ಅದರಿಂದ ಮಾಡಿದ ಆಹಾರಗಳನ್ನು ಸೇವಿಸಿದರೆ ಹಾರ್ಮೋನ್ ಗಳ ಅಸಮತೋಲ ನವನ್ನು ತಡೆಯಬಹುದು ಜೋಳದಿಂದ ಮಾಡಿದ ಆಹಾರಗಳನ್ನು ಸೇವಿಸಿದರೆ ಸ್ತನ ಕ್ಯಾನ್ಸರ್ ಕೂಡ ತಡೆಗಟ್ಟಬಹುದು ಎಂದು ಕೆಲವು ಅಧ್ಯಯನ ಗಳು ಹೇಳಿವೆ

 

ಜೋಳವನ್ನು ಸ್ವಚ್ಚಗೊಳಿಸಿ ಅದರಲ್ಲಿ ಒಂದಿಷ್ಟು ಅಕ್ಕಿಯನ್ನು ಬೆರೆಸಿ ಗಿರಣಿಗೆ ಹಾಕಿಸಿ ನಂತರ ಸಾಣಿಗೆಗೆ ಹಿಡಿದರೆ ಸ್ವಚ್ಚಂದ ಹಿಟ್ಟು ಬರುತ್ತದೆ ಒಲೆಯ ಮೇಲೆ ಬಿಸಿ ನೀರನ್ನು ಕಾಯಿಸಿ ಜೋಳದ ಹಿಟ್ಟಿನಲ್ಲಿ ಹಾಕಿ ಕಲಕಿ ನಂತರ ಅದನ್ನು ಉಳ್ಳೇಯನ್ನಾಗಿ ಮಾಡಿ ತಟ್ಟಿದಾಗ ಜೋಳದ ರೊಟ್ಟಿ ಸಿದ್ದವಾಗುತ್ತವೆ.

 

ಒಲೆಯ ಮೇಲೆ ಅದರಲ್ಲೂ ಕಟ್ಟಿಗೆಯ ಒಲೆಯ ಮೇಲೆ ಬೇಯಿಸಿದರೆ ತುಂಬಾ ರುಚಿ ರುಚಿಯಾಗಿ ರೊಟ್ಟಿಗಳು ಆಗುತ್ತವೆ ಇದರಲ್ಲಿ ನಮಗೆ ಇಷ್ಟ ವಾದ ಪಲ್ಯವನ್ನು ಹಚ್ಚಿಕೊಂಡು ಇಲ್ಲವೇ ಕೆಂಪ ಕಾರ ತುಪ್ಪ ಇಲ್ಲವೇ ಎಣ್ಣೆ ಹಾಕಿಕೊಂಡು ತಿಂದ ರಂತೂ ಅದರ ರುಚಿಯೇ ರುಚಿ ಅದನ್ನು ಸವಿದವರಿಗೆ ಗೊತ್ತಾಗುತ್ತದೆ

 

ಯಾವುದೇ ಮಸಾಲೆ ಯಾವುದೇ ಮಿಶ್ರಣ ಇಲ್ಲದೇ ಯಾವುದೇ ಎಣ್ಣೆ ಯಿಲ್ಲದೇ ಶುದ್ದ ತಾಜಾ ಆರೋಗ್ಯಕ್ಕೆ ಒಳ್ಳೇಯದಾಗುವ ಈ ಒಂದು ಜೋಳದ ರೊಟ್ಟಿ ಆರೋಗ್ಯಕ್ಕೆ ತುಂಬಾ ಒಳ್ಳೇ ಯದಾಗಿದ್ದು ಇದನ್ನು ಪ್ರತಿ ದಿನ ತಿಂದರೆ ಯಾವುದೇ ಸಮಸ್ಯೆ ಇಲ್ಲ ಇನ್ನೂ ಇದನ್ನು ತಿನ್ನದಿರುವವರು ಕೂಡಾ ಒಮ್ಮೆ ತಿಂದು ನೋಡಿ ಇದರ ರುಚಿ ಇದರ ಮಹತ್ವ ಗೊತ್ತಾಗುತ್ತದೆ

 

ಜೋಳದ ರೊಟ್ಟಿಯಲ್ಲಿ ನಾಲ್ಕೈದು ವೆರೈಟಿ ವೆರೈಟಿ ರೊಟ್ಟಿಗಳನ್ನು ಮಾಡಬಹುದು ಸಜ್ಜಿ ರೊಟ್ಟಿ,ರಾಗಿ ರೊಟ್ಟಿ,ಜೋಳದ ರೊಟ್ಟಿ,ಗೋವಿನ ಜೋಳದ ರೊಟ್ಟಿ ಹೀಗೆ ವೆರೈಟಿ ರೊಟ್ಟಿಗಳಿದ್ದು ಬದಲಾದ ಆಹಾರ ಪದ್ದತಿ ವ್ಯವಸ್ಥೆಯ ನಡುವೆ ಈಗಲೂ ಕೂಡಾ ಜೋಳದ ರೊಟ್ಟಿ ತನ್ನದೇ ಯಾದ ಗಟ್ಟಿಯನ್ನು ಉಳಿಸಿಕೊಂಡಿದ್ದು ಇದಕ್ಕೆ ಸಧ್ಯ ಇರುವ ಬೇಡಿಕೆಯೇ ಸಾಕ್ಷಿಯಾಗಿದೆ,


Suddi Sante Desk

Leave a Reply