This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

Sports News

ಸರ್ಕಾರಿ ಶಾಲೆಗಳ ಮಕ್ಕಳ ಶೂ,ಸಾಕ್ಸ್ ಖರೀದಿಸಲು ಷರತ್ತು ವಿಧಿಸಿದ ಸರ್ಕಾರ – ಖರೀದಿಸಲು ಏನೇನು ಷರತ್ತುಗಳಿವೆ ಗೊತ್ತಾ…..

WhatsApp Group Join Now
Telegram Group Join Now

ಬೆಂಗಳೂರು

ಸರಕಾರಿ ಶಾಲೆಗಳ ಮಕ್ಕಳಿಗೆ ಶೂ,ಸಾಕ್ಸ್‌ ಅಥವಾ ಸ್ಯಾಂಡಲ್ಸ್‌ ಖರೀದಿಗೆ ಕೆಲವು ಷರತ್ತು ವಿಧಿಸಲಾಗಿದೆ ಹೌದು ಹಣ ಬಿಡುಗಡೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಇವುಗಳನ್ನು ಖರೀದಿ ಮಾಡಲು ಕೆಲವೊಂದಿಷ್ಟು ಷರತ್ತು ವಿಧಿಸಿದೆ ಎಸ್‌ಡಿಎಂಸಿ ಅಧ್ಯಕ್ಷರು ಸಮಿತಿ ಅಧ್ಯಕ್ಷರಾಗಿ ಶಾಲಾ ಮುಖ್ಯೋಪಾಧ್ಯಾಯ ಸದಸ್ಯ ಕಾರ್ಯದರ್ಶಿ ಎಸ್‌ಡಿಎಂಸಿ ನಾಮನಿರ್ದೇಶಿತ ಮೂವರು ಸದಸ್ಯರ (ಇಬ್ಬರು ಮಹಿಳೆಯರು ಕಡ್ಡಾಯ)ಸಮಿತಿ ಮೂಲಕವೇ ಶಾಲೆಗಳಿಗೆ ಶೂ ಮತ್ತು ಸಾಕ್ಸ್‌ ಖರೀದಿಸಿ ವಿತರಿಸಲು ಸೂಚಿಸಲಾಗಿದೆ.

ಶೂ,ಸಾಕ್ಸ್‌ ಅಥವಾ ಸ್ಯಾಂಡಲ್‌ ಖರೀದಿಗೆ 1ರಿಂದ 5ನೇ ತರಗತಿ ವರೆಗಿನ ಪ್ರತಿ ವಿದ್ಯಾರ್ಥಿ 265 ರೂ,6ರಿಂದ 8ನೇ ತರಗತಿ ವರೆಗೆ 295ರೂ,9ರಿಂದ 10 ತರಗತಿ ವಿದ್ಯಾರ್ಥಿ ಗಳಿಗೆ 325ರೂ ನಿಗದಿಪಡಿಸಲಾಗಿದೆ.ಒಂದು ವೇಳೆ ದಾನಿ ಗಳು ಖಾಸಗಿ ವ್ಯಕ್ತಿಗಳು ಹೆಚ್ಚುವರಿ ಹಣ ನೀಡಿದಲ್ಲಿ ಅದನ್ನು ಬಳಸಿಕೊಂಡು ಇನ್ನಷ್ಟು ಉತ್ತಮ ಗುಣಮಟ್ಟದ ಶೂಗಳನ್ನು ಖರೀದಿಸಲು ಆದೇಶಿಸಲಾಗಿದೆ.ಯಾವುದೇ ಕಾರಣಕ್ಕೆ ಖರೀದಿ ಪ್ರಕ್ರಿಯೆ ವಿಳಂಬಗೊಳಿಸದಂತೆ ತಿಳಿಸಲಾಗಿದೆ.ಒಂದು ಜೋಡಿ ಕಪ್ಪು ಬಣ್ಣ ಶೂ ಜೊತೆಗೆ ಬಿಳಿ ಬಣ್ಣದ ಸಾಕ್ಸ್‌ ವಿತರಿಸಬೇಕು.ಜೊತೆಗೆ ಸ್ಥಳೀಯ ವಾತಾವರಣವನ್ನು ಗಮನಿಸಿ ಸ್ಥಳೀಯ ಅಗತ್ಯ ಪರಿಗಣಿಸಿ ಶೂ ಖರೀದಿಸಬೇಕು ಎಂದು ಸೂಚನೆ ನೀಡಲಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk