ಬೆಂಗಳೂರು –
ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಆರಂಭ ಮಾಡಿರುವ ಭಾರತ ಐಕ್ಯತಾ ಯಾತ್ರೆ ಕುರಿತು ಚರ್ಚೆ ಮಾಡಲು ಮಾಜಿ ಸಚಿವ ಸಂತೋಷ್ ಲಾಡ್ ಕಲಘಟಗಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯನ್ನು ಆಹ್ವಾನ ಮಾಡಿದ್ದಾರೆ.ಭಾರತ ಐಕ್ಯತೆ ಯಾತ್ರೆ ಕುರಿತು ಬ್ಲಾಕ್ ಕಾಂಗ್ರೆಸ್ ಪಕ್ಷದ ಈ ಒಂದು ಸಭೆಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಭಾರತ ಐಕ್ಯತಾ ಯಾತ್ರೆ ಕುರಿತು ಮಹತ್ವದ ಚರ್ಚೆಯನ್ನು ಮಾಡಲಿದ್ದಾರೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು, ಯುವ ನಾಯಕರಾದ ರಾಹುಲ್ ಗಾಂಧಿ ಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಯ ಪೂರ್ವಭಾವಿ ಸಭೆಯ ಕುರಿತು ಈ ಒಂದು ಸಭೆಯನ್ನು ಸಂತೋಷ್ ಲಾಡ್ ಕರೆದಿದ್ದಾರೆ
ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೂ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಯ ಅಂಗವಾಗಿ ಬೆಳಿಗ್ಗೆ 12-30 ಗಂಟೆಗೆ ಕಲಘಟಗಿ ಬ್ಲಾಕ್ ನ ವ್ಯಾಪ್ತಿಯ ಮಡಕಿಹೊನ್ನಳ್ಳಿಯಲ್ಲಿರುವ ಸಂತೋಷ್ ಲಾಡ್ ರವರ ಜನಸಂಪರ್ಕ ಕೇಂದ್ರ ದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂ ಡಿದ್ದು ಸದರಿ ಕಾರ್ಯಕ್ರಮಕ್ಕೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯ ಉಪಾಧ್ಯಕ್ಷರಾದ ಸಂತೋಷ್ ಎಸ್ ಲಾಡ್ ಅವರ ನೇತೃತ್ವದಲ್ಲಿ ಈ ಒಂದು ಸಭೆ ನಡೆಯಲಿದೆ