ಹುಬ್ಬಳ್ಳಿ –
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡುತ್ತಿದ್ದಂತೆ ಇತ್ತ ಈ ಒಂದು ಪಾಲಿಕೆಯ ಆದೇಶವನ್ನು ಪ್ರಶ್ನೆ ಮಾಡಿ ಹುಬ್ಬಳ್ಳಿಯ ಸಾಧಿಕ್ ಗುಡ್ ಮಾಲ್ ಹೈಕೊರ್ಟ್ ಮೆಟ್ಟಿಲೇರಿದ್ದಾರೆ.ಹೌದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಪಾಲಿಕೆ ಆದೇಶ ವನ್ನು ಪ್ರಶ್ನೆ ಮಾಡಿ.
ಈದ್ಗಾ ಮೈದಾನದಲ್ಲಿ ಮೂರು ದಿನ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಿದ್ದ ಪಾಲಿಕೆ.ಪರ ವಿರೋಧ ಚರ್ಚೆಯ ನಡುವೆ ಸದನ ಸಮೀತಿ ರಚಿಸಿದ್ದ ಪಾಲಿಕೆ.ಸಮಿತಿ ವರದಿ ಆಧರಿಸಿ ಗಣೇಶ ಪ್ರತಿಷ್ಟಾಪನೆಗೆ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಅವಕಾಶ ನೀಡಿದ್ದರು. ನಿನ್ನೇಯಷ್ಟೇ ರಾತ್ರಿಯಷ್ಟೆ ಪರವಾನಗಿ ನೀಡಿದ್ದ ಪಾಲಿಕೆ
ಸಧ್ಯ ನ್ಯಾಯಾಲಯದ ಮೆಟ್ಟಿಲೇರಿದೆ ಈ ಒಂದು ಪ್ರಕರಣ. ಸದನ ಸಮಿತಿ ವರದಿ ಮತ್ತು ಪಾಲಿಕೆಯ ಆದೇಶ ಪ್ರಶ್ನಿಸಿ ದಾವೆಯನ್ನು ಹೂಡಲಾಗಿದೆ.ಮುಸ್ಲಿಂ ಮುಖಂಡ ಸಾಧಿಕ್ ಗುಡಮಾಲ್ ರಿಂದ ದಾವೆಯನ್ನು ಹಾಕಲಾಗಿದ್ದು ಇಂದು ಅರ್ಜಿ ವಿಚಾರಣೆ ನಡೆಯಲಿದೆ.