This is the title of the web page
This is the title of the web page

Live Stream

[ytplayer id=’1198′]

January 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಗದಗ

ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಸರ್ಕಾರಿ ಶಾಲೆ – ಗದಗ ಗ್ರಾಮೀಣ ಶಾಲೆಗೆ ಒಲಿದು ಬಂತು ಪ್ರಶಸ್ತಿ…..ಸಾರ್ಥಕವಾಯಿತು ಶಿಕ್ಷಕರ ಪರಿಶ್ರಮ…..

ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಸರ್ಕಾರಿ ಶಾಲೆ – ಗದಗ ಗ್ರಾಮೀಣ ಶಾಲೆಗೆ ಒಲಿದು ಬಂತು ಪ್ರಶಸ್ತಿ…..ಸಾರ್ಥಕವಾಯಿತು ಶಿಕ್ಷಕರ ಪರಿಶ್ರಮ…..
WhatsApp Group Join Now
Telegram Group Join Now

ಗದಗ

ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಸರ್ಕಾರಿ ಶಾಲೆ
ಜಿಲ್ಲಾಮಟ್ಟದ ಪ್ರಶಸ್ತಿ ಪಡೆದ ಗದಗ ಜಿಲ್ಲೆಯ ಸರ್ಕಾರಿ ಶಾಲೆ ಹೌದು ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ನರೇಗಲ್ಲದಲ್ಲಿರುವ ಸರಕಾರಿ ಮಾದರಿ ಕೇಂದ್ರ ಹೆಣ್ಣು ಮಕ್ಕಳ ಶಾಲೆ ಇದಕ್ಕೆ ಅಪವಾದವಾಗಿದ್ದು, ತನ್ನ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಈಗ ಎಲ್ಲರ ಗಮನ ಸೆಳೆದಿದೆ.

ಕೆಲವೇ ಕೆಲವು ವರ್ಷಗಳ ಕೆಳಗೆ ಈ ಶಾಲೆಯಲ್ಲಿ ದಾಖಲಾತಿ ಕೊರತೆ ಇತ್ತು.ಆದರೆ ಈಗಿರುವ ಸಿಬ್ಬಂದಿಯ ಸತತ ಪ್ರಯತ್ನ, ಪ್ರಾಮಾಣಿಕ ಪರಿಶ್ರಮ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ವರ ಸಂಪೂರ್ಣ ಸಹಕಾರದಿಂದ ಶಾಲೆಯಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತ ನಡೆದಿದೆ. ಈಗ ಒಟ್ಟು 302 ಮಕ್ಕಳಿದ್ದಾರೆ. 130 ಬಾಲಕರು, 172 ಬಾಲಿಕೆಯರು ಓದುತ್ತಿದ್ದಾರೆ.

ಈ ಶಾಲೆಯ ವಾತಾವರಣ ಗಮನಿಸಿದರೆ ಇಲ್ಲಿ ಕಲಿಕೆಗೆ ಪೂರಕ ಅನೇಕ ಅಂಶಗಳಿವೆ. ಶಿಕ್ಷಕರಿಗೆ ಮಕ್ಕಳ ಬಗ್ಗೆ, ಅವರ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಇದೆ. ಶಿಕ್ಷಕರು ಹೆಚ್ಚಾಗಿ ವರ್ಗ ಕೋಣೆಯಲ್ಲಿದ್ದು ಪಾಠ ಬೋಧನೆಯಲ್ಲಿರುತ್ತಾರೆ. ಚಟುವಟಿಕೆ ಆಧಾರಿತ ಶಿಕ್ಷಣ ನೀಡುತ್ತಿರುವುದ ರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಮುಖ್ಯ ಶಿಕ್ಷಕರು, ಸಹೋದ್ಯೋಗಿಗಳು ಒಂದೇ ಮನೆಯವರಂತೆ ಕಾರ್ಯ ನಿರ್ವಹಿಸು ತ್ತಿರುವುದು ಇಲ್ಲಿ ಎದ್ದು ಕಾಣುತ್ತದೆ.

ಈ ಶಾಲೆಗೆ ಜಿಲ್ಲಾಮಟ್ಟದ ಉತ್ತಮ ಶಾಲಾ ಪ್ರಶಸ್ತಿಯೂ ದೊರಕಿದೆ.ಶಾಲೆಯ ಪ್ರಗತಿ ಕಂಡು ಟಾಟಾ ಪವರ್‌ ಕಮ್ಯುನಿಟಿ ಡೆವಲಪ್‌ಮೆಂಟ್‌ ಟ್ರಸ್ಟ್‌ನವರು ಈ ಶಾಲೆಯ ಎಲ್ಲ ಕೋಣೆಗಳ ಹೊರಗಿನ ಗೋಡೆಗಳಿಗೆ ಚಂದದ ಚಿತ್ತಾರ ಬಿಡಿಸಿ ಶಾಲೆಯನ್ನು ಇನ್ನಷ್ಟು ಚಂದಗೊಳಿಸಿದ್ದಾರೆ. ಅಂದಾಜು 1ಲಕ್ಷ ರೂ.ಗಳ ವೆಚ್ಚದಲ್ಲಿ ಅವರು ಬಿಡಿಸಿರುವ ಚಿತ್ರಗಳು ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತಿವೆ. ಕೋಣೆ ಒಳಗಡೆ ಅಷ್ಟೇ ಅಲ್ಲ ಹೊರಗಡೆಯೂ ಚಿತ್ರಗಳು ವಿದ್ಯಾರ್ಥಿಗಳಿಗೆ ಕಲಿಸುತ್ತಿವೆ.

ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಗೆ ಗಮನ, ಚಟುವಟಿಕೆ ಆಧಾರಿತ ಶಿಕ್ಷಣ, ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಮಕ್ಕಳಿಗೆ ಸಿಹಿಯೂಟದ ಅಮೃತ ಯೋಜನೆ, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಶ್ರಮಿಸಿರುವುದು ದಾಖಲಾತಿಗೆ ಕಾರಣವಾಗಿದೆ

ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿಶೇಷ ಸಮವಸ್ತ್ರ ವ್ಯವಸ್ಥೆ ಮಾಡಿರುವುದು, ಮಕ್ಕಳಿಗೆ ಕ್ಷೇತ್ರ ಭೇಟಿ ಮಾಡಿಸಿರುವುದು, ಮಕ್ಕಳ ಸಂತೆ, ವಸ್ತು ಪ್ರದರ್ಶನ ಮಾಡಲು ಯೋಜಿಸಿರುವುದು ಶಾಲಾ ದಾಖಲಾತಿ ಹೆಚ್ಚಾಗಲು ಕಾರಣವಾಗಿದೆ.

ಶಾಲೆಯ ಪರಿಸರವು ಶೈಕ್ಷಣಿಕ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳನ್ನೊಳಗೊಂಡಿದೆ. ಚಟುವಟಿಕೆ ಆಧಾರಿತ ಶಿಕ್ಷಣ, ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಕಾಳಜಿ, ಸಮರ್ಪಣಾ ಮನೋಭಾ ವದ ಶಿಕ್ಷಕರು, ಕ್ರಿಯಾಶೀಲ ಮುಖ್ಯೋಪಾಧ್ಯಾ ಯರು ಈ ಬೆಳವಣಿಗೆಗೆ ಕಾರಣರಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಗದಗ…..


Google News

 

 

WhatsApp Group Join Now
Telegram Group Join Now
Suddi Sante Desk