This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಬಿ. ಆರ್. ಅಂಬೇಡ್ಕರ್ ಆಶಯ ದಿಂದಲೇ ಸಮೃದ್ಧ ಭಾರತ ನಿರ್ಮಾಣ – ಹೆಚ್. ಸಿ. ಮಹದೇವಪ್ಪ…..

Join The Telegram Join The WhatsApp

 


ಬೆಂಗಳೂರು –

ಶೂದ್ರ ಸಮಾಜ ಸಂಘಟನಾತ್ಮಕವಾಗಿ ಹೋರಾಟವನ್ನು ನಡೆಸಬೇಕು.ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ಮುಂದಿಟ್ಟುಕೊಂಡು ಕೋಮುವಾದ ಮತ್ತು ಜಾತಿವಾದವನ್ನು ಹಿಮ್ಮೆಟ್ಟಿಸಿ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದರು

ಕರ್ನಾಟಕ ರಾಜ್ಯ ಅತಿ ಹಿಂದುಳಿದ ಜಾಗೃತ ವೇದಿಕೆ ವತಿ ಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಾಭ್ರಿಯವನ್ನು ಪಡೆಯಲು ನಮ್ಮ ದೇಶದ ಬಹುತ್ವ ಮತ್ತು ಸೌಹಾರ್ದತೆ ಯನ್ನು ನಾಶ ಮಾಡಲು ಧರ್ಮಧಾರಿತ ರಾಜಕಾರಣವನ್ನು ಬಿಜೆಪಿ ಮತ್ತು ಅದರ ಪಳೆಯುಳಿಕೆಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದ್ರು.

ಅಂಬೇಡ್ಕರ್ ಜಯಂತಿ ರಾಜಕೀಯ ಹುಟ್ಟುಹಬ್ಬದ ಆಚರಣೆಯಲ್ಲ.ಭಾರತದಲ್ಲಿ ಪ್ರತಿ ಹೋರಾಟಗಳನ್ನು ನಿರೂಪಿಸುವಂತಹ ಅತ್ಯಂತ ಮಹತ್ವದ ದಿನ.21ನೇ ಶತಮಾನ ಸವಾಲಿನಿಂದ ಕೂಡಿದೆ. ಈ ಸವಾಲು,ಭಾಷೆ, ಧರ್ಮ,ಜಾತಿಗೆ ಸೀಮಿತವಾಗಿಲ್ಲ.ಇಡೀ ಸಂವಿಧಾನಕ್ಕೆ ಸವಾಲು ಎಸೆಯುವಂತಹ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ರು.

ಸಂವಿಧಾನದ ಸುಖೀ ರಾಜ್ಯ ಮತ್ತು ಮೌಲ್ಯ,ಧರ್ಮ,ಜಾತಿ, ಪ್ರದೇಶಗಳಲ್ಲಿ ತಾರಾತಮ್ಯ ಮಾಡದೇ ಎಲ್ಲರಿಗೂ ಸಮಾ ನತೆ ಮತ್ತು ಸಮನಾವಕಾಶಗಳನ್ನು ಒದಗಿಸಿಕೊಟ್ಟು ಸಮ ಸಮಾಜವನ್ನು ನಿರ್ಮಾಣ ಮಾಡಬೇಕು.ಸಂವಿಧಾನ ಉಳಿದ್ರೆ ನಾವು ಉಳಿಯುತ್ತೇವೆ.ನಾವು ಉಳಿಯಬೇಕಾದ್ರೆ ಸಂವಿಧಾನ ಉಳಿಯಬೇಕು.ಹೀಗಾಗಿ ನಾವೆಲ್ಲರೂ ಒಗ್ಗಟ್ಟಿ ನಿಂದ ಹೋರಾಟ ನಡೆಸಿ ಸಂವಿಧಾನದ ರಕ್ಷಣೆಯನ್ನು ಮಾಡಬೇಕು ಎಂದು ಹೇಳಿದ್ರು.ಇದೇ ವೇಳೆ,ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಚಂದ್ರ ಶೇಖರ್ ಕಂಬಾರ,ಮಠಾಧೀಶರು,ಧರ್ಮಗುರು ಗಳು,ಸಾಹಿತಿಗಳನ್ನು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಮ್.ಸಿ. ವೇಣುಗೋಪಾಲ್ ಅವರು ಸನ್ಮಾನಿಸಿದ್ರು.

ಈ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಚಂದ್ರ ಶೇಖರ ಕಂಬಾರ, ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಮ್. ಸಿ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಖಜಾಂಚಿ ಮಂಜುನಾಥ್, ಪ್ರಜಾವಾಣಿ ದಿನ ಪತ್ರಿಕೆಯ ಸಂಪಾದಕರಾದ ರವೀಂದ್ರ ಭಟ್,ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಮಠಾಧೀಶರು, ಧರ್ಮಗು ರುಗಳು,ಸಾಹಿತಿಗಳು, ವಕೀಲರು,ಹಿಂದುಳಿದ ಸಮುದಾ ಯಗಳ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಬೆಂಗಳೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನಟರಾಜ್ ಹುಳಿಯಾರ್ ಅವರು ಉಪನ್ಯಾಸ ನೀಡಿದ್ರು.


Join The Telegram Join The WhatsApp

Suddi Sante Desk

Leave a Reply