ಹುಬ್ಬಳ್ಳಿ –
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶನನ್ನು ಪ್ರತಿಷ್ಠಾ ಪನೆ ಮಾಡಲು ಈಗಾಗಲೇ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಅನುಮತಿ ನೀಡಿದ್ದು ಇದನ್ನು ಪ್ರಶ್ನೆ ಮಾಡಿ ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯವರು ಹೈಕೊರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು ಈ ಒಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅನುಮತಿ ನೀಡುವ ಅಧಿಕಾರ ಪಾಲಿಕೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದು ಎಂಬ ಆದೇಶವನ್ನು ನೀಡಿದೆ
ಹೀಗಾಗಿ ಇದರಿಂದಾಗಿ ಗಜಾನನ ಮಹಾಮಂಡಳಿಯ ವರಿಗೆ ಜಯ ಸಿಕ್ಕಂತಾಗಿದ್ದು ಇನ್ನೂ ಇತ್ತ ಈ ಒಂದು ತೀರ್ಪು ಬರುತ್ತಿದ್ದಂತೆ ಗಜಾನನ ಮಹಾಮಂಡಳಿಯವರು ಸಂತಸಗೊಂಡಿದ್ದು ನಾಳೆ ಬೆಳಿಗ್ಗೆ 11 ಗಂಟೆಗೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಿದ್ದು ಇದಕ್ಕಾಗಿ ವಿಶೇಷವಾದ ಗಣೇಶನ ಮೂರ್ತಿಯನ್ನು ಸಿದ್ದ ಮಾಡಿದ್ದು
ಇನ್ನೂ ಮೂರು ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಿದ್ದು ಪೊಲೀಸ್ ಭದ್ರತೆಯನ್ನು ಮಾಡಲಿದ್ದು 10 ಕ್ಕೂ ಹೆಚ್ಚು ಸಿಸಿ ಟಿವಿ ಗಳನ್ನು ಅಳವಡಿಸಲಾಗಿದೆ
ಇದರ ನಡುವೆ ಈ ಒಂದು ಹೈಕೋರ್ಟ್ ಆದೇಶದ ನಂತರ ಚಾಮರಾಜನಗರ ಈದ್ಗಾ ಮೈದಾನದಲ್ಲಿ ಸುಪ್ರೀಂ ಕೋರ್ಟ್ ಗಣೇಶೋತ್ಸವಕ್ಕೆ ಅನುಮತಿ ನೀಡಿಲ್ಲ ಹೀಗಾಗಿ ಇದನ್ನು ಪ್ರಶ್ನೆ ಮಾಡಿ ಮತ್ತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸ ಲಾಗಿತ್ತು ವಾದ ವಿವಾದ ಆಲಿಸಿದ ನಂತರ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಮಾಡಲು ಅನುಮತಿ ನೀಡಿದ್ದಾರೆ.
ಇದರಿಂದಾಗಿ ವಿಜಯೋತ್ಸವ ಆಚರಣೆ ಮಾಡಿದರು.ಈದ್ಗಾ ಮೈದಾನದಲ್ಲಿ ವಿಜಯೋತ್ಸವ ಆಚರಣೆ ಮಾಡಿ ಸಂಭ್ರಮಿ ಸಿದರು.





















