ಬೀದರ್ –
ಪ್ರೌಢಶಾಲಾ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲಾಗು ವುದು ಎಂದು ಬೀದರ್ ದಕ್ಷಿಣ ನೂತನ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭರವಸೆ ನೀಡಿದರು. ನಗರದ ತಮ್ಮ ಗೃಹ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತ ನಾಡಿದರು ಏನೇ ಸಮಸ್ಯೆಗಳಿದ್ದರೂ ಶಿಕ್ಷಕರು ತಮ್ಮ ಗಮನಕ್ಕೆ ತರಬೇಕು ಎಂದರು.
ಶಿಕ್ಷಕರ ಮನವಿ ಮೇರೆಗೆ ಎನ್‍ಪಿಎಸ್ ರದ್ದು ಪಡಿಸಿ ಒಪಿಎಸ್ ಮರು ಜಾರಿಗೊಳಿಸಲು ಹಾಗೂ ಏಳನೇ ವೇತನ ಆಯೋಗದ ಶಿಫಾರಸು ಶೀಘ್ರ ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಪ್ರಮುಖರಾದ ವೀರಭದ್ರಪ್ಪ ಚಟ್ನಳ್ಳಿ, ಬಲವಂತ ರಾವ್ ರಾಠೋಡ್, ಸೂರ್ಯಕಾಂತ ಸಿಂಗೆ, ಅನಿಲಕುಮಾರ ಶೇರಿಕಾರ್, ಶಿವಕುಮಾರ ಸದಾಫುಲೆ, ಗೋವಿಂದ ಪೂಜಾರಿ, ಡಿ. ಝಾಕೀರ್ ಹುಸೇನ್, ವೈಜಿನಾಥ ಸಾಳೆ ಇದ್ದರು.
ಸುದ್ದಿ ಸಂತೆ ನ್ಯೂಸ್ ಬೀದರ್…..























