This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

OPS ಗಾಗಿ ವಿಜಯಪುರ ದಲ್ಲಿ ಗುಡುಗಿದ NPS ನೌಕರರು – ಶಾಂತಾರಾಮ ತೇಜ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಯಾತ್ರೆ ಹೇಗಿತ್ತು ಗೊತ್ತಾ…..ಸಂಕಲ್ಪ ಯಾತ್ರೆ ಮುನ್ನ ರಾಜ್ಯದಲ್ಲಿ ಜೋರಾಗುತ್ತಿದೆ ಸರ್ಕಾರಿ ನೌಕರರ ಕೂಗು…..

WhatsApp Group Join Now
Telegram Group Join Now

ವಿಜಯಪುರ

ಹೌದು ಎನ್.ಪಿ.ಎಸ್. ಇದೊಂದು ಮರಮೇಲಿನಕೇರಿ ದ್ದು, 2006ರ ನಂತರ ನೇಮಕ ಗೊಂಡಿರುವ ರಾಜ್ಯದ ಎಲ್ಲಾ ಸರಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಬದಲು ಹಳೆಯ ಪಿಂಚಣಿ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ರಾಜ್ಯ ಸರಕಾರಿ ಎನ್.ಪಿ.ಎಸ್. ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ತೇಜ ಹೇಳಿದರು.ವಿಜಯಪುರ ನಗರದಲ್ಲಿ ಓ.ಪಿ.ಎಸ್. ಸಂಕಲ್ಪಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿ ಕಾರಿಗಳ ಕಚೇರಿವರೆಗೆ  ಬೃಹತ್ ಪಾದಯಾತ್ರೆ ಮೂಲಕ ಘೋಷಣೆಗಳನ್ನು ಕೂಗುತ್ತ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಸತತ ಏರಿಕೆ, ಕೋವಿಡ ನಂತರ ರಾಷ್ಟ್ರಗಳಲ್ಲಿ ತೋರಿರುವ ಆರ್ಥಿಕ ಬಿಕ್ಕಟ್ಟು,ಜಾಗತಿಕ ಶೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬಿದ್ದಿದೆ. ಇದರಿಂದ ಭಾರತದ ಶೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ವಿವಿಧ ಕಂಪನಿ ಗಳು ಹಾಗೂ ಹೂಡಿಕೆದಾರರು ಶೇರು ಮಾರು ಕಟ್ಟೆಯಿಂದ ಬಂಡವಾಳ ಹಿಂತೆಗೆಯುತ್ತಿದ್ದಾರೆ.

 

 

ಈ ಬೆಳವಣಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ನೌಕರರನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ರಾಜಸ್ಥಾನ, ಛತ್ತಿಸಗಡ, ಜಾರ್ಖಂಡ,ಪಂಜಾಬ ಮಾದರಿಯಲ್ಲಿ ಎನ್.ಪಿ.ಎಸ್. ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರಕಾರಿ ಎನ್.ಪಿ.ಎಸ್. ನೌಕರರ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ನಾಗನ ಗೌಡ ಮಾತನಾಡಿ ರಾಜ್ಯದಲ್ಲಿ 2006ರಲ್ಲಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.ರಾಜ್ಯದ 2.84 ಲಕ್ಷ ನೌಕರರಿಂದ ಕಡಿತ ಮಾಡುವ ವಂತಿಗೆಯನ್ನು ಹಾಗೂ ಸರಕಾರದ ಪಾಲನ್ನು ಫೆನ್ಶನ್ ಫಂಡ್ ರೆಗ್ಯೂ ಲೆಟರಿ  ಅಥಾರಿಟಿ ಮೂಲಕ ಟ್ರಸ್ಟಿ ಬ್ಯಾಂಕಿಗೆ ಜಮೆ ಮಾಡಲಾಗಿದೆ.

2006 ರಿಂದ ನೇಮಕವಾದ ಸರಕಾರಿ ನೌಕರರಿಗೆ ಎನ್.ಪಿ.ಎಸ್. ಯೋಜನೆಯಡಿ ಪಿಂಚಣಿ ನಿಗದಿ ಗೊಳಿಸಲಾಗುತ್ತಿದೆ.ರಾಜ್ಯದ 2.84 ಲಕ್ಷ ರಾಜ್ಯ ಸರಕಾರಿ ನೌಕರರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.ಈ ಯೋಜನೆಯಡಿ ಸರಕಾರಿ ನೌಕರನ ಪಾಲು ಶೇ.10% ಮತ್ತು ಸರಕಾರದ ಪಾಲು ಶೇ.14% ರಷ್ಟು ಕಟಾವು ಮಾಡಿ ಫೆನ್ಶನ್ ಫಂಡ್ ರೆಗ್ಯೂಲೆಟರಿ & ಡೆವಲಪಮೆಂಟ್ ಅಥಾರಿಟಿಯ ನ್ಯಾಷನಲ್ ಸೆಕ್ಯೂರಿಟ್ & ಡೆವಲಪಮೆಂಟ್ ಲಿ. ಪಾವತಿಸಲಾಗಿದೆ. ಈವರೆಗೂ ಸುಮಾರು 17 ಸಾವಿರ ಕೋಟಿ ರೂ.ಪಾವತಿ ಮಾಡಲಾಗಿದೆ.ಆದ ಕಾರಣ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸ ಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.

ರಾಜ್ಯ ಸರಕಾರಿ ಎನ್.ಪಿ.ಎಸ್. ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸಂಗಣ್ಣ ಮಾತನಾಡಿ ವಾಸ್ತವದಲ್ಲಿ 12 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಯಾದ ನೌಕರರು ಮಾಸಿಕ ಪಿಂಚಣಿ 978 ರೂ. ದಿಂದ 2500 ರೂ. ವರೆಗೆ ಪಡೆಯುತ್ತಿದ್ದಾರೆ. ಹೀಗಾಗಿ ಎನ್.ಪಿ.ಎಸ್.ನೌಕರರು ಅಭದ್ರತೆಗೆ ಒಳಗಾಗಿದ್ದು ರಾಜ್ಯದಲ್ಲಿ ಎನ್.ಪಿ.ಎಸ್. ಯೋಜನೆಯನ್ನು ರದ್ದು ಮಾಡಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಎಲ್ಲ ಇಲಾಖೆಗಳ ಸರಕಾರಿ ನೌಕರರು ಭಾಗವಹಿಸಿ ಯಶಸ್ವಿಗೊಳಿಸಿ ದರು.

ಈ ಜಾಥಾದಲ್ಲಿ ಎನ್.ಪಿ.ಎಸ್. ಜಿಲ್ಲಾಧ್ಯಕ್ಷ  ಮಲ್ಲನಗೌಡ  ಹಡಲಗೇರಿ, ಶಂಕರ ಖಂಡೇಕರ, ಚಂದ್ರಶೇಖರ ನುಗ್ಗಲಿ,ಜಗದೀಶ ಬೋಳಸೂರ, ಬಿ.ಟಿ. ಗೌಡರ, ಹಣಮಂತ ಬೂದಿಹಾಳ, ತಿಪ್ಪಣ್ಣ ಜಂಬಗಿ,ಎ.ಬಿ. ನಾಯಕ, ಆನಂದ ಕೆಂಭಾವಿ, ಶಿವಕುಮಾರ ಕಲ್ಲೂರ,ಮಲ್ಲು ಮೇತ್ರಿ,ರವೀಂದ್ರ ಹೂಗಾರ,ಅಶೋಕ ಪತ್ತಾರ,ಮಹಾಂತಗೌಡ ಪಾಟೀಲ,ಗುರುರಾಜ ಕುಲಕರ್ಣಿ, ಚನ್ನಯ್ಯ ಮಠಪತಿ, ನಿಜು ಮೇಲಿನಕೇರಿ ಸೇರಿದಂತೆ ಹಲವರು ಪಾಲ್ಗೊಂಡು ಧ್ವನಿ ಗೂಡಿಸಿದರು.


Google News

 

 

WhatsApp Group Join Now
Telegram Group Join Now
Suddi Sante Desk