This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಆರಂಭಗೊಂಡಿತು ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ – ಹಲವರ ಹೋರಾಟಕ್ಕೆ ಮಣಿದ ರೇಲ್ವೆ ಇಲಾಖೆ ಪ್ರಹ್ಲಾದ್ ಜೋಶಿ ನೀಡಿದರು ಮಾಹಿತಿ…..

WhatsApp Group Join Now
Telegram Group Join Now

ಹುಬ್ಬಳ್ಳಿ

ಆರಂಭಗೊಂಡಿತು ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ – ಹಲವರ ಹೋರಾಟಕ್ಕೆ ಮಣಿದ ರೇಲ್ವೆ ಇಲಾಖೆ ಪ್ರಹ್ಲಾದ್ ಜೋಶಿ ನೀಡಿದರು ಮಾಹಿತಿ ಹೌದು

ತಾಂತ್ರಿಕ ಕಾರಣಗಳಿಂದಾಗಿ ನಿಂತುಕೊಂಡಿದ್ದ ಹುಬ್ಬಳ್ಳಿ ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೇಸ್ ಟ್ರೇನ್ ಮತ್ತೆ ಆರಂಭಗೊಂಡಿದೆ.ಈ ಒಂದು ಮಾಹಿತಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ್ದಾರೆ.ಹುಬ್ಬಳ್ಳಿ – ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಈ ಒಂದು ಸೂಪರ್ ಫಾಸ್ಟ್ ರೈಲು ಸೇವೆಯನ್ನು ನವಂಬರ್ 30 ರಿಂದ ಮತ್ತೆ ಆರಂಭಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ವಿಶೇಷ ಸೂಪರ್​ಫಾಸ್ಟ್ ರೈಲು ಸೇವೆಯನ್ನು ಮತ್ತೆ ಪುನಾರಂಭಿಸಲಾಗುತ್ತಿದೆ ಈ ಒಂದು ವಿಚಾರ ಕುರಿತಂತೆ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ,ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಗುಂ ಟಲಾ,ಸೇರಿದಂತೆ ಹಲವರು ಈ ಒಂದು ವಿಚಾರ ಕುರಿತಂತೆ ಧ್ವನಿ ಎತ್ತಿದ್ದರು ಅಲ್ಲದೇ ರೇಲ್ವೆ ಇಲಾಖೆಗೂ ಮನವಿಯನ್ನು ನೀಡಿದ್ದರು.

ಇದೇಲ್ಲದರ ಪರಿಣಾಮವಾಗಿ ಸಧ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮತ್ತೆ ಈ ಒಂದು ಟ್ರೇನ್ ನನ್ನು ಆರಂಭಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.ರೈಲ್ವೆ ಇಲಾಖೆ ಕಳೆದ ವಾರ ಈ ರೈಲು ಸೇವೆಯನ್ನು ರದ್ದು ಮಾಡಿತ್ತು. ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ರೈಲು ಸೇವೆಯನ್ನು ಪುನಾರಂಭಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಅವರಿಗೆ ಸಾರ್ವಜನಿಕರು ಮತ್ತು ಹಲವು ಸಂಘಟನೆಗಳು ಮನವಿ ಮಾಡಿದ್ದವು.ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07339/07340) ವಿಶೇಷ ರೈಲು ಸೇವೆ ಪುನರಾ ರಂಭವಾಗಿದೆ.

ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಪುನ ರಾರಂಭ ಮಾಡುವ ಕುರಿತು ನಾನು ರಾಜ ಸ್ಥಾನದಿಂದ ಬಂದ ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಪ್ರಸ್ತಾವಿಸಿದ್ದೆ.ಅದರಂತೆ ನನ್ನ ಪ್ರಸ್ತಾವನೆಯನ್ನು ಪರಿಗಣಿಸಿ ತಕ್ಷಣವೇ ರೈಲು ಸೇವೆ ಆರಂಭಿಸಿ ಆದೇಶ ಹೊರಡಿಸಿದ ರೈಲ್ವೆ ಅಧಿಕಾರಿಗಳಿಗೆ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್​ ಅವರಿಗೆ ಧನ್ಯವಾದಗಳು..

ಎಕ್ಸ್‌ಪ್ರೆಸ್ ರೈಲು ಈ ಹಿಂದೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಿತ್ತು ಮತ್ತು ಅದರ ಸೇವೆಗಳ ಪುನರಾರಂಭ ಮಾಡಿರುವುದು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ನವೆಂಬರ್ 30ರಿಂದ ಮತ್ತೆ 07339/40 ಹುಬ್ಬಳ್ಳಿ ಬೆಂಗಳೂರು ನಡುವೆ ಸೂಪರ್‌ಫಾಸ್ಟ್ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಸೇವೆಯನ್ನು ನವೆಂಬರ್ 30ರಿಂದ 2024ರ ಫೆಬ್ರವರಿ 29ರವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk