ಧಾರವಾಡ –
ಖಾಸಗಿ ಶಾಲೆಯ ಭೂ ವಿವಾದ ವಿಚಾರ ಕುರಿತಂತೆ ಧಾರವಾಡದ ಕಲಘಟಗಿಯಲ್ಲಿ ನಡೆದ ಮಕ್ಕಳ ಹೋರಾಟದ ವಿಚಾರ ತಿಳಿದ ಕಲಘಟಗಿ ಶಾಸಕರು ಕೊನೆಗೂ ಸ್ಥಳಕ್ಕೆ ಆಗಮಿಸಿದರು.

ಇಬ್ಬರ ನಡುವಿನ ಭೂವಿವಾದದ ಕುರಿತಂತೆ ಶಾಲೆಯನ್ನು ಬಂದ್ ಮಾಡಲಾಗಿದ್ದು ಇದರಿಂದ ಆಕ್ರೋಶಗೊಂಡ ಮಕ್ಕಳು ಬರೊಬ್ಬರಿ ಏಳು ಘಂಟೆಗಳ ಕಾಲ ಹೋರಾಟವನ್ನು ಮಾಡಿದರು. ಪ್ರತಿಭಟನೆಯ ವಿಚಾರ ತಿಳಿದ ಕಲಘಟಗಿ ಶಾಸಕ ಸಿ ಎಮ್ ನಿಂಬಣ್ಣನವರ ಕೊನಗೂ ಸ್ಥಳಕ್ಕೆ ಆಗಮಿಸಿದರು.

ಸ್ಥಳಕ್ಕೆ ಬಂದ ಸಮಸ್ಯೆಯನ್ನು ಆಲಿಸಬೇಕಾದ ಶಾಸಕರು ಕೆಲವೊತ್ತು ಸ್ಥಳದಲ್ಲಿ ನಿಂತುಕೊಂಡು ಮಾತುಕತೆಯನ್ನು ಮಾಡದೇ ಸ್ಥಳದಿಂದ ತೆರಳಲು ಮುಂದಾದರು. ಬಂದಿದ್ದು ತಡವಾಗಿ ಬಂದರು ಸಮಸ್ಯೆಯನ್ನು ಆಲಿಸದ ಶಾಸಕರ ವರ್ತನೆಯಿಂದ ಮಕ್ಕಳು ಪೊಷಕರು ಯುವಕರು ಶಾಸಕರ ವಿರುದ್ದ ಅಸಮಾಧಾವನ್ನು ವ್ಯಕ್ತಪಡಿಸಿದರು.

ಸಮಸ್ಯೆಯನ್ನು ಆಲಿಸದೇ ಸ್ಥಳದಿಂದ ತೆರಳಿದ ಶಾಸಕರ ವಿರುದ್ದ ಗರಂ ಆದರು. ಹೋಗಿ ಹೋಗಿ ಎಂದರು. ಈಗ ಹೇಂಗ ಹೊಂಟರಲ್ಲ ನಾಳೆ ಚುನಾವಣೆಯಲ್ಲಿ ಓಟು ಕೇಳಾಕ ಬಂದರ ಕೈಯ್ಯಾಗ ತಗೊಂಡು………………………ಎಂದು ಶಾಸಕರ ವಿರುದ್ದ ಮಕ್ಕಳು ಪೊಷಕರು ಮಾತನಾಡುತ್ತಾ ಶಾಸಕರ ವಿರುದ್ದವೇ ಷೋಷಣೆ ಕೂಗಿದರು.
ಬೆಳಿಗ್ಗೆಯಿಂದ ಶಾಲೆಯನ್ನು ಬಂದ್ ಮಾಡಿದ್ದಕ್ಕಾಗಿ ಹೋರಾಟವನ್ನು ಮಾಡುತ್ತಿದ್ದವರು ಬರೋಬ್ಬರಿ 7 ಘಂಟೆಗಳ ಕಾಲ ಪ್ರತಿಭಟನೆ ಮಾಡಿದ್ದಾರೆ. ಆದರೆ ವಿಷಯ ತಿಳಿದು ಬೇಗನೆ ಬಂದು ತಾಳ್ಮೆಯಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದ ಶಾಸಕರು ಅದ್ಯಕೋ ಏನೋ ಬಂದಿದ್ದು ತಡವಾಗಿ ಬಂದರು ಪ್ರತಿಭಟನಾಕಾರರೊಂದಿಗೆ ಚನ್ನಾಗಿ ಮಾತನಾಡದೇ ಮತ್ತೆ ಬೈಯಿಸಿಕೊಂಡು ಹೋದರು.