ಕಲಘಟಗಿ –
ಕಾಲೇಜು ವಿದ್ಯಾರ್ಥಿಗಳನ್ನು ಚುಡಾಯಿಸುತ್ತಿದ್ದಾ ರೆಂದು ಆರೋಪಿಸಿ ಯಾರು ದೂರನ್ನು ನೀಡದಿದ್ದ ರೂ ಕೂಡಾ ತಾವೇ ದೂರು ನೀಡಿ ಕೆಲವು ಯುವಕ ರನ್ನು ಬಂಧನ ಮಾಡಿರುವ ಇನ್ಸ್ಪೆಕ್ಟರ್ ವಿರುದ್ಧ ಜನರು ಸಿಡಿದೆದ್ದಿದ್ದಾರೆ.ನಮ್ಮ ಮಕ್ಕಳನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆಂದು ಆಕ್ರೋಶಗೊಂಡ ಯುವಕರ ಪೊಷಕರು ನಿನ್ನೆಯಷ್ಟೇ ತಡರಾತ್ರಿ ವರೆಗೂ ಕಲಘಟಗಿಯಲ್ಲಿ ಪೊಲೀಸ್ ಠಾಣೆ ಎದುರಿಗೆ ಜಮಾಯಿಸಿ ಪ್ರತಿಭಟನೆ ಮಾಡಿ ಇನ್ಸ್ಪೆಕ್ಟರ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ದರು

ಸಾಮಾನ್ಯವಾಗಿ ಯಾವುದೇ ವಿಚಾರದಲ್ಲಿ ದೂರು ನೀಡಿದಾಗ ಅದನ್ನು ಸ್ವೀಕರಿಸಿ ವಿಚಾರಣೆಗೊಳಪ ಡಿಸಿ ಕ್ರಮವನ್ನು ಕೈಗೊಳ್ಳಬೇಕು. ಆದರೆ ಈ ಒಂದು ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಸ್ವತಃ ತಾವೇ ದೂರನ್ನು ನೀಡಿ ನಂತರ ಅಮಾಯಕ ಯುವಕರನ್ನು ಥಳಿಸಿದ್ದಾರೆಂದು ಆಕ್ರೋಶವನ್ನು ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು

ಥ್ರಿಬಲ್ ರೈಡ್ ಮಾಡುತ್ತ ಕಾಲೇಜು ಯುವತಿಯರ ನ್ನು ಚುಡಾಯಿಸುತ್ತಿದ್ದಾರೆ ಎಂದು ಆರೋಪಿಸಿ, ಅವರನ್ನ ಹಿಗ್ಗಾ ಮುಗ್ಗಾ ಥಳಿಸಿರುವ ಇನ್ಸಪೆಕ್ಟರ್ ಮೇಲೆ ಜನ ಕೆಂಡಾಮಂಡಲವಾಗಿ ಠಾಣೆಗೆ ಮುತ್ತಿಗೆ ಹಾಕುವಷ್ಟು ಪರಿಸ್ಥಿತಿ ಹದಗೆಟ್ಟಿತ್ತು.ಥಳಿತಕ್ಕೊಳ ಗಾದ ಯುವಕರ ಮನೆಯವರು ಮತ್ತು ಸಂಬಂಧಿ ಕರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿ ತಮ್ಮ ಮಕ್ಕಳನ್ನ ಬಿಡುವಂತೆ ಇನ್ಸ್ಪೆಕ್ಟರ್ ಪ್ರಭು ಸುರೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಥ್ರಿಬಲ್ ರೈಡಿಂಗ್ ಮಾಡಿ ಚುಡಾಯಿಸಿದ್ರೆ ಆ ಕ್ಷಣವೇ ಶಿಕ್ಷೆ ನೀಡಬಹುದಿತ್ತು. ಆದ್ರೆ ಏನೂ ತಪ್ಪು ಮಾಡದ ಅಂಗಡಿಯಲ್ಲಿ ಕುಳಿತಿದ್ದ ಅಮಾಯಕ ಯುವಕರನ್ನ ಕರೆದುಕೊಂಡು ಬಂದು ಥಳಿಸಲಾಗಿದೆ ಎಂದು ನೂರಾರು ಜನ ಆರೋಪಿಸಿದ್ದಾರೆ.



ಅಲ್ದೆ, ಅವಾಚ್ಯವಾಗಿಯೂ ಬೈಯ್ದು ನಿಂದನೆ ಮಾಡಲಾಗಿದೆ ಎಂದು ದೂರುತ್ತಿರುವ ಪ್ರತಿಭಟನಾ ಕಾರರು, ಇನ್ಸ್ಪೆಕ್ಟರ ಪ್ರಭು ಸೂರಿನ್ ವಿರುದ್ಧ ಘೋಷಣೆ ಕೂಗಿದ್ರು.ಸಾರ್ವಜನಿಕರು ಬಂದು ಠಾಣೆ ಎದುರಿಗೆ ಹೋರಾಟ ಮಾಡುತ್ತಿದ್ದರೂ

ಅದನ್ನ ತಡೆಯುವಷ್ಟು ಪೊಲೀಸ್ ಸಿಬ್ಬಂದಿಯೂ ಠಾಣೆಯ ಲ್ಲಿ ಇಲ್ಲದ ಸ್ಥಿತಿಯಿರುವುದರಿಂದ, ಗೊಂದಲ ಸೃಷ್ಟಿ ಯಾಯಿತು. ತಡರಾತ್ರಿಯವರೆಗೂ ಪ್ರತಿಭಟನೆ ಮಾಡಿ ನಂತರ ಇಂದು ಬೆಳಿಗ್ಗೆ ಮತ್ತೆ ದೊಡ್ಡ ಪ್ರಮಾ ಣದಲ್ಲಿ ಪ್ರತಿಭಟನೆ ಮುಂದುವರೆಯಲಿದೆ.

ಇನ್ನೂ ಇನ್ಸ್ಪೆಕ್ಟರ್ ವಿರುದ್ದ ಜನರು ಈ ಒಂದು ಘಟನೆ ವಿರುದ್ಧ ಸಿಡಿದೆದ್ದಿದ್ದು ಮೇಲಾಧಿಕಾರಿಗಳು ಕೂಡಾ ಅಸಮಾಧಾನಗೊಂಡಿದ್ದಾರೆ.ಇನ್ನೂ ಇತ್ತ ಇವತ್ತು ಮತ್ತೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಲಿ ದ್ದು ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕು.