ಧರ್ಮಶಾಲಾ –
ಕಿವೀಸ್ ಕಿವಿ ಹಿಡಿದ ಭಾರತ ತಂಡ – ವಿಶ್ವಕಪ್ ನಲ್ಲಿ ಗೆಲುವಿನ ಅಭಿಯಾನ ಮುಂದುವರೆಸಿದ ಭಾರತ ಕ್ರಿಕೇಟ್ ಟೀಮ್
ವಿಶ್ವಕಪ್ ನಲ್ಲಿ ಭಾರತ ಕ್ರಿಕೇಟ್ ತಂಡ ಗೆಲುವಿನ ಅಭಿಯಾನವನ್ನು ಮುಂದುವರೆಸಿದೆ.ಹೌದು ಕಳೆದ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಭಾರತ ಕ್ರಿಕೇಟ್ ತಂಡವು ವಿಶ್ವಕಪ್ ನಲ್ಲಿ ಮತ್ತೊಂದು ತಂಡವನ್ನು ಗೆದ್ದಿದೆ, ಎಸ್ ಕಳೆದ 20 ವರ್ಷದಿಂದ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ದ ಈವರೆಗೆ ಗೆಲುವು ಸಿಕ್ಕಿರಲಿಲ್ಲ.ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟದ ಮೂಲಕ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಿದೆ.
ಟಾಸ್ ಗೆದ್ದ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಮಾಡಲು ಬಿಟ್ಟಿತು ಮೊದಲು ಆರಂಭಿಕ ಎರಟು ವಿಕೆಟ್ ಗಳನ್ನು ಕಬಳಿಸಿ ರನ್ ಗಳಿಗೆ ಕಡಿವಾಣ ಹಾಕಿದರು ಭಾರತದ ಬೌಲರ್ ಗಳು ನಂತರ ಪೈನಲ್ ಆಗಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡ ತಂಡವು ಭಾರತ ತಂಡಕ್ಕೆ 273 ರನ್ ಗಳ ಗುರಿಯನ್ನು ನೀಡಿತು.ಇನ್ನೂ ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಟಗಾರರಿಬ್ಬರು ಒಳ್ಳೆಯ ಸ್ಕೋರ್ ಕಲೆಹಾಕಿದರು.ನಂತರ ವಿರಾಟ್ ಕೊಹ್ಲಿ ಸಿಡಿಸಿದ 95 ರನ್ ಹಾಗೂ ರವೀಂದ್ರ ಜಡೇಜಾ ಸಿಡಿಸಿದ ಅಜೇಯ 39 ರನ್ ನೆರವಿನಿಂದ ಭಾರತ 4 ವಿಕೆಟ್ ಗೆಲುವು ದಾಖಲಿ ಸಿದೆ.
2003ರ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಗೆಲುವಿನ ನಗೆ ಬೀರಿದೆ. 5 ಪಂದ್ಯದಲ್ಲಿ 5ರಲ್ಲೂ ಗೆಲುವು ದಾಖಲಿ ಸಿದ ಭಾರತ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಡರಿಲ್ ಮೆಚೆಲ್ ಸೆಂಚುರಿ ಹಾಗೂ ರಾಚಿನ್ ರವೀಂದ್ರ 75 ರನ್ ಹೋರಾಟಿಂದ ನ್ಯೂಜಿಲೆಂಡ್ 273 ರನ್ ಸಿಡಿಸಿತ್ತು. ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ ಮನ್ ಗಿಲ್ ಉತ್ತಮ ಆರಂಭ ನೀಡಿದರು.
ಸ್ಫೋಟಕ ಆರಂಭದಿಂದ ಭಾರತ ದಿಟ್ಟ ಹೋರಾಟ ನೀಡಿತು.ನಾಯಕ ರೋಹಿತ್ ಶರ್ಮಾ 40 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು.ಮೊದಲ ವಿಕೆಟ್‌ಗೆ ಭಾರತ 71 ರನ್ ಜೊತೆಯಾಟ ನೀಡಿತು. ರೋಹಿತ್ ಶರ್ಮಾ ವಿಕೆಟ್ ಪತನದ ಬೆನ್ನಲ್ಲೇ ಗಿಲ್ ವಿಕೆಟ್ ಕೈಚೆಲ್ಲಿ ದರು. ಗಿಲ್ 26 ರನ್ ಸಿಡಿಸಿ ಔಟಾದರು. ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮೇಲೆ ಜವಾಬ್ದಾರಿ ಹೆಚ್ಚಿತು. ಅಯ್ಯರ್ ಬೌಂಡರಿ ಮೂಲಕವೇ ಅಬ್ಬರಿಸಿದರು.
ಆದರೆ 29 ಎಸೆತದಲ್ಲಿ ಶ್ರೇಯಸ್ ಅಯ್ಯರ್ 33 ರನ್ ಸಿಡಿಸಿ ಔಟಾದರು.ಅಯ್ಯರ್ ಬಳಿ ಕೆಎಲ್ ರಾಹಲ್ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟ ದಿಂದ ಟೀಂ ಇಂಡಿಯಾ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಕೊಹ್ಲಿ ಹಾಗೂ ರಾಹುಲ್ ಜೊತೆಯಾಟದಿಂದ ಭಾರತ ಉತ್ತಮ ಸ್ಥಿತಿ ಕಾಪಾಡಿಕೊಂಡಿತು.ಆದರೆ ರಾಹುಲ್ 27 ರನ್ ಸಿಡಿಸಿ ಔಟಾದರು.ಇದರ ಬೆನ್ನಲ್ಲೇ ಸೂರ್ಯ ಕುಮಾರ್ ಯಾದವ್ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು.
191 ರನ್‌ಗೆ ಭಾರತ ಪ್ರಮುಖ 5 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತು.ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರು. ಇತ್ತ ರವೀಂದ್ರ ಜಡೇಜಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರೆ, ಕೊಹ್ಲಿ ರನ್ ಕುಸಿಯದಂತೆ ನೋಡಿಕೊಂಡರು. ನ್ಯೂಡಿಲೆಂಡ್ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ನಿಂದ ನ್ಯೂಜಿಲೆಂಡ್ ಒತ್ತಡದಲ್ಲಿ ಸಿಲುಕಿತು.
ವಿರಾಟ್ ಕೊಹ್ಲಿ 95 ರನ್ ಸಿಡಿಸಿ 5 ರನ್‌ನಿಂದ ಇಂದಿನ ಪಂದ್ಯದಲ್ಲಿ ಶತಕದಿಂದ ವಂಚಿತರಾ ದರು. ಇತ್ತ ರವೀಂದ್ರ ಜಡೇಜಾ ಅಜೇಯ 39 ರನ್ ಸಿಡಿಸಿದರು ಈ ಮೂಲಕ ಭಾರತ 48 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಅನಿಲಕುಮಾರ ಉಳವನ್ನವರ ವರದಿಗಾರರು ಧರ್ಮಶಾಲಾ