ಧಾರವಾಡ –
ಹೋರಾಟಕ್ಕೆ ಬೆಂಬಲ ಸೂಚಿಸಿದ.ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ಧಾರವಾಡದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಪ್ರಾಣಕೊಟ್ಟೆವು ಪಿಂಚಣಿ ಬಿಡೆವು ಅನಿರ್ಧಿಷ್ಟದವರೆಗಿನ ಮುಷ್ಕರಕ್ಕೆ ಬೆಂಬಲ ನೀಡಿದರು ಇದೇ ವೇಳೆ ಮಾತನಾಡಿದ ಅವರು ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರು ನಮ್ಮ ಸಂಘಟನೆ ಸರಕಾರಿ.ಅನುದಾನಿತ. ಪ್ರಾಥಮಿಕ ಪದವೀ ಧರ ಹಾಗೂ ಪ್ರೌಢ ಶಾಲಾ ಶಿಕ್ಷಕಿಯರನ್ನೊಳಗೊಂಡ ಸಂಘಟನೆಯಾಗಿದ್ದು ಸರಕಾರಿ ಹಾಗೂ ಅನುದಾನಿತ ಎನ್ನುವ ತಾರತಮ್ಯ ಬೇಡ ಎಲ್ಲರೂ ಒಂದೇ ದೋಣಿಯ ಪಯಣಿಗರು.ಸರಕಾರಿ ನೌಕರರಿಗೆ ಸಿಗುವ ಜ್ಯೋತಿ ಸಂಜೀವಿನಿ.ಆರೋಗ್ಯ ವಿಮೆ. ಹಳೆಯ ಪಿಂಚಣಿ ಯೋಜನೆ ಜಾರಿ ಇತರೆ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ಒದಗಿಸಬೇಕೆಂದು ಒತ್ತಾಯಿಸಿದರು
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಜಿ. ಹನುಮಂತಪ್ಪನವರು ನಿವೃತ್ತಿಯಾದ ಮೇಲೆ ಪಿಂಚಣಿ ವಂಚಿತ ನೌಕರರ ಸ್ಥಿತಿಗತಿಗಳ ಬಗ್ಗೆ. ಅವರ ಕಷ್ಟಗಳ ಬಗ್ಗೆ ಮಾತನಾಡಿದರು.ಆನಂದ ಕುಲಕರ್ಣಿ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳಾದ ಶ್ರೀಮತಿ ಗಿರಿಜಾ ಪಾಟೀಲ ಶ್ರೀಮತಿ ಶಶಿಕಲಾ ಪಾಸ್ತೆ ಶ್ರೀಮತಿ.ರಜಿಯಾ ದಿಲಶಾದ ಶ್ರೀಮತಿ ಕೆ. ಡಿ. ಪಾಟೀಲ್ ಇದ್ದರು. ಅನೇಕ ಪದಾಧಿಕಾರಿಗಳು. ಹೋರಾಟದ ಬಗ್ಗೆ ಮಾತನಾಡಿದರು