This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಲಾಕ್‌ಡೌನ್ ನಲ್ಲಿ ಈ ಶಿಕ್ಷಕ ಮಾಡಿದ ಕೆಲಸ ‌ನೋಡಿ ಸಮಯ ವನ್ನು ಹೇಗೆ ಸದ್ಬಳಕೆ ಮಾಡಿ ಕೊಂಡಿದ್ದಾರೆ ಮೆಚ್ಚುವಂತಹ ಕೆಲಸ ಮಾಡಿದ್ದಾರೆ…..

WhatsApp Group Join Now
Telegram Group Join Now

ಮೂಡಲಗಿ –

ಲಾಕ್‌ಡೌನ್ ಇದೆ ಅಂತಾ ಸುಮ್ಮನೆ ತಿಂದು ಉಂಡು ಮನೆಯಲ್ಲಿಯೇ ಇರದೇ ಆ ಒಂದು ಸಮಯದಲ್ಲಿ ಇದ್ದ ಸಮಯವನ್ನು ಉಪಯೋಗ ಮಾಡಿಕೊಂಡು ಇಲ್ಲೊಬ್ಬ ಶಿಕ್ಷಕ ಜನ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ‌.ಹೌದು ಇದಕ್ಕೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಗಣಪತಿ ಉಪ್ಪಾರ ಅವರೇ ಸಾಕ್ಷಿ.ಕೋವಿಡ್ ಲಾಕ್‌ಡೌನ್‌ನ ಸಮಯ ಸದ್ಬಳಕೆ ಮಾಡಿಕೊಂಡು ಶಿಕ್ಷಣ ಇಲಾಖೆಯ ಸಮೂ ಹ ಸಂಪನ್ಮೂಲ ಕೇಂದ್ರದ ಸರ್ಕಾರಿ ಕಟ್ಟಡಕ್ಕೆ ಸ್ವತಃ ಸುಣ್ಣ-ಬಣ್ಣ ಹಚ್ಚಿ ವಿಶೇಷ ಮೆರಗು ನೀಡಿ ಗಮನಸೆ ಳೆದಿದ್ದಾರೆ.

ಕಲ್ಲೋಳಿಯ ಸರ್ಕಾರಿ ಕೇಂದ್ರ ಶಾಲೆಯ ಆವರಣ ದಲ್ಲಿ 2009ರಲ್ಲಿ ನಿರ್ಮಿಸಿರುವ ಸಮೂಹ ಕೇಂದ್ರ ವು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಒಟ್ಟು 30 ಪ್ರಾಥಮಿಕ ಪ್ರೌಢ ಶಾಲೆಗಳ ವ್ಯಾಪ್ತಿ ಹೊಂದಿದೆ. ಸ್ಥಳೀಯರಿಂದ ಸಂಗ್ರಹಿಸಿದ ದೇಣಿಗೆ ಹಾಗೂ ಶಾಲಾ ಶಿಕ್ಷಕರ ಸಹಕಾರದೊಂದಿಗೆ ಕೇಂದ್ರವನ್ನು ಆಕರ್ಷಿಸುವಂತೆ ಮಾಡಿದ್ದು ಈಗ ತುಂಬಾ ವಿಶೇಷ ವಾಗಿ ಕಂಡು ಬರುತ್ತದೆ.ಕಣ್ಮನ ಸೆಳೆಯುತ್ತಿದೆ ಕೇಂದ್ರ ವನ್ನು ಪ್ರವೇಶಿಸುತ್ತಿದ್ದಂತ ವರ್ಲಿ ಚಿತ್ರಕಲೆಯಿಂದ ಚಿತ್ತಾರಗೊಂಡ ಗೋಡೆಗಳು ಆಕರ್ಷಿಸುತ್ತವೆ. ಇದ ರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಳು ಸಮಾಜ ಸುಧಾರಕರು,ವಿಜ್ಞಾನಿಗಳ ಫೋಟೊ ಗಳು ಗಮನಸೆಳೆಯುತ್ತವೆ.

ಇಲ್ಲಿನ ಪುರಾತನ ಸ್ಥಳಗಳ ಚಿತ್ರ, ಪರಿಚಯ ಇರುವ ಮಾಹಿತಿ ಫಲಕ, ಕ್ಲಸ್ಟರ್‌ನಲ್ಲಿನ 30 ಶಾಲೆಗಳ ಸಮ ಮುಖ್ಯ ಕೊಠಡಿಯ ಅಂದ ಇಮ್ಮಡಿಯಾಗಿದೆ. ವಿವಿ ಧ ಪುಸ್ತಕ, ಶೈಕ್ಷಣಿಕ ಮಾಹಿತಿ ಕೈಪಿಡಿಗಳ ಸಂಗ್ರಹದ ಗ್ರಂಥಾಲಯ ಸಹ ಮಾಡಿದ್ದಾರೆ. ಕೇಂದ್ರದ ಪ್ರವೇಶ ದಲ್ಲಿ ವಿವಿಧ ಗಿಡಗಳಿಂದ ಪುಟ್ಟ ಉದ್ಯಾನವನದ ಮಾಡಿದ್ದಾರೆ.ಗ್ರ ಮಾಹಿತಿ ಒಂದೇ ಫಲಕದಲ್ಲಿ ದೊರೆ ಯುವಂತೆ ಒಪ್ಪ ಒರಣವಾಗಿ ಕೇಂದ್ರದಲ್ಲಿ ಸಿದ್ಧಗೊ ಳಿಸಿದ್ದಾರೆ.ಅಲ್ಲಲ್ಲಿ ನುಡಿಗಟ್ಟುಗಳ ಫಲಕಗಳು ಜ್ಞಾನ ವನ್ನು ವೃದ್ಧಿಸುತ್ತವೆ.ಲಾಕ್‌ಡೌನ್‌ ರಜೆ ದಿನಗಳನ್ನು ವ್ಯರ್ಥ ಮಾಡಬಾರದು ಎಂದು ಕೇಂದ್ರದ ಗೋಡೆಗೆ ಒಂದು ವಾರದವರೆಗೆ ನಾನೇ ಸುಣ್ಣ-ಬಣ್ಣ ಹಚ್ಚಿದೆ. ಕಟ್ಟಡದ ಅಂದವನ್ನು ಕಂಡು ಶಿಕ್ಷಕರು ಮತ್ತು ಜನ ರು ಖುಷಿ ಪಡುತ್ತಿದ್ದಾರೆ. ಇದು ನನಗೂ ಖುಷಿ ತಂದಿದೆ ಎಂಬ ಮಾತು ಇವರದು.ಉಪ್ಪಾರ ಅವರು ಈ ಹಿಂದೆ ಕಡ್ಲ್ಯಾಳಮಟ್ಟಿ ಸರ್ಕಾರಿ ಕಿರಿಯ ಪ್ರಾಥ ಮಿಕ ಶಾಲೆಯಲ್ಲಿ ಮಡ್ಡಿ ಬರಡು ನೆಲದಲ್ಲಿ ಗಿಡಗ ಳನ್ನು ಬೆಳೆಸಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ ಪಡೆದಿದ್ದಾರೆ. 2018ರಿಂದ ಸಿಆರ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಒಟ್ಟಾರೆ ಏನೇ ಆಗಲಿ ಇವರ ಕೆಲಸವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk